ಔಬಾಗಲಕೋಟೆ: ಮೈಸೂರು ದಸರಾ (Mysuru Dasara) ಮಹೋತ್ಸವದ ಅಂಗವಾಗಿ ಇಳಕಲ್‌ನ ಸಾಹಸಿ ವೀರಣ್ಣ ಕುಂದರಗಿಮಠ ಅವರು ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ (bike) 24 ಗಂಟೆಗಳಲ್ಲಿ 460 ಕಿಲೋಮೀಟರ್ ಕ್ರಮಿಸಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸೋಮವಾರ (ಅ.19) ಬೆಳಿಗ್ಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಆಶೀರ್ವಾದ ಪಡೆದು ಪ್ರಯಾಣ ಆರಂಭಿಸಿದ ಅವರು, ಹೊಸಪೇಟೆ, ಚಿತ್ರದುರ್ಗ, ತುಮಕೂರು ಹಾಗೂ ಶ್ರೀರಂಗಪಟ್ಟಣ ಮಾರ್ಗವಾಗಿ ಮಂಗಳವಾರ ಬೆಳಿಗ್ಗೆ ಮೈಸೂರು ಚಾಮುಂಡಿ ಬೆಟ್ಟ ತಲುಪಿದರು.
ಅಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ತಮ್ಮ ಸಾಹಸಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದರು. ನಂತರ ಸುತ್ತೂರು ಮಠಕ್ಕೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಈ ಹಿಂದೆ ಹಲವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸಾಹಸ ದಾಖಲೆಗಳನ್ನು ಮಾಡಿರುವ ವೀರಣ್ಣ ಅವರ ವಿಶಿಷ್ಟ ಪ್ರಯತ್ನಕ್ಕೆ ಸಾರ್ವಜನಿಕರು ಹಾಗೂ ಕನ್ನಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪ್ರಯಾಣದ ವೇಳೆ ಕನ್ನಡ ಧ್ವಜ ಹಿಡಿದು ಸಾಗಿದ ವೀರಣ್ಣ, ಕನ್ನಡ ನಾಡು-ನುಡಿಯ ಸಂರಕ್ಷಣೆ, ಪರಿಸರ ಕಾಳಜಿ, ಸಸಿ ನೆಡುವಿಕೆ ಮತ್ತು ಯುವಜನರಲ್ಲಿ ವ್ಯಸನಮುಕ್ತ ಜೀವನದ ಅರಿವು ಮೂಡಿಸುವ ಸಂದೇಶಗಳನ್ನು ಸಾರಿದರು. ಬೈಕ್‌ನಲ್ಲಿ ದಸರಾ ಹಾಗೂ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಫಲಕಗಳನ್ನೂ ಅಳವಡಿಸಿದ್ದರು.


