LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಅ. 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಡಿ. ಕೆ ಶಿವಕುಮಾರ್

Advertisement

ಬೆಂಗಳೂರು : ಅಕ್ಟೋಬರ್ 26 ರಂದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಬೆಳಗಾವಿಯಲ್ಲಿ ನಿಗದಿಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರಣಾಂತರಗಳಿಂದ ಭಾಗವಹಿಸುತ್ತಿಲ್ಲ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಸಭೆಯನ್ನು ಮೊದಲು ನೀವು ಮಾಡಿ, ನಂತರ ನಾವು ಸಭೆ ಮಾಡುತ್ತೇವೆ ಎಂದು ಜೋಶಿಯವರು ಹೇಳಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಕರ್ನಾಟಕದ ಮಾತ್ರವಲ್ಲದೆ ಇಡೀ ದೇಶಕ್ಕೆ ಸಂಬಂಧಿಸಿದ ವಿಚಾರ. ಈ ಕುರಿತು ಕೇಂದ್ರ ಮಟ್ಟದಲ್ಲಿ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು” ಎಂದರು.

“ಅರಣ್ಯ ಭೂಮಿ ವಿವಾದಗಳಿಗೆ ಸಂಬಂಧಪಟ್ಟ ಕೇಂದ್ರ ಸಚಿವರ ಜೊತೆ ಚರ್ಚೆ‌ ನಡೆಸಲಾಗುತ್ತದೆ. ಗೋವಾದಲ್ಲಿ ಚುನಾವಣೆ ಇರುವ ಕಾರಣ ಮಹದಾಯಿ ಕುರಿತು ತೀರ್ಮಾನ ಕೈಗೊಳ್ಳುವುದು ಸ್ವಲ್ಪ ಕಷ್ಟವಾಗಬಹುದು. ತುಂಗಭದ್ರಾ ನೀರಿನ ವಿಚಾರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಪರಸ್ಪರ ಭೇಟಿಯಾಗಿ ಚರ್ಚಿಸಲು ಮನವಿ ಮಾಡಲಾಗಿದೆ.

ಆಂಧ್ರ ಅಥವಾ ದೆಹಲಿಯಲ್ಲಿ ಈ ಭೇಟಿ ನಡೆಸಲಾಗುವುದು. ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ರೈತರಿಂದ ನೀರಿನ ಬೇಡಿಕೆ ವಿಪರೀತವಾಗಿದೆ. ಮಳೆಯಿಲ್ಲದ ಕಾರಣ ಮುಂದಿನ ಕಾರ್ಯತಂತ್ರ ರೂಪಿಸಬೇಕಿದೆ. 

ಬರಗಾಲದ ಕುರಿತು ರಾಜ್ಯದ ಬೇಡಿಕೆಗಳನ್ನು ಸಲ್ಲಿಸಲು ಪ್ರಧಾನಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಈ ವಿಚಾರಗಳ ಚರ್ಚೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ” ಎಂದರು.

ಮತ್ಯಾವ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಕೇಳಿದಾಗ, “ಐಟಿಐ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸಮಯ ಕೋರಲಾಗಿದೆ. ದಸರಾ ಕಾರ್ಯ ನಿಮಿತ್ತ ಅವರಿಗೂ ಬಿಡುವಿಲ್ಲದ ಕಾರಣ, ಸಮಯ ಸಿಕ್ಕ ಕೂಡಲೇ ಈ ಕುರಿತು ಚರ್ಚಿಸಲಾಗುವುದು.

ಪೋಲೆಂಡ್ ಪ್ರಧಾನಿಗಳು ಶುಕ್ರವಾರ ಭೇಟಿ ನೀಡುವ ಕಾರಣಕ್ಕೆ ಇಂದೇ ರಾಜ್ಯಕ್ಕೆ ತೆರಳಲಿದ್ದೇನೆ. ರಾಜ್ಯದ ವಿಚಾರಗಳ ಚರ್ಚೆಗೆ ಮತ್ತೊಂದು ಸೂಕ್ತ ದಿನದಂದು ದೆಹಲಿಗೆ ಭೇಟಿ ನೀಡಲಾಗುವುದು” ಎಂದು ತಿಳಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರಿನಲ್ಲಿ ಹೈಟೆಕ್ ಸಿಮ್ ಬಾಕ್ಸ್ ದಂಧೆ: ಮಹಾರಾಷ್ಟ್ರದ ನಾಲ್ವರು ಅರೆಸ್ಟ್ ಪ್ರೇಮದ ಊರಲಿ' ಟಿಕೆಟ್​​​ಗಾಗಿ ಬಡಿದಾಡಿಕೊಂಡ ಮಹಿಳೆಯರು : ಗಂಟನ್ ತಾಳಿ ಪೀಸ್ ಪೀಸ್ ಜೋ ರೂಟ್ ನೂತನ ದಾಖಲೆ ದಸರಾದಲ್ಲಿ ಸಚಿವರನ್ನ ಎಸ್ಪಿ ತಡೆ ವಿಚಾರ : ಹಿಂದಿನ ಕಾರಣ ಬಯಲುಹ್ಯಾಂಡಲ್‌ರಹಿತ ಬೈಕ್‌ನಲ್ಲಿ 460 ಕಿ.ಮೀ. ಪಯಣ: ಇಳಕಲ್ಲ ವೀರಣ್ಣ ಕುಂದರಗಿ ಮಠ ಸಾಧನೆಹುಬ್ಬಳ್ಳಿಯಲ್ಲಿ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಮಹಿಳೆ ದುರ್ಮರಣಕಿವೀಸ್ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಗೆಲುವು ಮಲ್ಲೂರ ಗ್ರಾಮದಲ್ಲಿ ₹70 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಅವರಿಂದ ಭೂಮಿಪೂಜೆರಸ್ತೆಬದಿಯಲ್ಲಿ ಬೂದುಗುಂಬಳದ ರಾಶಿ : ನಷ್ಟದಲ್ಲಿ ವ್ಯಾಪಾರಸ್ಥರು, ಕಂಗಾಲಾದ ರೈತರು ಅ. 26ರಂದು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಡಿ. ಕೆ ಶಿವಕುಮಾರ್