ಬಳ್ಳಾರಿ : ಬೆಲೆ ಏರಿಕೆ ಮಧ್ಯೆ ಹಾಗೋ ಹೀಗೋ ಜೀವನ ಮಾಡ್ತಿರೋ ಬಳ್ಳಾರಿ ಜನರಿಗೆ ಇದೀಗ ಪೆಟ್ರೋಲ್ ಅಭಾವ ಎದುರಾಗಿದೆ.
ಕಂಪ್ಲಿ ತಾಲೂಕಿ ಭರತ್ .ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಗದೇ ಜನರ ಪರದಾಟ..
ಹೊಸ ಬೈಕ್ ತಂದು ಪೆಟ್ರೋಲ್ ಇಲ್ಲದೇ ಬಂಕ್ ಮುಂದೆ ಪರದಾಡಿದ ಬೈಕ್ ಸವಾರ...
ಬೆಲೆ ಜಾಸ್ತಿಯಾದ್ರೂ ಓಕೆ ಪೆಟ್ರೋಲ್ ಇಲ್ಲದೇ ಹೋದ್ರೇ ಹೇಗೆ ಎಂದು ಬೇಸರ ವ್ಯಕ್ತಪಡಿಸಿದ ಗ್ರಾಹಕ..
ಇನ್ನೂ ಪೆಟ್ರೋಲ್ ಇಲ್ಲದೇ ಎರಡು ಕಿಮೀ ತಳ್ಳಿಕೊಂಡು ಬಂದ ಸವಾರ ಸರ್ಕಾರದ ವಿರುದ್ಧ ಆಕ್ರೋಶ...
ಬಿಸಿಲ ದಗೆಯಲ್ಲಿ ಪೆಟ್ರೋಲ್ ಇಲ್ಲದ ಬೈಕ್ ತಳ್ಳಿಕೊಂಡ ಬಂದ ಗ್ರಾಹಕ..
ಬಂಕ್ ಸಿಬ್ಬಂದಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬೈಕ್ ಸವಾರ
ಇಂದು ಬೆಳಿಗಿನ ಜಾವದಿಂದ ಪೆಟ್ರೋಲ್ ಸ್ಟಾಕ್ ಇಲ್ಲದ ಹಿನ್ನೆಲೆ ಬಂಕ್ ಬಂದ್ ಮಾಡಿರೋ ಸಿಬ್ಬಂದಿ..
ಪೆಟ್ರೋಲ್ ಬಂಕ್ ಮುಂದೆ ಜನರ ಬಂದು ಪೆಟ್ರೋಲ್ ಇಲ್ಲದೇ ನಿರಾಶೆಯಿಂದ ತೆರಳುತ್ತಿದ್ದಾರೆ.
ಇಷ್ಟು ದಿನ ಗ್ಯಾಸ್ ಗಾಗಿ ಪರದಾಡಿದ್ದಾಯ್ತು. ಇದೀಗ ಪೆಟ್ರೋಲ್ ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ..
ಪೆಟ್ರೋಲ್ ಸಿಗದ ಹಿನ್ನೆಲೆ ಸರ್ಕಾರದ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

