ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ) ವತಿಯಿಂದ ಡ್ರೈವರ್ ಕಾಲೋನಿ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಶಿರಸ್ಥೆದಾರ ಸಿದ್ದಾರ್ಥ ಕಾರಂಜಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ನಾಗೇಶ್ವರ್‌ರಾವ್ ಮಾತನಾಡಿ ಡ್ರೈವರ್/ ಆಶ್ರಯ ಕಾಲೋನಿಯ ಉದ್ಯಾನವನದ ಖಾಲಿಜಾಗದಲ್ಲಿ ಸುಮಾರು 15 ರಿಂದ 20 ವರ್ಷಗಳಿಂದ ವಾಸವಿರುವ 40ಕ್ಕೂ ಅಧಿಕ ಕುಟುಂಬಗಳಿಗೆ ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡಿ ಶೀಘ್ರವೇ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಡಿ.ಇ.ವೀರೇಶ, ತಾಲೂಕು ಸಂಚಾಲಕ ರಾಮಾಂಜಿನಿ ಮಾತನಾಡಿ ನಗರದ 18ನೇ ವಾರ್ಡ್, ಡ್ರೈವರ್ ಕಾಲೋನಿ ಮತ್ತು ಆಶ್ರಯ ಕಾಲೋನಿಯ ಸರ್ವೆ. ನಂ.193, 359ಬಿ, 361, 362ಬಿ ಮತ್ತು 365 ರಲ್ಲಿ ಸರಿ ಸುಮಾರು 813 ಆಶ್ರಯ ನಿವೇಶನಗಳಲ್ಲಿ 2003ರಲ್ಲಿ ಅಂದಿನ ಶಾಸಕರಾದ ಎಮ್.ಶಂಕರರೆಡ್ಡಿ ಅವರು ಒಟ್ಟು 303 ಮನೆಗಳನ್ನು ಹಂಚಿಕೆ ಮಾಡಿರುತ್ತಾರೆ. ಇನ್ನುಳಿದ 465 ಖಾಲಿ ನಿವೇಶನಗಳಲ್ಲಿ ಅಂದಿನಿಂದ ಇಂದಿನವರೆಗೂ 23 ವರ್ಷಗಳಿಂದ ಅಂದರೆ ಕಳೆದೆರಡು ದಶಕಗಳಿಂದ ಎಸ್.ಸಿ ಮತ್ತು ಎಸ್.ಟಿ ಜನಾಂಗ ಸೇರಿದಂತೆ ಕಡುಬಡವ ಕುಟುಂಬಗಳಿಗೆ ವಾಸವಾಗಿರುತ್ತಾರೆ.

ವಾಸಿಸುತ್ತಿರುವ ಕುಟುಂಬಗಳಿಗೆ ತಹಶೀಲ್ದಾರರಿಂದ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಬೇಕೆಂದು ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ.
ಸಂಬಂದಿಸಿದ ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದ್ದು, ಒಂದು ವೇಳೆ ಹಕ್ಕುಪತ್ರ ನೀಡಬೇಕು. ವಾಸಿಸಲು ಯೋಗ್ಯವಾದ ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ನೀರು ಸಂಪರ್ಕ ಒದಗಿಸಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಕಛೇರಿ ಮತ್ತು ತಾಲೂಕು ಕಛೇರಿಯ ಮುಂಭಾಗದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ತಿಳಿಸಿದರು. ಇದೇ ವೇಳೆ ಡಿ.ಎಸ್.ಎಸ್ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕರಾದ ಹುಸೇನಪ್ಪ, ಶರಣಪ್ಪ, ತಾಯಪ್ಪ, ಮಾರೆಪ್ಪ ಹಾಗೂ ಸ್ಥಳೀಯ ನಿವಾಸಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.

