ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗುರುವಾರ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಆಜೀವಿಕ ಮಿಷನ್(ಗ್ರಾಮೀಣ) ಯೋಜನೆಯ ಐಇಸಿ ಚಟುವಟಿಕೆಯಡಿ ವಿಬಿಜಿ ರಾಮಜಿ ಯೋಜನೆ ಹಾಗೂ ಜಾಬ್ ಕಾರ್ಡ್ ಮೇಳದ ಕುರಿತು ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಎಮ್ ವಿ ಪಾಟೀಲ ಮಾತನಾಡಿ ದುಡಿಯುವ ಕೈಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ ನಿರಂತರವಾಗಿ ಕೂಲಿ ಕೆಲಸವನ್ನು ನೀಡಿ ಗಂಡು-ಹೆಣ್ಣಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿಯನ್ನು ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಬಳಿಕ ಅಭಿಯಾನದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎ ಬಿ ಬಂಗಾರಿ ಮಾತನಾಡಿ ಕೂಲಿಕಾರರಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ ಆ್ಯಂಡ್ ಆಜೀವಿಕ ಮಿಷನ್ (ಗ್ರಾಮೀಣ) ಯೋಜನೆಯ ಉದ್ದೇಶ ಹಾಗೂ ಉಪಯೋಗ ಬಗ್ಗೆ ತಿಳಿಸಿದರು. ಕೂಲಿ ಮೊತ್ತ 370 ರಿಂದ 382 ರೂ. ಗೆ ಹೆಚ್ಚಿಸಿದ್ದು, ಒಂದು ಕಟುಂಬಕ್ಕೆ ವಾರ್ಷಿಕ ಮಾನವ ದಿನಗಳು 100 ರಿಂದ 125ಗಳಿಗೆ ಹೆಚ್ಚಳವಾಗಿದ್ದು, ಇದರಿಂದ ವಾರ್ಷಿಕ 47750 ರೂಪಾಯಿವರೆಗೆ ಕೂಲಿ ಮೊತ್ತ ಬರುತ್ತದೆ ಆದ್ದರಿಂದ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು. ಮುಂದುವರೆದು ಮಾತನಾಡಿ “ಸೆಪ್ಟೆಂಬರ್ 15ರ ವರೆಗೆ ಜಾಬ್ ಕಾರ್ಡ್ ಮೇಳ” ಆರಂಭವಾಗಿದ್ದು, ಹೊಸ ಉದ್ಯೋಗ ಚೀಟಿ ಹಾಗೂ ಕುಟುಂಬ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು ತಿಳಿಸಿದರು.
ನಂತರ ತಾಲೂಕು ಐಇಸಿ ಸಂಯೋಜಕ ಮಲೀಕಜಾನ ಮೋಮಿನ ಮಾತನಾಡಿ ನೂತನ ಯೋಜನೆಯಡಿ 318 ಕಾಮಗಾರಿಗಳು ಮಾಡಲು ಅವಕಾಶವಿದ್ದು, ವಿಬಿ-ಜಿ ರಾಮ್ ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳು, ಸಮುದಾಯ ಕಾಮಗಾರಿಗಳು, ದಿನದ ಕೂಲಿ ಮೊತ್ತ, ಹಾಜರಾತಿ ಕ್ರಮ, ಕೆಲಸದ ಅವಧಿ, ರೋಜಗಾರ್ ಗ್ಯಾರಂಟಿ ಕಾರ್ಡ, ಕೂಲಿ ಪಾವತಿ ಕ್ರಮ ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಆಡಳಿತ ಅಧಿಕಾರಿ ಎಮ್ ವಿ ಪಾಟೀಲ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎ ಬಿ ಬಂಗಾರಿ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಹಾಯಕರಾದ ಈರಣ್ಣ ಕಂಬಾರ, ಪ್ರವೀಣ ಸವದತ್ತಿ, ಪರಶುರಾಮ ಮದಿಹಳ್ಳಿ, ಕಾರ್ಯದರ್ಶಿ ಸುರೇಶ ತೋಟದ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸಿದ್ದಪ್ಪ ಬೆಕ್ಕನವರ, ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಕೃಷ್ಣ ಕುಲಮೂರ, ಚಂದ್ರು ಪಾಟೀಲ, ಹಣಮಂತ ಪಾಟೀಲ, ಬಿಎಫ್ ಟಿ ಸಂಗಮೇಶ ಬೆಳ್ಳಿವರಿ ಗ್ರಾಮಸ್ಥರು, ಕೂಲಿಕಾರರು, ಇನ್ನಿತರರು ಉಪಸ್ಥಿತರಿದ್ದರು.


