ಅಥಣಿ: ಪಟ್ಟಣದ ವೈಭವ ನಗರದಲ್ಲಿನ ಆದರ್ಶ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಜೂ. 1ರಂದು ಶಾಲಾ ಪ್ರಾರಂಭೋತ್ಸವ ಹಾಗೂ ಕೆಪಿಸಿಸಿ ಪ.ಜಾ. ರಾಜ್ಯ ಕಾಂಗ್ರೆಸ್ ಸಂಚಾಲಕರು, ಕೆ.ಪಿ.ಸಿ.ಸಿ. ಪ.ಜಾ. ವಿಭಾಗದ ರಾಜ್ಯಮಟ್ಟದ ಮಾಧ್ಯಮ ವಕ್ತಾರರು, ಅಥಣಿ ಪುರಸಭೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು, ಉದ್ಯಮಿಗಳು, ಸಮಾಜ ಸೇವಕರು, ಆರ್‌ಎನ್‌ಎ ಲ್ಯಾಂಡ್ ಡೆವಲಪರ್ಸ್ ಮಾಲೀಕರು, ಆದರ್ಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ರಾವಸಾಬ ನಿ. ಐಹೊಳೆ ಹಾಗೂ ಪುರಸಭೆ ಸದಸ್ಯರಾದ ಶ್ರೀಮತಿ ವಿದ್ಯಾ ರಾವಸಾಬ ಐಹೊಳೆ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ವೇದಿಕೆ ಮೇಲೆ ರಾವಸಾಬ ಐಹೊಳೆ ಅವರ ಮಾತೋಶ್ರೀ ಶ್ರೀಮತಿ ಬಂಗಾರೆವ್ವ ನಿ. ಐಹೊಳೆ, ಶ್ರೀ ಮುರುಘೇಂದ್ರ ಲಲಿತ ಕಲಾ ಅನುದಾನಿತ ಪದವಿ ಮಹಾವಿದ್ಯಾಲಯದ ಅಧ್ಯಕ್ಷರಾದ ವೈಭವ ರಾವಸಾಬ ಐಹೊಳೆ, ಪುರಸಭೆ ಸದಸ್ಯರಾದ ಶ್ರೀಮತಿ ವಿದ್ಯಾ ರಾ. ಐಹೊಳೆ, ಎನ್. ಪ್ರಶಾಂತರಾವ್ ಐಹೊಳೆ, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ಐಹೊಳೆ, ಪ್ರಿಯಾಂಕಾ ಐಹೊಳೆ, ದೀಶಾ ಐಹೊಳೆ, ಸಮದೃಶ್ಯ ಐಹೊಳೆ, ವೈಶಾಲಿ ಐಹೊಳೆ, ಪುರಸಭೆ ಸದಸ್ಯರಾದ ಬಸವರಾಜ ಹಳ್ಳದಮಳ, ಆದರ್ಶ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಸತೀಶ ಕುಲರ್ಣಿ, ಶ್ರೀ ಮುರುಘೇಂದ್ರ ಲಲಿತ ಕಲಾ ಅನುದಾನಿತ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಪ್ಪು ಕಾಂಬಳೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀಮತಿ ಶಶಿಕಲಾ ಕುರ್ಣಾ, ವಿಜಯಲಕ್ಷ್ಮೀ ಪವಾರ, ಸುನಿತಾ ಮಾನೆ, ಜಯಶ್ರೀ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

