Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್.ಬಿ. ತಿಮ್ಮಾಪುರಗೆ ಸಚಿವ ಸ್ಥಾನ ನೀಡಿ: ಕಾರ್ಯಕರ್ತ ಅಶೋಕ ಮಾದರ ದೀಡ ನಮಸ್ಕಾರ

ಕೃಷ್ಣಾ ನದಿಯಿಂದ ಬಬಲಾದಿ ಮಠದವರೆಗೆ ಉರುಳು ಸೇವೆ

Advertisement


ಕಲಾದಗಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಾಜಿ ಸಚಿವ, ಹಿರಿಯ ದಲಿತ ಮುಖಂಡ  ಆರ್.ಬಿ. ತಿಮ್ಮಾಪುರಗೆ ಉಪಮುಖ್ಯಮಂತ್ರಿ ಅಥವಾ ಪ್ರಮುಖ ಖಾತೆಯ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅಶೋಕ ಮಾದರ ಅವರು ಆಗ್ರಹಿಸಿದ್ದಾರೆ.
ಅಶೋಕ ಮಾದರ ಅವರು,ಕೃಷ್ಣಾ ನದಿ ತೀರದಿಂದ ಬಬಲಾದಿಯ ಶ್ರೀ ಸದಾಶಿವ ಮುತ್ತ್ಯಾನ ಮಠದವರೆಗೆ ದೀಡ ನಮಸ್ಕಾರ ಹಾಕುವ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕರ್ತ ಅಶೋಕ ಮಾದರ ಮಾತನಾಡಿ,ಆರ್.ಬಿ. ತಿಮ್ಮಾಪುರ ಅವರು 40 ವರ್ಷಗಳಿಂದ ಪಕ್ಷಕ್ಕೆ ದುಡಿದವರು. ಬಾಗಲಕೋಟೆ ಜಿಲ್ಲೆಯ ದಲಿತರ, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಸಚಿವರಾಗಿ, ವಿಧಾನ ಪರಿಷತ ಸದಸ್ಯರಾಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಡಿ.ಕೆ. ಶಿವಕುಮಾರ  ಸಂಪುಟದಲ್ಲಿ ತಿಮ್ಮಾಪುರ ಸಾಹೇಬರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಮಾಜ ಕಲ್ಯಾಣ, ಗೃಹ ಖಾತೆಯಂತಹ ಪ್ರಮುಖ ಸಚಿವ ಸ್ಥಾನ ನೀಡಬೇಕು. ಜಿಲ್ಲೆಗೆ ನ್ಯಾಯ ಸಿಗಬೇಕು" ಎಂದು ಆಗ್ರಹಿಸಿದರು. ತಿಮ್ಮಾಪುರಗೆ ಸಚಿವ ಸ್ಥಾನ ಸಿಗಲಿ ಎಂದು ಮುತ್ತ್ಯಾನ ಜಾತ್ರೆಯಲ್ಲಿ ಹರಕೆ ಹೊತ್ತಿದ್ದೆ. ಅದಕ್ಕಾಗಿ ಇಂದು ದೀಡ ನಮಸ್ಕಾರ ಹಾಕಿದ್ದೇನೆ ಎಂದು ಅವರು ತಿಳಿಸಿದರು.    

ವರದಿ : ಬಸವರಾಜ ಪೂಜಾರಿ

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ : ಪ್ರಧಾನಿ ಸೂಚನೆ ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಆಘಾತದಿಂದ ತಾಯಿ ಸಾವು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಎಫೆಕ್ಟ್ : ದೆಹಲಿಯ 16 ಮೆಟ್ರೋ ನಿಲ್ದಾಣಗಳು ಬಂದ್ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ : ಡಿ. ಕೆ. ಶಿವಕುಮಾರ್ ನಿಟ್ ಅಕ್ರಮ ಖಂಡಿಸಿ ರಾಜ್ಯ ವ್ಯಾಪ್ತಿ ಬೃಹತ್ ಪ್ರತಿಭಟನೆ!ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ! ಡಿವೈಎಸ್ಪಿ, ಚಂದ್ರಶೇಖರ್ ಜಿ. ಚಾಲನೆ!₹16.16 ಲಕ್ಷ ಸಾಲಕ್ಕೆ ₹36.77 ಲಕ್ಷ ವಸೂಲಿ : ಸಂಕೇಶ್ವರದ ದುಷ್ಟನ ಬಂಧನ ನೀತಿ ಆಯೋಗದ ನೂತನ CEO ಆಗಿ ಹಿರಿಯ ಐಎಎಸ್ ಅಧಿಕಾರಿ ಅನುರಾಗ್ ಜೈನ್ ನೇಮಕ6,617 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ ‘ಗಿಲ್ ನಾಯಕತ್ವ ಪರಿಣಾಮಕಾರಿಯಾಗಿರಲಿಲ್ಲ’