Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿದ್ದರಾಮಯ್ಯ ನೆನೆದು ಸತೀಶ್ ಜಾರಕಿಹೊಳಿ ಭಾವುಕ ಪೋಸ್ಟ್ 

Advertisement

ಬೆಳಗಾವಿ : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿರುವ ಸಿದ್ದರಾಮಯ್ಯ ಅವರ ಬಗ್ಗೆ ಶಾಸಕ ಸತೀಶ್‌ ಜಾರಕಿಹೊಳಿ (Satish Jarkiholi) ಭಾವುಕರಾಗಿ ಬರೆದುಕೊಂಡಿದ್ದು, ಅವರ ಸೈದ್ಧಾಂತಿಕ ಬದ್ಧತೆ ಎಲ್ಲರಿಗೂ ಮಾದರಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ನಾಯಕತ್ವದ ಶಕ್ತಿ ಸಿದ್ದರಾಮಯ್ಯರಲ್ಲಿದೆ

ಬಡತನ ಮತ್ತು ಶೋಷಿತ ವರ್ಗದ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ನಿರಂತರ ಹೋರಾಟ, ಪರಿಶ್ರಮ ಹಾಗೂ ಜನಪರ ಬದ್ಧತೆಯ ಮೂಲಕ ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಅಪರೂಪದ ನಾಯಕ ಶ್ರೀ ಸಿದ್ದರಾಮಯ್ಯ ಅವರು. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವುದು ನನಗೆ ಮಾತ್ರವಲ್ಲ, ಅಸಂಖ್ಯಾತ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹೋರಾಟಗಾರರಿಗೆ ಭಾವನಾತ್ಮಕ ಕ್ಷಣವಾಗಿತ್ತು. 

ಸಿದ್ದರಾಮಯ್ಯ ಅವರ ನುಡಿದಂತೆ ನಡೆಯುವ ಗುಣ, ಸಾಮಾಜಿಕ ನ್ಯಾಯದ ಮೇಲಿನ ಅಚಲ ನಂಬಿಕೆ, ದಮನಿತ ಹಾಗೂ ಹಿಂದುಳಿದ ಸಮುದಾಯಗಳ ಪರ ಇರುವ ಕಾಳಜಿ ಮತ್ತು ಸೈದ್ಧಾಂತಿಕ ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಅವರು ಯಾವುದೇ ಹುದ್ದೆಯಲ್ಲಿ ಇರಲಿ ಅಥವಾ ಇರದಿರಲಿ, ಸಮಾಜವನ್ನು ಮುನ್ನಡೆಸುವ ನಾಯಕತ್ವದ ಶಕ್ತಿ ಅವರಲ್ಲಿದೆ ಎಂದಿದ್ದಾರೆ.

 

 

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿ.ಕೆ. ಶಿವಕುಮಾರ್ ಅವರು ಸಿಎಲ್‌ಪಿ ನಾಯಕರಾಗಿ ಆಯ್ಕೆ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆಸವದಿಯವರಿಗೆ  ಸಚಿವ ಸ್ಥಾನ ನೀಡಲು ಸಿ ಎಸ್ ನೇಮಗೌಡ ಆಗ್ರಹ ಸರ್ಕಾರಗಳ ಕೈಲಾಗದ ಪುಣ್ಯ ಕಾರ್ಯಗಳನ್ನು ಧರ್ಮಸ್ಥಳ ಯೋಜನೆ ಮಾಡುತ್ತಿದೆ : ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ ಲಕ್ಷ್ಮೀನಾರಾಯಣ್ ಶ್ಲಾಘನೆಅಶಕ್ತರಿಗೆ ಆಸರೆಯಾದ ಧರ್ಮಸ್ಥಳ ಸಂಸ್ಥೆಯ ಜನಮಂಗಲ ಕಾರ್ಯಕ್ರಮ ವಸಂತ ಎಸ್ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ ಆಯ್ಕೆಸಿದ್ದರಾಮಯ್ಯ ನೆನೆದು ಸತೀಶ್ ಜಾರಕಿಹೊಳಿ ಭಾವುಕ ಪೋಸ್ಟ್ ಕೆಎಂಎಫ್‌ ನಲ್ಲಿ ಖಾಲಿ ಇರುವ 55 ಹುದ್ದೆಗಳಿಗೆ ಅರ್ಜಿ ಆಹ್ವಾನ ಹೈಕಮಾಂಡ್‌ನಿಂದ ಅಧಿಕೃತ ಘೋಷಣೆ ಹೊರಬೀಳುವ ಮುನ್ನವೇ ಡಿಕೆಶಿ ಫ್ಲೇಕ್ಸ್, ಬ್ಯಾನರ್ ಅಬ್ಬರ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಮೂರು ವರ್ಷಗಳಿಂದ ಕ್ಷೌರವನ್ನೇ ಮಾಡಿಸದ ಅಭಿಮಾನಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಮೂರು ವರ್ಷಗಳಿಂದ ಕ್ಷೌರವನ್ನೇ ಮಾಡಿಸದ ಅಭಿಮಾನಿ