Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Advertisement

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2026-27 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ, ಪಾಲಕರ ಸಭೆ ನಡೆಯಿತು. ಅತ್ಯಂತ ಖುಷಿಯಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ವಿದ್ಯಾರ್ಥಿಗಳ ಕುಂಭಮೇಳ, ವಿಶೇಷ ಅಕ್ಷರ ಬಂಡಿ, ಗ್ರಂಥ ಮೆರವಣಿಗೆಯೊಂದಿಗೆ ಗ್ರಾಮದಲ್ಲಿ ನಡೆದ ಪ್ರಭಾತಪೇರಿ ಎಲ್ಲರ ಗಮನ ಸೆಳೆಯಿತು.

news_1780385684_2_599.webp

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕ ಎನ್.ಆರ್.ಠಕ್ಕಾಯಿ ಉತ್ತಮ ಶಿಕ್ಷಣದಿಂದ ಉತ್ತಮ ಬದುಕು ಕಟ್ಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಶಿಸ್ತು, ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಶ್ರೇಷ್ಠ ಸಾಧನೆ ಮಾಡಬಹುದು. ಯಶಸ್ಸು ಗಳಿಸಲು ಇಚ್ಛಾಶಕ್ತಿ ಬಹಳ ಮುಖ್ಯವಾಗುತ್ತದೆ ಎಂದರು. ವಿದ್ಯಾರ್ಥಿಗಳು ಪ್ರತಿ ದಿನ ಶಾಲೆಗೆ ಹಾಜರಾಗಿ ಹೊಸದನ್ನು ಕಲಿಯುವ ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

news_1780385684_1_290.webp

 

news_1780385684_3_793.webp

 

ಶಿಕ್ಷಕರಾದ ಎಸ್.ವಿ.ಬಳಿಗಾರ ಮಾತನಾಡಿ ವಿದ್ಯಾರ್ಥಿಗಳು ಶಾಲೆಯ ನಿಯಮಗಳನ್ನು ಪಾಲಿಸಬೇಕು. ಸಮಯ ವ್ಯರ್ಥ ಮಾಡದೇ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅಧ್ಯಯನ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಬಡಿಗೇರ, ಉಪಾದ್ಯಕ್ಷರಾದ ರಮೇಶ ಸೂರ್ಯವಂಶಿ, ಸದಸ್ಯರಾದ ದುಂಡಪ್ಪ ಮಡಿವಾಳರ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಹೇಮಲತಾ ಪುರಾಣಿಕ ಹಾಗೂ ಗ್ರಾಮದ ಹಿರಿಯರು, ಪಾಲಕರು ಉಪಸ್ಥಿತರಿದ್ದರು. 9 ನೇ ತರಗತಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  ಚನಬಸಮ್ಮ ಸೊಗಲದ ಸ್ವಾಗತಿಸಿದರು. ಪಲ್ಲವಿ ಸೂರ್ಯವಂಶಿ ವಂದಿಸಿದರು. ವಿದ್ಯಾ ಗರಗದ ನಿರೂಪಿಸಿದರು. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸಂಜೆ ಡಿ. ಕೆ ಶಿವಕುಮಾರ್ ಪ್ರಮಾಣವಚನ : ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆಬೆಳಗಾವಿ ‘ಬಿಸಿ ತುಪ್ಪ’: ಡಿಕೆಶಿ ಸಂಪುಟ ಸರ್ಕಸ್‌ಗೆ ಗಡಿ ಜಿಲ್ಲೆಯದ್ದೇ ಟೆನ್ಷನ್!ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ : ಮತ್ತಷ್ಟು ಸರಳೀಕರಣಗೊಳಿಸಿದ ರಾಜ್ಯ ಸರ್ಕಾರನಿವೃತ್ತ ಪಿಡಿಓ ಗೌಸ್ ಪೀರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆನಾಳೆ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪದಗ್ರಹಣ : ಮೂರು ರೀತಿಯ ಪಾಸ್ ವಿತರಣೆ ಕುರಿ ಕಾಯುವ ಕೆಲಸಕ್ಕೆ 700ಕ್ಕೆ ಅರ್ಜಿ ಸಲ್ಲಿಸಿದ್ದ ಪದವಿದರು ಈಶ್ವರ್ ಖಂಡ್ರೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಹಿಳೆಯರ ವಿಶೇಷ ಪೂಜೆ, ಮನವಿಖಾನಾಪುರದಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಕೆ : 13 ಆರೋಪಿಗಳು ಅರೆಸ್ಟ್ BIG NEWS : ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅಣ್ಣಾಮಲೈ ರಾಜೀನಾಮೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ ಟೌನ್ ಹಾಗೂ ಮಹಾರಾಷ್ಟ್ರ ಮಂಡಲ ವತಿಯಿಂದ ಟೇಬಲ್ ಟೆನಿಸ್