Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಾನಂದ ನೀಲಣ್ಣವರ ವಂಚನೆ ಕೇಸ್ : 4 ಬ್ಯಾಂಕ್ ಖಾತೆಗಳು ಪ್ರೀಜ್, ಕೋಟಿ ಕೋಟಿ ಹಣ ಪತ್ತೆ 

Advertisement

ಬೆಳಗಾವಿ : 4,500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಐಡಿ ಅಧಿಕಾರಿಗಳು 4500 ಕೋಟಿ ಪ್ರಕರಣದ ಬೆನ್ನತ್ತಿದ್ದಾರೆ. 

ನಿನ್ನೆಯವರೆಗೂ ಪೊಲೀಸರು ತನಿಖೆ ನಡೆಸಿದ್ದು ಇದೀಗ ಅದರ ವರದಿಯನ್ನು ಪೊಲೀಸರು ಸಿಐಡಿ ಗೆ ಹಸ್ತಾಂತರಿಸಿದ್ದಾರೆ. ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಸಿಐಡಿ ಅಧಿಕಾರಿಗಳಿಗೆ ವರದಿ ಹಸ್ತಾಂತರಿಸಿದ್ದಾರೆ.

ಸುಧೀರ್ಘವಾಗಿ ಮಾಹಿತಿ ಕಲೆಯ ಹಾಕಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದು CID ಡಿಐಜಿ ಭೀಮಶಂಕರ್ ಗುಳೇದ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಈ ಕೇಸ್ ಬಗ್ಗೆ ಪೊಲೀಸ್ ಆಯುಕ್ತರ ಜೊತೆ ಸಿಐಡಿ ತಂಡ ಸಭೆ ನಡೆಸಿದ್ದು, ಜಪ್ತಿ ಮಾಡಿದಂತಹ ದಾಖಲೆಗಳು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಸುಮಾರು 35 ಸಾವಿರ ಜನರಿಂದ ಶಿವಾನಂದ್ ಹೂಡಿಕೆ ಮಾಡಿಕೊಂಡಿದ್ದು, ಆನ್ಲೈನ್ 2500 ಕೋಟಿಗೂ ಅಧಿಕಾರ ಹೂಡಿಕೆ ಮಾಡಿಕೊಂಡಿದ್ದ. ಈಗ ಶಿವಾನಂದ ನೀಲಣ್ಣನವರ್ ಬಳಸುತ್ತಿದ್ದ ನಾಲ್ಕು ಅಕೌಂಟ್ ಗಳನ್ನು ಅಧಿಕಾರಿಗಳು ಪ್ರೀಜ್ ಮಾಡಿದ್ದಾರೆ.

ಒಂದೊಂದು ಅಕೌಂಟ್ನಲ್ಲಿ ನೂರಾರು ಕೋಟಿ ರೂಪಾಯಿ ಆಗಿದೆ ಹೂಡಿಕೆ ಮಾಡಿದ್ದು ಪ್ರತಿದಿನ ಶಿವಾನಂದ್ ಅಕೌಂಟಿಗೆ ಲಕ್ಷಾಂತರ ರೂಪಾಯಿ ಜಮೆ ಆಗುತ್ತಿತ್ತು.

ಇದೇ ಖಾತೆಗಳಿಂದ ಜನರಿಗೆ ಶಿವಾನಂದ್ ಬಡ್ಡಿ ಹಣ ಜಮೆ ಮಾಡುತ್ತಿದ್ದ. 35 ಸಾವಿರ ಜನರಿಗೆ ತಿಂಗಳಿಗೆ 75 ಕೋಟಿಗೂ ಅಧಿಕ ಬಡ್ಡಿ ಜಮೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ, ಇದೀಗ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST