Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯ ಸಚಿವ ಸಂಪುಟ ವಿಸ್ತರಣೆ : ದಿಢೀರ್ ಹೈಕಮಾಂಡ್ ಸಭೆ ರದ್ದು 

Advertisement

ನವದೆಹಲಿ: ಕರ್ನಾಟಕ ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಂದು ನಡೆಯಬೇಕಿದ್ದ ಹೈಕಮಾಂಡ್ ನಾಯಕರ ಪ್ರಮುಖ ಸಭೆಯನ್ನು ದಿಢೀರನೆ ರದ್ದುಗೊಳಿಸಲಾಗಿದೆ.

ಸಂಸತ್ತಿನ ಲೋಕಸಭೆಯ ಕಲಾಪಗಳು ತೀವ್ರ ಗದ್ದಲ ಹಾಗೂ ಮಹತ್ವದ ಚರ್ಚೆಗಳಿಂದ ಕೂಡಿದ್ದ ಹಿನ್ನೆಲೆಯಲ್ಲಿ, ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಈ ಸಭೆಯನ್ನು ಮುಂದೂಡಲಾಗಿದೆ.

ನಾಳೆಗೆ ಸಭೆ ಮುಂದೂಡಿಕೆ:

ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ನಡೆಸಬೇಕಿದ್ದ ಈ ಉನ್ನತ ಮಟ್ಟದ ಸಭೆಯನ್ನು ನಾಳೆಗೆ (ಗುರುವಾರ) ಮುಂದೂಡಲಾಗಿದೆ. ಆದರೆ, ನಾಳೆ ಸಭೆ ನಡೆಯುವ ನಿಖರ ಸಮಯ ಇನ್ನೂ ನಿಗದಿಯಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ದೆಹಲಿಯಲ್ಲಿದ್ದು, ನಾಳಿನ ಸಭೆಯ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST