Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾರಿಗೆ ನೌಕರರೊಂದಿಗೆ ರಾಜ್ಯ ಸರ್ಕಾರದ ಮಾತುಕತೆ ವಿಫಲ : ನಾಳೆಯಿಂದ ಪ್ರತಿಭಟನೆ

Advertisement

ಬೆಂಗಳೂರು: ಸಾರಿಗೆ ನೌಕರರ ಸಂಘಟನೆಗಳೊಂದಿಗೆ ರಾಜ್ಯ ಸರ್ಕಾರ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದ್ದು, ಬುಧವಾರದಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗುವುದು ಮುಷ್ಕರದಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದ್ದು, ಇದಕ್ಕೆ ಸಂಘಟನೆಗಳು ಬಗ್ಗದ ಕಾರಣ ಮೇ 20ರಿಂದ ಮುಷ್ಕರ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

 

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಂಟಿ ಕ್ರಿಯಾ ಸಮಿತಿ ಬುಧವಾರ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ಸರ್ಕಾರದಿಂದ ನಡೆಸಲಾದ ಮತ್ತೊಂದು ಸುತ್ತಿನ ಸಂಧಾನ ಸಭೆ ಫಲಪ್ರದವಾಗಿಲ್ಲ.

 

ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸರ್ಕಾರ ಸ್ಪಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ ಮೇ 20ರಿಂದ ಕರೆ ನೀಡಿರುವ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ನೌಕರರ ಸಂಘಟನೆ ಹೇಳಿದೆ.

 

ಸಾರಿಗೆ ನೌಕರರ ಹಲವು ಸಂಘಟನೆಗಳ ಒಕ್ಕೂಟವಾಗಿರುವ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕ ಭವನದಲ್ಲಿ ಇಲಾಖೆಯ ಆಯುಕ್ತ ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆಯ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು. ಆದರೆ ಸಮಿತಿ ಪದಾಧಿಕಾರಿಗಳ ಮನವೊಲಿಸುವಲ್ಲಿ ಸಭೆ ವಿಫಲವಾಗಿದೆ.

 

ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸದಂತೆ ಸಿಬ್ಬಂದಿಗೆ ಸಾರಿಗೆ ಇಲಾಖೆ ನೋಟಿಸ್ ನೀಡಿದೆ. ದೈನಂದಿನ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಗೈರು ಹಾಜರಾದಲ್ಲಿ ವೇತನ ಕಡಿತ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ಮಂಗಳವಾರ ಮಧ್ಯಾಹ್ನದೊಳಗೆ ಮುಖ್ಯಮಂತ್ರಿ ಅಥವಾ ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡರೆ ಮುಷ್ಕರ ವಾಪಸ್ ಪಡೆಯಲಾಗುವುದು. ಇಲ್ಲದಿದ್ದರೆ ಬುಧವರಾರದಿಂದ ಮುಷ್ಕರ ನಡೆಯುವುದು ಖಚಿತವಾಗಿದೆ ಎಂದು ನೌಕರರ ಸಂಘಟನೆಯ ಜಂಟಿ ಸಮಿತಿ ಸದಸ್ಯ ವಿಜಯ್ ಭಾಸ್ಕರ್ ತಿಳಿಸಿದ್ದಾರೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ತುಮಕೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ : 1.53 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಉಚಿತ ಆಧಾರ್ ನವೀಕರಣದ ಗಡುವು ಒಂದು ವರ್ಷದವರೆಗೆ ವಿಸ್ತರಣೆಸಾರಿಗೆ ನೌಕರರೊಂದಿಗೆ ರಾಜ್ಯ ಸರ್ಕಾರದ ಮಾತುಕತೆ ವಿಫಲ : ನಾಳೆಯಿಂದ ಪ್ರತಿಭಟನೆ ಗ್ರಾಹಕರಿಗೆ ಮತ್ತೆ ಮರ್ಮಘಾತ : ಪೆಟ್ರೋಲ್ - ಡೀಸೆಲ್ ಬೆಲೆ 90 ಪೈಸೆ ಹೆಚ್ಚಳಪಾಕಿಸ್ತಾನ್‌ಗೆ ಗೆಲ್ಲಲು ೪೩೭ ರನ್‌ಗಳ ಗುರಿಮೇ 20ರಂದು ದೇಶವ್ಯಾಪಿ ಮೆಡಿಕಲ್ ಶಾಪ್ ಗಳು ಬಂದ್ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಕಟ್ಟಿ ಹಾಕಿ ಚಿತ್ರಹಿಂಸೆ : ಸಾರ್ವಜನಿಕ ತೀವ್ರ ಆಕ್ರೋಶ ಡ್ರೈವರ್ ಕಾಲೋನಿಯಲ್ಲಿನ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಮನವಿ32 ಲಕ್ಷದ ವಿಟೆಂಜ್ ಸೂಟ್ ನಲ್ಲಿ ಮಿಂಚಿದ ಇಶಾ ಅಂಬಾನಿ ದೇಶದ ಮೊದಲ ಬುಲೆಟ್ ರೈಲಿನ ಫೋಟೋ ಹಂಚಿಕೊಂಡ ಭಾರತೀಯ ರೈಲ್ವೆ ಇಲಾಖೆ