ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಎಸ್. ವಾರಾಹಿ ಭವನ ರೈಸ್ ಕಂಪನಿ ಕಲ್ಯಾಣ ಕರ್ನಾಟಕ ವ್ಯವಸ್ಥಾಪಕರಾದ ಸೌಭಾಗ್ಯ ಅರ್. ಲಸ್ಕರಿ ಮಾತನಾಡಿ ನಮ್ಮ ಭಾರತೀಯ ಆಹಾರ ಶೈಲಿಯಲ್ಲಿ ಅನ್ನಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ನೀಡಲಾಗಿದೆ ಅದ್ದರೆ ಸಾಮಾನ್ಯ ಅಕ್ಕಿಯಿಂದ ಮಾಡಿದ ಅನ್ನದಲ್ಲಿ ಗ್ಲೂಕೋಸ್ ಪ್ರಮಾಣ ಬೇಗನೆ ಬಿಡುಗಡೆಯಾಗುವುದರಿಂದ ದೇಹದಲ್ಲಿ ಮಧುಮೇಹ ಕಾಯಿಲೆ ಕಾಣಿಸಿಕೊಳ್ಳುತ್ತದೆ ಅದ್ದರಿಂದ ಎಸ್. ವಾರಾಹಿ ಭವನ ರೈಸ್ ಕಂಪನಿಯು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗಾಗಿ ಸೂಕ್ತವಾದ ಪ್ರೋಟಿನ್,ಫೈಬರ್ ನಿಂದ ಸಮೃದ್ದವಾದ ಎಸ್. ವಾರಾಹಿ ಭವನ ರೈಸ್ ಎನ್ನುವ ಅಕ್ಕಿಯನ್ನು ಕಲ್ಯಾಣ ಕರ್ನಾಟಕ ಭಾಗದ ಜನರಿಗಾಗಿ ಬಿಡುಗಡೆ ಮಾಡಿದ್ದು ಈ ಅಕ್ಕಿಯನ್ನು ಮಧುಮೇಹ ರೋಗಿಗಳು ನಿತ್ಯವು ಸೇವಿಸಿ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ .ಈ ಅಕ್ಕಿಯು ಸಾಮಾನ್ಯ ಅಕ್ಕಿಯಂತೆ ರುಚ್ಚಿಯನ್ನು ಹೊಂದಿದು ದೇಹದಲ್ಲಿ ನಿಧನವಾಗಿ ಗ್ಲೂಕೋಸ್ ಪ್ರಮಾಣವನ್ನು ಬಿಡುಗಡೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ. ಅದ್ದರಿಂದ ಸಮಾನ್ಯ ಜನರಿಗೂ ಕೂಡ ಲಭ್ಯವಾಗವಂತೆ ಅಕ್ಕಿಯ ಪ್ಯಾಕೇಟ್‌ಗಳನ್ನು ರೂಪಿಸಲಾಗಿದು ಈ ಅಕ್ಕಿಯು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಕೂಡ ಉತ್ತಮ ಫಲಿತಾಂಶವನ್ನು ನೀಡಿರುವುದರಿಂದ ಸಕ್ಕರೆ ಕಾಯಿಲೆಯುಳ್ಳವರು ಇನ್ನುಮುಂದೆ ಯಾವುದೆ ಅತಂಕವಿಲ್ಲದೆ ಎಸ್. ವಾರಾಹಿ ಭಾವನ ರೈಸ್ ಬಳಸಿ ಅನ್ನವನ್ನು ಸೇವಿಸಬಹುದು ಎಂದು ತಿಳಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾನ್ವಿಯಲ್ಲಿ ಮಾರಾಟ ಶಾಖೆಯನ್ನು ಪ್ರಾರಂಭಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಮಾನ್ವಿಯ ಮಾರಾಟ ಪ್ರತಿನಿಧಿಗಳಾದ ಎಂ. ಬಿ ಸಿದ್ದರಾಮಯ್ಯ ಸ್ವಾಮಿ ದೂ.ಸಂಖ್ಯೆ 9148794455 ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ರೂಪ ಶ್ರೀನಿವಾಸ್ ನಾಯಕ ಎಂ. ಬಿ ಸಿದ್ದರಾಮಯ್ಯ ಸ್ವಾಮಿ ಹನುಮೇಶ ಶೆಟ್ಟಿ ಇದ್ದರು.
ವರದಿ : ಆಂಜನೇಯ ನಸಲಾಪುರ


