LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು : ಡಿ.ಕೆ.ಶಿವಕುಮಾರ್ ಮನವಿ

Advertisement

ಮಹಾಬಲಿಪುರಂ: ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡಬಾರದು, 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಎಂಬುದು ನಮ್ಮ ಸಭೆಯ ಪ್ರಮುಖ ಅಜೆಂಡಾ ಆಗಿತ್ತು. ಈ ವಿಚಾರದಲ್ಲಿ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ರಾಜ್ಯಗಳು ಒಮ್ಮತದ ತೀರ್ಮಾನಕ್ಕೆ ಮುಂದಾಗಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆ ಬಳಿಕ ಮಾಧ್ಯಮಗಳಿಗೆ ಸಿಎಂ.ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಇದರ ಜೊತೆಗೆ ನೀರು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಈ ವಿಚಾರವಾಗಿ ಪ್ರತ್ಯೇಕ ಸಭೆ ಕರೆದು ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ. 

ಗೃಹಸಚಿವರ ಸಮ್ಮುಖದಲ್ಲಿ ನಾನು ಮೇಕೆದಾಟು ಯೋಜನೆಯಡಿ ಸಂಗ್ರಹವಾಗುವ ಒಂದೇ ಒಂದು ಹನಿ ನೀರನ್ನು ನೀರಾವರಿಗೆ ಬಳಸುವುದಿಲ್ಲ ಎಂದು ತಮಿಳುನಾಡಿಗೆ ಸ್ಪಷ್ಟಪಡಿಸಿದ್ದೇನೆ. 

ಕುಡಿಯಲು 5 ಟಿಎಂಸಿ ನೀರು ಬಳಸುವುದು ಬಿಟ್ಟರೆ ಉಳಿದ ನೀರನ್ನು ತಮಿಳುನಾಡಿಗೆ ಹರಿಸಲಾಗುವುದು. ಮೇಕೆದಾಟು ಯೋಜನೆಯಿಂದ ತಮಿಳುನಾಡು ಹಾಗೂ ಪಾಂಡಿಚೇರಿ ಪಾಲಿನ ನೀರು ನೀಡಲು ಸಾಧ್ಯ. ಈ ಅಣೆಕಟ್ಟು ನಿರ್ಮಾಣವಾಗುತ್ತಿರುವುದೇ ನಿಮಗಾಗಿ ಎಂದು ಹೇಳಿರುವೆ ಎಂದು ತಿಳಿಸಿದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೀಡ್ಸ್ : ಇಂಗ್ಲೇನ್ದ ಗೆ ಇನ್ನಿಂಗ್ಸ್ ಮುನ್ನಡೆ ಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು : ಡಿ.ಕೆ.ಶಿವಕುಮಾರ್ ಮನವಿಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಬೆಳಿಗ್ಗೆ ಭಾವಿಯಲ್ಲಿ ಶವವಾಗಿ ಪತ್ತೆರಾಜ್ಯದ ಅಭಿವೃದ್ಧಿ ಹರಿಕಾರ ಡಿ ದೇವರಾಜ್ ಅರಸು : ತಹಸೀಲ್ ಕಚೇರಿಯಲ್ಲಿ ಜಯಂತಿ ಆಚರಣೆ ಪ್ರವಾಹ ಸಂತ್ರಸ್ತರ ಮನೆ ನಿವೇಶನ ಅನ್ಯರಿಗೆ ಹಂಚಿಕೆ : ಬಾದಾಮಿ ತಹಶೀಲ್ದಾರ ಕಚೇರಿ ಮೇಲೆ ಲೋಕಾಯುಕ್ತ ದಾಳಿಮಧುಮೇಹಿಗಳಿಗೆ ಸೂಕ್ತವಾದ  ಎಸ್. ವಾರಾಹಿ ಭವನ ರೈಸ್ : ಸೌಭಾಗ್ಯ ಅರ್. ಲಸ್ಕರಿ2026-27ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವಪ್ರವಾಹ ಪರಿಹಾರ ಹಂಚಿಕೆ ಅಕ್ರಮ : ಬಾದಾಮಿ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿಪಾಕಿಸ್ತಾನ- ಇಂಗ್ಲೇನ್ಡ್ ಟೆಸ್ಟ್ ಗೆ ಮಳೆ ಅಡ್ಡಿ