LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಚಂದಿರನ ಮಣ್ಣಿನಲ್ಲಿ ಮೂರು ಪ್ರತ್ಯೇಕ ಪದರಗಳು ಪತ್ತೆ! 

Advertisement

ನವದೆಹಲಿ: ಇಸ್ರೋದ ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಂಶೋಧನೆಯನ್ನು ಹೊರಹಾಕಿದ್ದಾರೆ.

ಚಂದ್ರನ ದಕ್ಷಿಣ ಧ್ರುವದ ಬಳಿ ವಿಕ್ರಮ್ ಲ್ಯಾಂಡರ್ ಇಳಿದಿರುವ "ಶಿವ ಶಕ್ತಿ ಪಾಯಿಂಟ್' ಪ್ರದೇಶದಲ್ಲಿ, ಮೇಲ್ಮೈಯ ಕೇವಲ 10 ಸೆಂಟಿಮೀಟರ್ ಆಳದವರೆಗೆ ಒಟ್ಟು 3 ವಿಭಿನ್ನ ಭೌತಿಕ ಹಾಗೂ ಉಷ್ಣಾಂಶ ಗುಣಲಕ್ಷಣಗಳನ್ನು ಹೊಂದಿರುವ ಪದರಗಳು ಇರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.

ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ ವಿಜ್ಞಾನಿ ಕೆ.ದುರ್ಗಾ ಪ್ರಸಾದ್ ನೇತೃತ್ವದಲ್ಲಿ ನಡೆಸಲಾದ ಈ ಅಧ್ಯಯನದ ವರದಿಗಳು ಪ್ರತಿಷ್ಠಿತ "ಎನ್‌ಪಿಜೆ ಸ್ಪೇಸ್ ಎಕ್ಸ್‌ಪ್ಲೋರೇಷನ್' ಜರ್ನಲ್‌ನಲ್ಲಿ ಪ್ರಕಟವಾಗಿವೆ.

ಚಂದ್ರನ ಮೇಲ್ಮೈ ಮಣ್ಣು ಎಲ್ಲೆಡೆ ಒಂದೇ ರೀತಿಯ ಏಕರೂಪದ ಧೂಳಿನಿಂದ ಕೂಡಿದೆ ಎಂಬ ಹಿಂದಿನ ಊಹೆಗಳನ್ನು ಈ ಹೊಸ ವಿಶ್ಲೇಷಣೆ ಸುಳ್ಳು ಮಾಡಿದೆ.

ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಲಾಗಿದ್ದ "ಚಂದ್ರನ ಮೇಲ್ಮೈ ಉಷ್ಣ ಭೌತಿಕ ಪ್ರಯೋಗ' ಉಪಕರಣ ಕಳುಹಿಸಿದ ದತ್ತಾಂಶಗಳ ಆಧಾರದ ಮೇಲೆ ಚಂದ್ರನ ಮಣ್ಣಿನ ರಚನೆಯಲ್ಲಿ ಈ ವೈವಿಧ್ಯತೆ ಬೆಳಕಿಗೆ ಬಂದಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಂದಿರನ ಮಣ್ಣಿನಲ್ಲಿ ಮೂರು ಪ್ರತ್ಯೇಕ ಪದರಗಳು ಪತ್ತೆ! ಅಕ್ಕಿ ಬೆಲೆ ದಿಢೀರ್ ಇಳಿಕೆ : ಕೆಜಿಗೆ 20ರವರೆಗೆ ಇಳಿದ ಸೋನಾ ಮಸೂರಿಇನ್ಮುಂದೆ ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳು 'ಪ್ರಜಾಸೇವಾ ಕೇಂದ್ರ' ಇಂದು ಸಚಿವರು, ಎಲ್ಲ ಶಾಸಕರು ಸೇರಿ 500 ಜನರಿಗೆ ಡಿಕೆಶಿ ಔತಣಕೂಟ1000 ಎಕ್ರೆಯಲ್ಲಿ ಹುಬ್ಬಳ್ಳಿ-ಧಾರವಾಡ ಸಮೀಪ ಸ್ಟಾರ್ಟ್‌ಅಪ್‌ ಪಾರ್ಕ್‌ ಸ್ಥಾಪನೆ2035ರ ವೇಳೆಗೆ ಜಗತ್ತಿನಲ್ಲಿ ಕ್ರೈಸ್ತರಿಗಿಂತ ಮುಸ್ಲಿಮರ ಸಂಖ್ಯೆ ಹೆಚ್ಚಳ: ಹಿಂದೂಗಳ ಸಂಖ್ಯೆ ಕಡಿಮೆ: ಪ್ಯೂ ರಿಸರ್ಚ್ ಮಿಜೂರಾಮ್ ವಿರುದ್ಧ ಕರ್ನಾಟಕಕ್ಕೆ 7 ವಿಕೆಟ್ ಗಳ ಸುಲಭ ಗೆಲುವು ಜಿಪುಣನಾಗಿ ಮೃತಪಟ್ಟವನ ಬ್ಯಾಂಕ್ ನಲ್ಲಿತ್ತು 70 ಲಕ್ಷ ರೂ. : ಚಿಕಿತ್ಸೆಗೂ ಹಣ ಬಳಸದೆ ದುರಂತ ಅಂತ್ಯನಾನು ದೇವರನ್ನು ಪೂಜೆ ಮಾಡಲ್ಲ. ಆಗಂತ ದೇವರಿಲ್ಲ ಅಂತ ಹೇಳಲ್ಲ : ಸಿದ್ದರಾಮಯ್ಯ ಪೆಟ್ರೋಲ್ ನಲ್ಲಿ ಮಾತ್ರ ಎಥೆನಾಲ್ ಮಿಕ್ಸ್ ಮಾಡುತ್ತಿದ್ದೇವೆ : ಮುರುಗೇಶ್ ನಿರಾಣಿ