ಬಾಗಲಕೋಟೆ :ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ಕಾರ್ಯಕರ್ತರು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸೇರಿ ಅಗ್ನಿವೀರ ನೇಮಕಾತಿಯಲ್ಲಿ ಭಾರತೀಯ ಸೈನ್ಯಗೆ ಆಯ್ಕೆಯಾದ ಬಾಗಲಕೋಟೆಯ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಮಟ್ಟಿ ಗ್ರಾಮದ ವೀರಪುತ್ರ ಕಾರ್ತಿಕ ನೀಲಪ್ಪ ಗೋಡಿ ಅವರಿಗೆ ಬಾಗಲಕೋಟೆಯಲ್ಲಿ ಇಂದು ಅವರಿಗೆ ಅಭಿನಂದಿಸಿ ಹಾಗೂ ಸನ್ಮಾನಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ನಾಗೇಶ್ ಅಂಬಿಗೇರ ಮಾಜಿ ಯೋಧರರಾದ ಶಿವಾನಂದ ಅಂಬಿಗೇರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷರು ವಾಯ ಬಿ ಜೋಗಿ ಹಾಗು ಆರ್ ಬಿ ರಾಂಪುರ್ ಶಿಕ್ಷಕರು ಹಾಗೂ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆ ಕಾರ್ಯಕರ್ತರು ಮತ್ತು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭಾಗಿಯಾಗಿ ಅಭಿನಂದನೆಗಳು ಸಲ್ಲಿಸಿದರು.

