ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಬ್ರೇಕ್ ನ ನಂತರ ಇದೀಗ ಸೈಯದ್ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ- 20 ಪಂದ್ಯಾವಳಿಗೂ ಬ್ರೇಕ್ ಬಿದ್ದಾಗಿದೆ. ಈಗ ಈ ನಡುವೆ ವಿಜಯ್ ಹಜಾರೆ ಟ್ರೋಫಿ ಏಕದಿನ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಲಿದೆ.
ಡಿಸೇಂಬರ್ 14 ರಂದು ಕರ್ನಾಟಕ ತ್ರಿಪುರಾ ತಂಡವನ್ನು ಎದುರಿಸಲಿದೆ. ಪಂದ್ಯ ಅಂದು ಮುಂಜಾನೆ 9 ಕ್ಕೆ ಆರಂಭವಾಗಲಿದೆ. ಪಂದ್ಯ ನಡೆಯುವ ಸ್ಥಳ ನಿರ್ಧಾರ ಆಗಬೇಕಿದೆ. ಲಿಸ್ಟ್ ಎ, ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, 50 ಓವರ್ ಗಳ ಒಂಡೆ ಪಾರ್ಮೆಟ್ ನಲ್ಲಿ ಆಡಲಾಗುತ್ತದೆ. ದೇಶದ 38 ತಂಡಗಳು ಪಾಲ್ಗೊಳ್ಳಲಿವೆ.

