LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಧ್ಯರಾತ್ರಿ ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ

Advertisement

ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡದ ಐಬಿಯಲ್ಲಿ ಕಬ್ಬು ಬೆಳೆಗಾರರೊಂದಿಗೆ ನಡೆದ ಮಹತ್ವದ ಸಭೆ ಯಶಸ್ವಿಯಾಗಿದೆ. 

ಭಾನುವಾರ ಮಧ್ಯರಾತ್ರಿ ನಡೆದ ಈ ಸಭೆಯಲ್ಲಿ ರೈತ ಮುಖಂಡ ಹಾಗೂ ಹೋರಾಟದ ನೇತೃತ್ವ ವಹಿಸಿರುವ ಚೂನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ ಸೇರಿದಂತೆ ಎಂಟು ರೈತ ಮುಖಂಡರು ಭಾಗವಹಿಸಿದ್ದರು.

ಸಂಸದ ಜಗದೀಶ್ ಶೆಟ್ಟರ್, ಮಹೇಶ್ ಟೆಂಗಿನಕಾಯಿ, ಸಿ.ಸಿ. ಪಾಟೀಲ್, ಧಾರವಾಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಆರಂಭದಲ್ಲಿ ಪ್ರಲ್ಹಾದ್ ಜೋಶಿ ಅವರು ರೈತ ನಾಯಕರ ಆರೋಗ್ಯ ವಿಚಾರಿಸಿ, ಅವರ ಬೇಡಿಕೆಗಳನ್ನು ಆಲಿಸಿದರು.

ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಹೆಚ್ಚಳ, ವಾಣಿಜ್ಯ ಸಕ್ಕರೆ ಮಾರಾಟ ಮತ್ತು ಎಥೆನಾಲ್ ದರ ₹100 ನಿಗದಿಪಡಿಸುವ ಕುರಿತು ರೈತರು ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಸಮಿತಿ ರಚನೆ, ಸಮೀಕ್ಷೆ ಮತ್ತು ಸಿಎಸಿಪಿ ವರದಿ ಪಡೆದು ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೇಳಿದ್ದಾರೆ. 

ರೈತ ಮುಖಂಡರು ಮಾನವೀಯ ದೃಷ್ಟಿಯಿಂದ ಅವರ ಮನವಿಗೆ ಸ್ಪಂದಿಸಿ, ತಾತ್ಕಾಲಿಕವಾಗಿ ಹೋರಾಟವನ್ನು ಸ್ಥಗಿತಗೊಳಿಸಲು ಒಪ್ಪಿದ್ದಾರೆ. ಆದರೆ, ನಿಗದಿತ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಹೋರಾಟ ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆತರಗತಿಯಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು; ಸಿಸಿಟಿವಿಯಲ್ಲಿ ದೃಶ್ಯ ಸೆರೆಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬಾಲಿವುಡ್ ನಟರಿಗೆ ಬೆದರಿಕೆ : ಬೆಂಗಳೂರಿನ ಟೆಕ್ಕಿ ಅರೆಸ್ಟ್ ಡೀಸೆಲ್ ಬೆಲೆ ಹೆಚ್ಚಾದಾಗ ಯಾರೂ ಮಾತನಾಡಲಿಲ್ಲ : ಡಿ. ಕೆ ಶಿವಕುಮಾರ್ ಅಗ್ನಿವೀರರ ಸೇವಾ ಅವಧಿ ಮತ್ತೆ 2 ವರ್ಷ ವಿಸ್ತರಣೆ : ಕೇಂದ್ರ ಅನುಮೋದನೆ ಕಬ್ಬಿನ ಬೆಳೆಗಾರರ ಸಂಧಾನ ಸಭೆಗಳು ವಿಫಲ : ಡಿಸಿ ಕಚೇರಿಗೆ ಬೀಗ ಹಾಕಲು‌ ಯತ್ನಿಸಿದ ರೈತರು ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಸುಲಭ ಜಯಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 314 ರನ್ ಗಳ ದೊಡ್ಡ ಗೆಲುವು ಗೃಹಲಕ್ಷ್ಮಿಯರ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು? : ನಿಖಿಲ್ ಕುಮಾರಸ್ವಾಮಿಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅಪ್ರಸ್ತುತ