Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂಪುಟ ವಿಸ್ತರಣೆ : ಜು. 5ಕ್ಕೆ ಡಿ. ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ 

Advertisement

ನವದೆಹಲಿ : ರಾಹುಲ್‌ ಗಾಂಧಿ ಅವರು ವಿದೇಶ ಪ್ರವಾಸದಿಂದ ಶೀಘ್ರ ವಾಪಸಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್‌ನೊಂದಿಗೆ ಚಚಿರ್ಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.5ರಂದು ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಮಾಹಿತಿ ಪ್ರಕಾರ ಜು.5ರಂದು ರಾಹುಲ್‌ ಗಾಂಧಿ ಅವರು ವಿದೇಶದಿಂದ ದೆಹಲಿಗೆ ವಾಪಸಾಗಲಿದ್ದಾರೆ. ಅಂದೇ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರೂ ನಾಯಕರು ಜಿಲ್ಲಾವಾರು, ಸಮುದಾಯವಾರು ಸಂಭಾವ್ಯ ಸಚಿವರ ಪಟ್ಟಿಯೊಂದಿಗೆ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ. 

ಜು.6 ಮತ್ತು 7ರಂದು ದೆಹಲಿಯಲ್ಲೇ ಇದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾಗಾಂಧಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಜು.10ರಿಂದ 12ರೊಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದೇ ವೇಳೆ, ಜು.22ರಂದು ಅವಧಿ ಪೂರ್ಣಗೊಳ್ಳಲಿರುವ ವಿಧಾನ ಪರಿಷತ್‌ನ ಐವರು ನಾಮನಿರ್ದೇಶಿತ ಸದಸ್ಯರ ಸ್ಥಾನಗಳಿಗೆ ಹೊಸದಾಗಿ ಯಾರನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಬೇಕೆಂಬ ಬಗ್ಗೆಯೂ ಇಬ್ಬರೂ ನಾಯಕರು ಹೈಕಮಾಂಡ್‌ ನಾಯಕರೊಂದಿಗೆ ಚರ್ಚಿಸುವ ಸಾಧ್ಯತೆ ಇದೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗರ್ಭಿಣಿಯಾಗಿದ್ದರೂ ಜಿಮ್ ನಲ್ಲಿ ನಟಿ ಸಮಂತಾ ವರ್ಕ್ ಔಟ್ : ವಿಡಿಯೋ ವೈರಲ್ ಸಂಪುಟ ವಿಸ್ತರಣೆ : ಜು. 5ಕ್ಕೆ ಡಿ. ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಗೆ ಮಲಗಿದ್ದಾಗ ಗಂಡನ ಖಾಸಗಿ ಭಾಗ ಕತ್ತರಿಸಿದ ಹೆಂಡತಿ : ವಿಡಿಯೋ ವೈರಲ್ಈ ಭಾಗದ ವಿದ್ಯಾರ್ಥಿಗಳಿಗೆ ಶೋ ಬದಲಿ ಚಪ್ಪಲಿ ವಿತರಣೆ 1,800 ಕಿ.ಮೀ ಸೈಕಲ್ ಸವಾರಿ ಮಾಡಿ ಬೆಂಗಳೂರಿಗೆ ಬಂದ ಹಾರ್ದಿಕ್ ಪಾಂಡ್ಯ ಅಭಿಮಾನಿ ಈ ಬಾರಿ ಆಗಸ್ಟ್ ನಲ್ಲಿ ವಿಧಾನ ಮಂಡಲದ ಮುಂಗಾರು ಅಧಿವೇಶನಇರಾಕ್‌ನ ಸಂಸದೆ ಮನೆ ಮೇಲೆ ದಾಳಿ : 27ಕೆಜಿ ಚಿನ್ನ, ಬಂಗಾರದ ಒಳ ಉಡುಪು, 927 ಕೋಟಿ ರೂ. ವಶಕ್ಕೆ ತಿಂಗಳಿಗೆ 2 ದಿನ ಮಂತ್ರಿಗಳು ಜನರ ಬಳಿ ಹೋಗುವುದು ಕಡ್ಡಾಯ : ಡಿ. ಕೆ ಶಿವಕುಮಾರ್ ರಾಜ್ಯದ ವಿವಿಧೆಡೆ ಬಾಂಬ್ ಸ್ಫೋಟದ ಸರಣಿ ಬೆದರಿಕೆ : ಕೋರ್ಟ್, ಇಸ್ರೋ ಹಲವೆಡೆ ಬೆದರಿಕೆ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ತುರ್ತು ಪರಿಸ್ಥಿತಿ ಯೋಜನೆ ಜಾರಿಗೊಳಿಸಿ : ಆರ್. ಅಶೋಕ್