Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಾರ್ದಿಕ ಪಾಂಡ್ಯಾರನ್ನು ಕೈ ಬಿಟ್ಟಿದ್ದು ಯಾಕೆ?

ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಆಯ್ಕೆದಾರರ ನಿರ್ಧಾರ

Advertisement


ಇಂಗ್ಲೆAಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಿಮಿಯರ್ ಆಲರೌಂಡರ್ ಹಾರ್ಧಿಕ ಪಾಂಡ್ಯಾ ಅವರನ್ನು ಕೈ ಬಿಟ್ಟಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ತಂಡ ಪ್ರಕಟಣೆಯ ನಂತರ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ಹಾರ್ಧಿಕ ಪಾಂಡ್ಯಾ ಅವರನ್ನು ಕೈ ಬಿಟ್ಟಿದ್ದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವುದೇ ಕಾರಣವನ್ನು ನಮೂದಿಸಿಲ್ಲ.
ಪಾಂಡ್ಯಾ ಗಾಯಗೊಂಡಿದ್ದಾರಾ? ಅವರನ್ನು ಕೈ ಬಿಡಲಾಗಿದೇಯೇ? ಅಥವಾ ಅವರಿಗೆ ವಿಶ್ರಾಂತಿ ನೀಡಲಾಗಿದೇಯೇ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಏಕದಿನ ಹಾಗೂ ಟ್ವೆಂಟಿ-೨೦ ಪಂದ್ಯಗಳಲ್ಲಿ ಅವರು ಅತ್ಯುತ್ತಮ ಆಲರೌಂಡರ್ ಎನ್ನುವುದರಲ್ಲಿ ಯಾವುದೇ ಸಂದೇಹಗಳು ಇಲ್ಲ. ಕಪಿಲ್‌ದೇವ್ ನಂತರ ಉತ್ತಮ ವೇಗದ ಬೌಲಿಂಗ್ ಆಲರೌಂಡರ್ ಎಂದೂ ಕೂಡ ಪಾಂಡ್ಯಾ ಕರೆಸಿಕೊಂಡಿದ್ದಾರೆ.
ಜೂನ್ ೨೧ ರಂದು ಬಿಸಿಸಿಐ ಇಂಗ್ಲೆAಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ ನಂತರ ಆಯ್ಕೆದಾರರು ಪಾಂಡ್ಯಾ ಅವರನ್ನು ಕೈ ಬಿಟ್ಟ ಕುರಿತು ಯಾವುದೇ ಕಾರಣವನ್ನು ನೀಡಿಲ್ಲ ಎಂಬುದೇ ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಂಡಿರುವುದಕ್ಕೆ ಕಾರಣವಾಗಿದೆ. 
ಐಪಿಎಲ್ ೨೦೨೬ ರ ಪಂದ್ಯಗಳ ನಡುವೆಯೇ ಪಾಂಡ್ಯಾ ವಿಶ್ರಾಂತಿ ಪಡೆದು ಬೆಂಗಳೂರಿನ ಕ್ರಿಕೆಟ್ ಆಕಾಡೆಮಿಯಲ್ಲಿ ಕಾಲ ಕಳೆದರು. ಹೀಗಾಗಿ ಅವರನ್ನು ಕ್ರಿಕೆಟ್ ಆಕಾಡೆಮಿ ಪರಿವೀಕ್ಷಣೆಯಲ್ಲಿ ಮುಂದುವರೆಸಬೇಕೆAಬುದು ಆಯ್ಕೆದಾರರ ಅಭಿಪ್ರಾಯವಾಗಿದೆ ಎಂಬುದು ಕೂಡ ಖಚಿತಗೊಳ್ಳಬೇಕಿದೆ. 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST