Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ಲಕ್ಷ್ಯ ಏಕೆ?

ಸ್ಲಂ ಜನರಿಗೆ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು ಏನಾದವು?

Advertisement

ವಿಜಯನಗರ ಜಿಲ್ಲೆ (ಹೊಸಪೇಟೆ ): ಸ್ಲಂ ಜನಾಂದೋಲನ ಕರ್ನಾಟಕ

3 ವರ್ಷ ಕಳೆದು ನಾಯತ್ವ ಬದಲಾದರು ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ಲಕ್ಷ್ಯ ಏಕೆ? ರಾಜ್ಯ ಪ್ರತಿನಿಧಿಗಳ ಸಮ್ಮೇಳದಲ್ಲಿ ಪ್ರಶ್ನಿಸೋಣ ಬನ್ನಿ. ಈ ತಿಂಗಳು
20 ರಂದು ಗದಗದ
ಲಯನ್ಸ್ ಕ್ಲಬ್,ನಲ್ಲಿ

'ಸರ್ವಜನಾಂಗದ ಶಾಂತಿಯ ತೋಟ" ಸಾಮಾಜಿಕ ನ್ಯಾಯ ಮತ್ತು ಗ್ಯಾರೆಂಟಿ ಯೋಜನೆಗಳ ನೆರವಿನೊಂದಿಗೆ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದು ಮುಖ್ಯಮಂತ್ರಿ ಬದಲಾವಣೆಯಾಗಿ ಅಧಿಕಾರ ಹಸ್ತಾಂತರ ಕೂಡ ಮಗಿದು ಹೊಯಿತು. ಆದರೆ ಕಳೆದ ಮೂರು ವರ್ಷಗಳ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಂ ಜನರಿಗೆ ನೀಡಿದ ಭರವಸೆಗಳ ಈಡೇರಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇಲ್ಲ.

ಇಂದು ಕಾಂಗ್ರೆಸ್ ಸರ್ಕಾರದ ಮೇಲೆ ಇದ್ದ ನಿರೀಕ್ಷೆಗಳು ಭ್ರಮನಿರಸನಗೊಳ್ಳುತ್ತಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬರ್ತಿ 3 ವರ್ಷಗಳು ತುಂಬಿದ ಮರುಕ್ಷಣವೇ ತುಮಕೂರಿನಲ್ಲಿ ಸಾಧನೆಗಳ ಸಮರ್ಪಣೆ ಮತ್ತು ಸಂಕಲ್ಪ ಸಮಾವೇಶವನ್ನು ಬರ್ಜರಿಯಾಗಿ ಮಾಡಿದ ಸಿದ್ದರಾಮಯ್ಯನವರು “ಸರ್ವಜನಾಂಗದ ಶಾಂತಿಯ ತೋಟ" ಪ್ರಣಾಳಿಕೆಯಲ್ಲಿ ಪಂಚ ಗ್ಯಾರೆಂಟಿಯೊಂದಿಗೆ 580 ಭರವಸೆಗಳಲ್ಲಿ 290 ಭರವಸೆಗಳನ್ನು ಈಗಾಗಲೇ ನೇರವೇರಿಸಿದ್ದು ಉಳಿದ ಭರವಸೆಗಳನ್ನು ಮುಂಬರುವ 2 ವರ್ಷಗಳಲ್ಲಿ ಈಡೇರಿಸುವುದಾಗಿ ಹೇಳಿದ್ದಾರೆ. ಆದರೆ ಸರ್ಕಾರ 2ನೇ ವರ್ಷದ ''ವಿಜಯ ನಗರ ಘೋಷಣೆಯಂತೆ ನೀಡಿದ ಭೂ ಗ್ಯಾರೆಂಟಿಯಂತೆ ಇಂದು 1.52 ಲಕ್ಷ ಜನರಿಗೆ ಹಕ್ಕುಪತ್ರ ನೀಡುತ್ತಿರುವ ಸಾಧನೆ ಮೈಲಿಗಲನ್ನು ಹೇಳಿರುವುದಷ್ಟೇ. ಸ್ಲಂ ಜನರ ಭೂ ಗ್ಯಾರೆಂಟಿಯನ್ನು ನೆನಗುದಿಗೆ ತಳ್ಳಿದ ಕಾಂಗ್ರೆಸ್ ಸರ್ಕಾರ ಮೂರು ವರ್ಷದಲ್ಲಿ ನೀಡಿದ ಹಕ್ಕುಪತ್ರ ಬರಿ 64 ಸಾವಿರ ಮಾತ್ರ ಹುಬ್ಬಳ್ಳಿಯ ಸಮಾವೇಶದಲ್ಲಿ ಘೋಷಿಸಿಕೊಂಡಿದ್ದು 1.84 ಲಕ್ಷ ಹಕ್ಕುಪತ್ರಗಳನ್ನ ನೀಡಿರುವುದಾಗಿ ಮಾಜಿ ವಸತಿ ಸಚಿವ ಜಮೀರ್ ಆಹ್ಮದ್ ಹೇಳಿಕೆ ನೀಡಿರುತ್ತಾರೆ. ಆದರೆ ಕಾವೇರಿ-2 ತಂತ್ರಾಂಶದಲ್ಲಿ ಸ್ಲಂ ಜನರಿಗೆ ಹಕ್ಕುಪತ್ರ ನೀಡಲು ನಗರ ಸ್ಥಳೀಯ ಸಂಸ್ಥೆಗಳಿಂದ ಇ-ಸ್ವತ್ತು ಕಡ್ಡಾಯಗೊಳಿಸಿ ಹಕ್ಕುಪತ್ರ ವಿತ್ತರಣೆ ಮತ್ತು ನೋಂದಣಿಯನ್ನು ನೆಲಕಚ್ಚುವಂತೆ ಮಾಡಿರುವುದೇ ಈ ಸರ್ಕಾರದ ಸಾಧನೆಯಾಗಿದೆ.

ಇಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಿದ್ದು ಮತ್ತು ಡಿ.ಕೆ.ಶಿ ಎಂಬ ಎರಡು ಪ್ರತಿಸ್ಪರ್ಧಿ ಅಧಿಕಾರ ಕೇಂದ್ರಗಳ ನಡುವಿನ ಗುದ್ದಾಟದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಿ ನಾಯಕತ್ವ ಬದಲಾವಣೆಯನ್ನು ಮಾಡಿದೆ. ಹಾಗೆಯೇ ವಿರೋಧ ಪಕ್ಷವಾಗಿ ಬಿ.ಜೆ.ಪಿ ಜನ ಸಾಮಾನ್ಯರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಚರ್ಚಿಸದೆ ಗಾಳಿಯಲ್ಲಿ ಗುಂಡು ಹೊಡಿಯುತ್ತಿದೆ. 2023ರಲ್ಲಿ ಸರ್ಕಾರ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹಾಗೂ ಬಜೆಟ್ ಭಾಷಣಗಳಲ್ಲಿ ಬಿ.ಜೆ.ಪಿಗೆ ನಿಜವಾದ ಪರ್ಯಾಯ ಸರ್ಕಾರ ಕೊಡುವುದಾಗಿ ಭರವಸೆ ನೀಡಿತ್ತು. ಆದರಲ್ಲು ವಿಶೇಷವಾಗಿ ಕೋಮುಸೌಹಾರ್ದ, ಸಾಮಾಜಿಕ ನ್ಯಾಯ, ಬಡಜನರ ಕಲ್ಯಾಣ, ಗ್ಯಾರೆಂಟಿ ಮತ್ತು ಜನಪರ ಅಭಿವೃದ್ಧಿಗಳ ಭರವಸೆಯನ್ನು ನೀಡಿತ್ತು. ಅವುಗಳ ಬಗ್ಗೆ ವಿಶ್ಲೇಷಿಸಿದರೆ ಕಳೆದ 3 ವರ್ಷಗಳಲ್ಲಿ ಸಿದ್ದು ಸರ್ಕಾರ ಮಾಡಿರುವ ಭ್ರಮನಿರಸನಗಳು ಮತ್ತು ವಚನ ಭಂಗಗಳು ಮಾತ್ರ ನಿರೀಕ್ಷೆಗೆ ಮೀರಿದೆ. ಈ ಮೂರು ವರ್ಷಗಳಲ್ಲಿ 6,200 ಕೋಟಿ ರೂಗಳನ್ನು ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಅನುಷ್ಟಾನಕ್ಕೆ ವಸತಿ ಗ್ಯಾರೆಂಟಿಯಾಗಿ ನೀಡಲಾಗಿತ್ತಾದರು ಬಿಡುಗಡೆಯ ಮೊತ್ತ ಮಾತ್ರ 1 ಸಾವಿರ ಕೋಟಿಯನ್ನು ಮೀರಲಿಲ್ಲ. 1.80 ಲಕ್ಷ ಮನೆಗಳ ಪೈಕಿ 81 ಸಾವಿರ ಮನೆಗಳು ಮಾತ್ರ ಪೂರ್ಣಗೊಂಡು ವಸತಿ ಯೋಜನೆ ಹಳ್ಳಹಿಡಿಯುವಂತೆ ಮಾಡಲಾಗಿದೆ. ಚಿತ್ರದುರ್ಗ ಘೋಷಣೆಯಲ್ಲಿ ಮನೆ ಇಲ್ಲದ

ಎಸ್.ಸಿ/ಎಸ್.ಟಿಗಳಿಗೆ ಉಚಿತವಾಗಿ ಮನೆ ನೀಡುವ ಭರವಸೆ ಇದುವರೆಗೂ ಈಡೇರಿಲ್ಲ. ಸ್ಲಂ ಜನರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಪಾಲು ನೀಡುವ, ನಗರ ಲ್ಯಾಂಡ್ ಬ್ಯಾಂಕ್ ನೀತಿಯನ್ನು ಜಾರಿಗೊಳಿಸುವ, ಸ್ಲಂ ಜನರಿಗೆ ಪ್ರತ್ಯೇಕ ಸಚಿವಾಲಯ ನೀಡುವ ಹಾಗೂ ನಗರ ಉದ್ಯೋಗ ಖಾತ್ರಿ ಜಾರಿಗೊಳಿಸುವ ಭರವಸೆಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಹಾಗೆಯೇ ಸ್ಲಂ ನಿವಾಸಿಗಳು ವಾಸ ಮಾಡುವ ಪ್ರದೇಶಗಳನ್ನು ಶ್ರಮಿಕ ವರ್ಗಗಳ ಪ್ರದೇಶ ಎಂದು ನಾಮಕರಣ ಮಾಡುವ ಆರ್ಥಾತ್ ಸರ್ಕಾರಕ್ಕೆ ನಯಾಪೈಸೆ ಖರ್ಚಾಗದ ಯೋಜನೆ ಜಾರಿ ಮಾಡದಿರುವುದು ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆ ತಡೆಯುವ ಸುತ್ತೋಲೆ ವಾಪಸ್ ಪಡೆಯದಿರುವುದು ಸ್ಲಂ ಜನರ ಮೇಲೆ ಸರ್ಕಾರಕ್ಕೆ ಇರುವ ದಿವ್ಯ ನಿರ್ಲಕ್ಷ್ಯತೆ ಸಾಕ್ಷಿಯಾಗಿದೆ. ಇದರ ಜೊತೆಗೆ ಕಳೆದ ಮೂರು ವರ್ಷಗಳಲ್ಲಿ ಜಾರಿಗೆ ತಂದ ಹಲವು ನೀತಿಗಳ ಬಗ್ಗೆ ಈಗಾಗಲೇ ವಿವಿದ ರೆತ. ಕಾರ್ಮಿಕ, ದಲಿತ, ಸಂ ನಿವಾಸಿಗಳು, ವಿದ್ಯಾರ್ಥಿ ಯುವಜನರು. ಮಹಿಳೆಯರು, ಟಾನ್‌ಜೆಂಡರ್ ಪಾಲ್ಗೊಂಡಿದ್ದಾರೆ ಎಂದು ಸ್ಲಂ ರಾಜ್ಯ ಸಂಚಾಲಕರು ನರಸಿಂಹಮೂರ್ತಿ,ವಿಭಾಗಿಯ ಸಂಚಾಲಕರು ಜನಾರ್ಧನ್, ಇಮ್ತಿಯಾಜ್,ಹೊಸಪೇಟೆ ವಿಭಾಗೀಯ ಸಂಚಾಲಕರು ಎಂಕಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವರದಿ : ಪಿ. ಶ್ರೀನಿವಾಸ್ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಲಂ ಜನರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ಲಕ್ಷ್ಯ ಏಕೆ? ಸತತ ಎರಡನೇ ಬಾರಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆಪತ್ನಿ ಹಾಗೂ ಮೂರು ತಿಂಗಳ ಹಸುಗೂಸಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಬ್ರಿಗೇಡಿಯರ್‌' ಎಂದು ಓಡಾಡುತ್ತಿದ್ದ 21 ವರ್ಷದ ಯುವಕ ಪೊಲೀಸ್ ಬಲೆಗೆ ಸೇನಾಪಡೆಗಳ ಮುಂದಿನ ಮುಖ್ಯಸ್ಥರಾಗಿ ಲೆಫ್ಟಿನೆಂಟ್‌ ಜನರಲ್ ಧೀರಜ್‌ ಸೇಠ್ ನೇಮಕಒಂದ ಕಚೇರಿಗಳಲ್ಲಿ ಒಂದೇ ಜಾತಿಯ ಅಧಿಕಾರಿಗಳು ಇರುವಂತಿಲ್ಲ. :ಡಿ. ಕೆ ಶಿವಕುಮಾರ್ ಖಡಕ್ ಸೂಚನೆ ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್‌ ಜ್ಯೂಸ್‌ ಸೇವನೆ : ಕಿಡ್ನಿ ವೈಫಲ್ಯವಾಗಿ ಯುವಕ ಸಾವುಭಾರತ ತಂಡಕ್ಕೆ ೭ ವಿಕೆಟ್‌ಗಳ ಸುಲಭ ಜಯಚೊಚ್ಚಲ ಪಂದ್ಯದಲ್ಲಿಯೇ ಮಿಂಚಿದ ಗರ‍್ನೋರ್ ಬ್ರಾರ್ಭಾರತ ತಂಡಕ್ಕೆ ೧೯೫ ರನ್‌ಗಳ ಗೆಲುವಿನ ಗುರಿ