ಗ್ಲಾಸ್ಗೋವ್: ಇಲ್ಲಿ ನಡೆದಿರುವ ಕಾಮನವೆಲ್ತ್ ಕ್ರೀಡಾಕೂಟದ ೭ ನೇ ದಿನ ಭಾರತದ ಬಾಕ್ಸರುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
೬ ನೇ ದಿನ ಎರಡು ರಜತ ಪದಕಗಳ ಸಾಧನೆ ಮಾಡಿ ಪದಕ ಪಟ್ಟಿಯನ್ನು ೧೨ ಕ್ಕೆ ಹಿಗ್ಗಿಸಿದ್ದ ಭಾರತೀಯ ಕ್ರೀಡಾಪಟುಗಳು ೭ ನೇ ದಿನವಾದ ಇಂದು ಕೂಡ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಮಹಿಳೆಯರ ಬಾಕ್ಸಿಂಗ್‌ನಲ್ಲಿ ೫೧ ಕೆ.ಜಿ. ವಿಭಾಗದಲ್ಲಿ ಸಾಕ್ಷಿ ಚೌಧರಿ ಸೆಮಿಫೈನಲ್ ತಲುಪುವ ಮೂಲಕ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.
ಐರ್ಯಲೆಂಸ್ ಸ್ಪರ್ಧಿ ಎದುರು ೫-೦ ರಿಂದ ಗೆದ್ದ ಸಾಕ್ಷಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ. ಯಾರಿಗೂ ಗೊತ್ತು ಚಿನ್ನದ ಪದಕ ಬಂದರೂ ಬರಬಹುದು.
ಮಹಿಳೆಯರ ವಿಭಾಗದ ೭೦ ಕೆ.ಜಿ. ವಿಭಾಗದಲ್ಲಿ ಅರುಂದತಿ ಚೌಧರಿ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸುತ್ತಿದ್ದು, ಇವರು ಗೆದ್ದರೆ ಇವರಿಂದ ಕೂಡ ಭಾರತ ಬಾಕ್ಸಿಂಗ್ಸ್ನಲ್ಲಿ ಪದಕದ ಆಸೆ ಇಟ್ಟುಕೊಳ್ಳಬಹುದು.


