ಚಿಂಚೋಳಿ:- ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಸೇಡಂ ವಿಧಾನಸಭೆ ಕ್ಷೇತ್ರದ ವಾಣಿಜ್ಯ ಗ್ರಾಮ ಎಂದೆ ಹೆಸರುವಾಸಿಯಾಗಿರುವ ಸುಲೇಪೇಟನಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಗ್ರಾಮದ ಸುತ್ತಮುತ್ತಲಿನ ಜನರು ವಿಜಯದಶಮಿ ಹಬ್ಬದ ಒಂಬತ್ತು ದಿನದ ಘಟ್ಟಿ ಹಾಕುವ ಜನರು ಅಂಗಡಿ ಮುಂಗಟ್ಟು ಹಾಗೂ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಇದೇ ರೀತಿ ಕಬ್ಬು ಬಾಳಿ ಶ್ರೀಗಂಧ ಮಾವಿನ ತೋರಣ ಮಣ್ಣಿನ ಹಣತೆ ಮಣ್ಣಿನ ಕುಳ್ಳಿ ತೆಗೆದುಕೊಳ್ಳುವವರು ಗಾಡಿಗಳ ಹತ್ತಿರ ಬಂದು ತೆಗೆದುಕೊಳ್ಳುತ್ತಿದ್ದರು ಅದೇ ರೀತಿ ಪ್ರತಿಯೊಂದು ಕಿರಾಣಿ ಅಂಗಡಿಗಳಲ್ಲಿ ಹಬ್ಬಕ್ಕೆ ಬೇಕಾಗುವಂತ ಸಾಮಗ್ರಿಗಳನ್ನು ಸುತ್ತಮುತ್ತಲಿನ ಗ್ರಾಮದ ಹೆಣ್ಣು ಮಕ್ಕಳು ಸಾಮಾನುಗಳನ್ನು ತೆಗೆದುಕೊಂಡು ತಮ್ಮ-ತಮ್ಮ ಗ್ರಾಮಕ್ಕೆ ಹೋಗುವಂತ ಸ್ಥಿತಿ ನಾವು ಬಸ್ ನಿಲ್ದಾಣದಲ್ಲಿ ನೋಡುತ್ತೇವೆ.
ವರದಿ ಸುನೀಲ್ ಸಲಗರ