Ad imageAd image

ಬನಶಂಕರಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಸಂತೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿದ ಪಾಲಕ ಪೋಷಕರು

Bharath Vaibhav
ಬನಶಂಕರಿ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಸಂತೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿದ ಪಾಲಕ ಪೋಷಕರು
WhatsApp Group Join Now
Telegram Group Join Now

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬನಶಂಕರಿ ಪಬ್ಲಿಕ್ ಸ್ಕೂಲ್ ಮತ್ತು ಪಿ ಯು ಕಾಲೇಜ್, ನೆಸ್ಟ್ (Nest) ಆಕಾಡೆಮಿ ಹೈದರಾಬಾದ ಸಹಯೋಗದೊಂದಿಗೆ ಮಕ್ಕಳ ಸಂತೆ ವಿನೂತನ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತರಕಾರಿ ಮಾರ್ಕೆಟ್ ಹೂವಿನ ಅಂಗಡಿ, ಕಬ್ಬಿಣದ ಜ್ಯೂಸು, ಮಿಟಾಯಿ ಪಾಪಡಿ, ಮಸಾಲ ರೈಸ್, ಬಜಿ, ವಡಾ ಪಾವ್, ತಾಜಾ ತಾಜಾ ತರಕಾರಿಗಳನ್ನು ಇಟ್ಟಿದ್ದು ವಿಶೇಷವಾಗಿತ್ತು.
ಮಕ್ಕಳಲ್ಲಿ ಪ್ರಪಂಚಕ ಜ್ಞಾನ ಸಂತೆಯಲ್ಲಿ ನಡೆಯುವ ಚಟುವಟಿಕೆಗಳು, ವ್ಯವಹಾರಿಕವಾಗಿ ಹೊರ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಮಕ್ಕಳ ಸಂತೆಯ ಕಾರ್ಯಕ್ರಮದ ಉದ್ದೇಶವಾಗಿತ್ತು. ಮಕ್ಕಳ ಈ ಎಲ್ಲ ಪ್ರದರ್ಶನವನ್ನು ನೋಡಿದ ಪಾಲಕರು ಪೋಷಕರು ತರಕಾರಿಗಳನ್ನು ತೆಗೆದುಕೊಂಡು, ತಿನಿಸು ತಿಂಡಿಗಳನ್ನು ತಿಂದು, ಮಕ್ಕಳಿಗೆ ಪ್ರೋತ್ಸಾಹಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಮಾತಾ ಕಲ್ಯಾಣ ತಾಯಿ ಧರ್ಮರ್ ಮಠದ ಧರ್ಮಾರ್ಧಿಕಾರಿಗಳಾದ ಶ್ರೀಯುತ ವಿಜಯ ಗಗನ್ ಧರ್ಮರ, ಬ್ರಹ್ಮಕುಮಾರಿ ರಾಜಯೋಗಿನಿ ರೇಣುಕಾ ಅಕ್ಕನವರ್, ಗುರು ಕೃಪಾ ಸೇವಾ ಸಂಸ್ಥೆಯ ಅಧ್ಯಕ್ಷರು ಸತೀಶ್ ಗೌಡ ಪಾಟೀಲ್, ನೆಸ್ಟ್ ಅಕಾಡೆಮಿ ಹೈದರಾಬಾದ್ ಸಂಸ್ಥಾಪಕರಾದ ಜಿ ಸಿ ನಾಗರಾಜ, ಗುತ್ತಿಗೆದಾರರಾದ ವಾಯ್ ವಾಯ್ ಬಿರಾದಾರ್, ಜಿಕೆ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿಗಳು ಎನ್ ಎಸ್ ಪಾಟೀಲ್, ಮುಖ್ಯ ಗುರುಗಳು ಗುರುಗಳು ಗುರುಮಾತೆಯರು ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವರದಿ :ಅಲಿ ಮಕಾನದಾರ

WhatsApp Group Join Now
Telegram Group Join Now
Share This Article
error: Content is protected !!