Ad imageAd image

ರಾಯಲ್ ಚಾಲೆಂಜರ್ಸ್ ತಂಡದ ನೂತನ ನಾಯಕನಾಗಿ ರಜತ್ ಪಾಟೀದಾರ್ ನೇಮಕ

Bharath Vaibhav
ರಾಯಲ್ ಚಾಲೆಂಜರ್ಸ್ ತಂಡದ ನೂತನ ನಾಯಕನಾಗಿ ರಜತ್ ಪಾಟೀದಾರ್ ನೇಮಕ
WhatsApp Group Join Now
Telegram Group Join Now

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ರಜತ್ ಪಾಟೀದಾರ್ ಅವರನ್ನ ನೇಮಕ ಮಾಡಲಾಗಿದೆ.

ಈ ಬಾರಿ ನಡೆದ ಮೆಗಾ ಆಯಕ್ಷನ್ನಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡು ಪ್ಲೆಸ್ಸಿಸ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಕೈ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಖಾಲಿ ಇದ್ದ ನಾಯಕ ಸ್ಥಾನಕ್ಕೆ ಇದೀಗ ಅವರನ್ನು ನೇಮಕ ಮಾಡಲಾಗಿದೆ.

2025ರ 18ನೇ ಆವೃತ್ತಿಯ ಐಪಿಎಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕೆ ಇಳಿಯುತ್ತಿದೆ. ಕ್ಯಾಪ್ಟನ್ ಯಾರು ಆಗ್ತಾರೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿಯ ಮೆಂಟರ್ ದಿನೇಶ್ ಅವರು ಮಾತನಾಡಿದ್ದರು.

ಭಾರತೀಯನೇ ಆರ್ಸಿಬಿ ತಂಡದ ನಾಯಕ ಆಗಲಿದ್ದಾರೆ. ಆದರೆ ಯಾರು ಎಂದು ಹೆಸರನ್ನು ಹೇಳಿರಲಿಲ್ಲ. ಅತ್ತ ಇನ್ನೊಂದು ಕಡೆ ಮತ್ತೆ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವ ಊಹಿಸಿಕೊಳ್ಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು.ಆದರೆ ರಜತ್ ಪಾಟೀದಾರ್ ಅವರ ಹೆಸರು ಘೋಷಣೆ ಮಾಡಿ ಎಲ್ಲದಕ್ಕೂ ತೆರೆ ಎಳೆಯಲಾಗಿದೆ.

ಅಜಿಂಕ್ಯ ರಹಾನೆ ನಂತರ ಪ್ರೀಮಿಯರ್ ದೇಶೀಯ ಟಿ 20 ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, 10 ಪಂದ್ಯಗಳಿಂದ 61 ಸರಾಸರಿಯಲ್ಲಿ 428 ರನ್ ಗಳಿಸಿದ್ದಾರೆ ಮತ್ತು 186.08 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

36ರ ಹರೆಯದ ಧೋನಿ 143 ಪಂದ್ಯಗಳಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಪರ ಮಹೇಂದ್ರ ಸಿಂಗ್ ಧೋನಿ ನಂತರ ನಾಯಕನಾಗಿ ಎರಡನೇ ಅತಿ ಹೆಚ್ಚು ಕಾಲ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.”ನಾನು ಮತ್ತು ತಂಡದ ಇತರ ಸದಸ್ಯರು ನಿಮ್ಮ ಹಿಂದೆಯೇ ಇರುತ್ತೇವೆ, ರಜತ್” ಎಂದು ಕೊಹ್ಲಿ ಫ್ರಾಂಚೈಸಿ ಹಂಚಿಕೊಂಡ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!