ಸಿರುಗುಪ್ಪ :- ನಗರದ ಎಸ್.ಎಲ್.ವಿ ಲಾಡ್ಜಿನ ಸಭಾಂಗಣದಲ್ಲಿ ರವಿವಾರ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಟಿ.ನರಸಿಂಹ ನಾಯಕ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಹಿರಿಯ ಮುಖಂಡರಿಂದ ನಡೆದ ಆಯ್ಕೆ ಸಮಿತಿಯಲ್ಲಿ ವಾಲ್ಮೀಕಿ ನಾಯಕ ಜನಾಂಗದ ಸಂಘಟನೆಗೆ ಪದಾಧಿಕಾರಿಗಳ ವಿದ್ಯಾರ್ಹತೆ, ಸಮಾಜದ ಹಿತಚಿಂತನೆ, ಎಲ್ಲಾ ಸಮುದಾಯಗಳೊಂದಿಗೆ ಬಾಂಧವ್ಯ ಹೊಂದಿರಬೇಕು.
ಮುಂಬರುವ ಶ್ರೀ ವಾಲ್ಮೀಕಿ ಜಯಂತಿ ಮುಂಚೆಯೇ ನಗರದಲ್ಲಿ ಶ್ರೀ ವಾಲ್ಮೀಕಿಯವರ ನೂತನ ಪುತ್ಥಳಿ ನಿರ್ಮಾಣ ಕಾರ್ಯ ನಡೆಯಬೇಕು.ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ನಿಷ್ಕ್ರಿಯಗೊಂಡಿರುವ ಗ್ರಾಮ ಘಟಕಗಳನ್ನು ಮರುಸಂಘಟಿಸಿ ಸಕ್ರಿಯಗೊಳಿಸಬೇಕು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರೆಕಿಸಲು ಮುಂದಾಗಬೇಕು ಅಂತಹ ಮಾನದಂಡಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆಗಳನ್ನು ಮುಖಂಡರಿಂದ ಪರಿಶೀಲಿಸಲಾಗುವುದೆಂದು ತಿಳಿಸಲಾಯಿತು.
ಆಯ್ಕೆ ಸಮಿತಿಯ ಸಲಹೆಯಂತೆ ಅಧ್ಯಕ್ಷರಾಗಿ ಉಡೇಗೋಳ ನರಸಿಂಹ ನಾಯಕ ಗೌರವಾಧ್ಯಕ್ಷರಾಗಿ ರಾರಾವಿ ಸಣ್ಣ ಯಲ್ಲಪ್ಪ, ಉಪಾಧ್ಯಕ್ಷರಾಗಿ ಹಳೇಕೋಟೆ ಹೆಚ್.ವಿ.ಈರಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಬಲಕುಂದಿ ಗಾದಿಲಿಂಗಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಟಿ.ಯಲ್ಲಪ್ಪ ಇನ್ನಿತರರ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಮುಖಂಡರು ಸನ್ಮಾನಿಸಿ ಅಭಿನಂದಿಸಿದರು.
ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಎಮ್.ವೀರೇಶಪ್ಪ, ಎಸ್.ಸಿ ಎಸ್.ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ವೆಂಕಟೇಶ್, ಮಹಾಸಭಾ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಮ್.ಹೊನ್ನಪ್ಪ, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ಅಧ್ಯಕ್ಷ ಬಿ.ಎಮ್.ಸತೀಶ್, ಬಿಜೆಪಿ ಪಕ್ಷದ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಮ್.ಎಸ್.ಸಿದ್ದಪ್ಪ, ನರೇಂದ್ರಸಿಂಹ, ಶೇಖಪ್ಪ, ಭೀಮಲಿಂಗಪ್ಪ, ಬಿ.ಕೆ.ಮಲ್ಲಯ್ಯ, ಬೆಳಗಲ್ ಬಸವರಾಜ, ಧರಪ್ಪ, ಬಿ.ಕೆ.ರಘು, ಹಿರಿಯ ಶಿಕ್ಷಕ ವಿರುಪಾಕ್ಷಪ್ಪ, ಮುದುಕಪ್ಪ ಹಾಗೂ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ