ಸಿಂಧನೂರ : –ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡುತ್ತಿರೋ ಇಲ್ಲವೋ ! ಒಂದು ಸುತ್ತಿನ ನಿರ್ಣಯಕ್ಕಾಗಿ ಆಗ್ರಹಿಸಿ ಅಕ್ಟೋಬರ್ 3 ರಂದು ಸಿಂಧನೂರು ಬಂದ್ ” ಆಗಸ್ಟ್ 01/2024 ರಂದು ಘನ ಸರ್ವೋಚ್ಚ ನ್ಯಾಯಾಲಯ ಆಯಾ ರಾಜ್ಯ ಸರ್ಕಾರಗಳಿಗೆ ನೀಡಿರುವ ಪರಮಾಧಿಕಾರದ ತೀರ್ಪನ್ನು ತಾವುಗಳು ಸ್ವಾಗತಿಸಿರುವುದನ್ನು ಹೇಳಿ ಒಂದು ವಾರದಲ್ಲಿ ಒಳ ಮೀಸಲಾತಿ ಜಾರಿಗೆ ತಾವು ಮುಂದಾಗಬಹುದು
ಎಂದು ಭಾವಿಸಿದ ನಮ್ಮ ನಿರೀಕ್ಷೆ ಹುಸಿಯಾಗಿದೆ ನ್ಯಾಯಾಲಯದ ತೀರ್ಪಿಗೆ ಮುನ್ನ ತಮ್ಮ ಹಾಗೂ ತಮ್ಮ ಪಕ್ಷವು ನುಡಿದಂತೆ ನಡೆಯುತ್ತಿವೆ ಎಂಬ ಭರವಸೆ ದಿನೇ ದಿನೇ ದೂರವಾಗುತ್ತಿದ್ದು ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುವದನ್ನು ಖಂಡಿಸಿ ಅಕ್ಟೋಬರ್ 3 ರಂದು ಸಿಂಧನೂರು ತಾಲೂಕ ಸಂಪೂರ್ಣ ಬಂದ್ ಮಾಡುವುದರ ಮೂಲಕ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಧರಣಿ ನಡೆಸಿ. ಶಾಲಾ= ಕಾಲೇಜು. ಕಿರಾಣಿ ವರ್ತಕರು. ಆಟೋ ಚಾಲಕರು. ಬೀದಿ ಬದಿಯ ವ್ಯಾಪರಸ್ತರು. ಹೋಟಲ್. ಬಟ್ಟೆ ಅಂಗಡಿಗಳು. ಬಸ್ ಗಳು ಓಡಾಟ ನಿಶಬ್ದ. ಸಿಂಧನೂರು ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದರು.
ಸುಮಾರು 30- 40 ವರ್ಷಗಳಿಂದ ನಿರಂತರವಾಗಿ ಕಾನೂನು ಹಾಗೂ ಬೀದಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ ಒಳ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್ ಆಯಾ ರಾಜ್ಯ ಸರ್ಕಾರಗಳಿಗೆ ಮೀಸಲಾತಿ ಜಾರಿ ಮಾಡಲು ಅಧಿಕಾರವಿದೆ ಎಂದು ತೀರ್ಪು ನೀಡಿದರೂ
ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ಮೂರು ತಿಂಗಳಿಂದ ಯಾವುದೇ ರೀತಿಯ ಕ್ರಮ ವಹಿಸದೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಹಲವು ಜಿಲ್ಲಾ -ತಾಲೂಕುಗಳಲ್ಲಿ ಹೋರಾಟಗಳನ್ನು ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿದರೂ ಸಹ ಸರ್ಕಾರ ಎಚ್ಚೆತ್ತು ಕೊಂಡಿಲ್ಲ ಇದರ ಭಾಗವಾಗಿ ಸಿಂಧನೂರು ಸಂಪೂರ್ಣ ಬಂದ್ ಕಾಲ್ ಮಾಡಿ ಸರ್ಕಾರಕ್ಕೆ ಇನ್ನೊಂದು ಅವಕಾಶ ನೀಡಿದ್ದೇವೆ
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಶೀಘ್ರವಾಗಿ ಒಳ ಮೀಸಲಾತಿ ಜಾರಿ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ತೀವ್ರವಾಗಿ ಹೋರಾಟ ಮಾಡುವುದರ ಮುಖಾಂತರ ಕರ್ನಾಟಕ ಬಂದ್ ಕಾಲ್ ಕರೆಯಬೇಕಾಗುತ್ತದೆ ಎಂದು ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಎಚ್ಚರಿಸುತ್ತದೆ ಎಂದು ಮಾನ್ಯ ತಹಶೀಲ್ದಾರ್ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಐಕ್ಯ ಹೋರಾಟ ಸಮಿತಿಯ ಸಂಚಾಲಕ ಸದಸ್ಯರಾದ ಮುಖಂಡರಾದ – ಮರಿಯಪ್ಪ ಜಾಲಿಹಾಳ್. ಬೋನಂಚರ್. ಅಲ್ಲಮಪ್ರಭು ಪೂಜಾರಿ. ಅಂಬ್ರುಸ್. ಯಮುನಪ್ಪ bsnl. ಹನುಮಂತ ಪನ್ನೂರ್.. ಅಂಬರೀಶ್ ಗಿರಿಜಾಲಿ. ಮಾದೇವ ದಮತಿ. ರಾಮಣ್ಣ ಸಾಸಲಮರಿ. ಹುಸೇನಪ್ಪ ಶ್ರೀ ಪುರಂ ಜಂಕ್ಷನ್. ಹನುಮಂತ ಹಂಪನಾಳ. ಮೌನೇಶ್ ಜಾಲವಾಡಗಿ. ಯಲ್ಲಪ್ಪ ಯದ್ದಲದೊಡ್ಡಿ. ಮೌಲಪ್ಪ ಐಹೊಳಿ. ಶಿವರಾಜ್ ಉಪ್ಪಲದೊಡ್ಡಿ. ಹನುಮಂತ ದೀನ ಸಮುದ್ರ. ನಾಗರಾಜ್ ಸಾಸಲಮರಿ. ಆಲಂ ಭಾಷಾ. ಬೂದಿವಾಳ. ಪಂಪಾಪತಿ ಹಂಚಿನಾಳ. ಹಸೇನಪ್ಪ ಸುಲಂಗಿ. ದುರ್ಗೇಶ್ ಬಾಲಿ. ಸಂಗಮೇಶ್ ಮುಳ್ಳೂರು. ಮಹೇಶ್ ಸಿಂದನೂರ. ಚಿಟ್ಟಿಬಾಬು. ಇನ್ನಿತರ ಇದ್ದರು
ವರದಿ:- ಬಸವರಾಜ ಬುಕ್ಕನಹಟ್ಟಿ