ಹುಕ್ಕೇರಿ:-ಒಳಮೀಸಲಾತಿ ಜಾರಿಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಇಂದು ಹುಕ್ಕೇರಿಯ ಪ್ರವಾಸಿ ಮಂದಿರದಿಂದ ತಶೀಲ್ದಾರ ಕಛೇರಿವರಿಗೆ ಪ್ರತಿಭಟನೆ ಮತ್ತು ಹೋರಾಟದಲ್ಲಿ ಸಾವಿರಾರು ಜನರು ಆಗಮಿಸಿದ್ದು ಹುಕ್ಕೇರಿ ತಾಲೂಕಿನ ಎಲ್ಲ ಪರಿಶಿಷ್ಟ ಜಾತಿಗಳ ಸಮುದಾಯ ಒಕ್ಕೂಟದಿಂದ ಬಹೃತ ಹೋರಾಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿದು.
ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತೀರ್ಮಾನ ಮಾಡಿದರು ಇಂದಿನ ರಾಜ್ಯ ಸರಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಆದಷ್ಟು ಬೇಗ ಸಚಿವ ಸಂಪುಟ ಸಭೆಯನ್ನು ಕರೆದು ಒಳ ಮೀಸಲಾತಿಯನ್ನು ಜಾರಿಗೆಯನ್ನು ಮಾಡಿ ಇಲ್ಲವಾದರೆ ತಾವು ಸರಿಯಾಗಿ ತೀರ್ಮಾನ ತೆಗೆದುಕೊಳ್ಳದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವದು ಮತ್ತು ತಮ್ಮ ಪಕ್ಷವು ಘೋಷಿಸಿದ ಪಂಚ ಗ್ಯಾರಂಟಿಗಳಿಗೆ ನಮ್ಮ ಸಮುದಾಯದ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಳಕೆ ಮಾಡಿಕೊಂಡಿದ್ದೀರಿ ಆದರು ಕೂಡ ಬಹಳ ಅತ್ಯಂತ ಸಹನೆಯಿದ್ದವೆ ತಾವು ಅರ್ಥಮಾಡಿಕೊಳ್ಳಿ.
ಒಳ ಮೀಸಲಾತಿ ನಮ್ಮ ಹಕ್ಕು ಒಳ ಮೀಸಲಾತಿ ಆದಷ್ಟು ಬೇಗ ಜಾರಿಗೆ ಮಾಡಿಕೊಡಿ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಮಾಧ್ಯಮದೊಂದಿಗೆ ಹೇಳಲಾಯಿತು.ದಂಡ ಅಧಿಕಾರಿಗಳಾದ ಮಂಜುಳಾ ನಾಯಕ, ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರಿಯಪ್ಪ ಗುಡ್ಡೆನವರ, ಬಾಹುಸಾಬ್ ಪಾಂಡ್ರೆ,ಶಶಿಕಾಂತ ಹೊನ್ನಳ್ಳಿ, ಶಂಕರ ಕಟ್ಟಿಮನಿ, ಕಾಡೆಶ ಹೊಸಮನಿ, ಅರುಣ ಮಾಳಗೆ, ಚಂದ್ರು ಹರಿಜನ, ಶ್ರೀಕಾಂತ ಹರಿಜನ ಬಸುರಾಜ ದೊಡ್ಡಮನಿ , ಕುಮಾರ ಕಡಟ್ಟಿ,ವಿಠ್ಠಲ ಮಾದರ, ರೂಪಾ ವಾಳವಿ,ಶಾಂತ ಯಾರಗಟ್ಟಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಸದ್ಯಸರು ಹಾಗೂ ಸಾವಿರಾರ ಜನರು ಉಪಸ್ಥಿತರಿದ್ದರು.
ವರದಿ:- ಶಿವಾಜಿ ಎನ ಬಾಲೆಶಗೋಳ