ಧಾರವಾಡ : ಈ ಬಾರಿ ಸಚಿವ ಸ್ಥಾನ ನನಗೂ ಕೊಡ್ತಾರೆ..ಕೊಡಲೇ ಬೇಕು. ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಿಶ್ಚಿತವಾಗಿಯೂ ನನಗೆ ಸಚಿವ ಸ್ಥಾನ ಕೊಡಲಿದ್ದಾರೆ.ಮಾರ್ಚ್ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಇನ್ನು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಅಧಿಕಾರದ ಹಂಚಿಕೆ ಚರ್ಚೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ಅವಧಿಗೋ ಇಲ್ಲ ಸಿಎಂ ಬದಲಾವಣೆಯೋ ಎಲ್ಲವೂ ನಮ್ಮ ಹೈಕಮಾಂಡ್ಗೆ ಬಿಟ್ಟ ವಿಚಾರ.
ನಾನು ಆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಮುಂದಿನ ಅವಧಿಯವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆಂಬ ಸಚಿವ ಶಿವಾನಂದ ಪಾಟೀಲ್ ಅವರು ಹೇಳಿದ್ದೂ ನನಗೆ ಗೊತ್ತಿಲ್ಲ ಎಂದರು.
ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಚೇಂಜ್ ಎಂಬ ಚರ್ಚೆಯ ವಿಚಾರಗಳು ನನ್ನ ಗಮನಕ್ಕೆ ಇಲ್ಲ. ಪಕ್ಷದಲ್ಲಿ ನನಗೆ ಏನು ಜವಾಬ್ದಾರಿ ಕೊಟ್ಟಿದ್ದಾರೋ ಅದನ್ನು ಮಾಡುವೆ. ಏನೇ ನಿರ್ಧಾರಗಳಿರಲಿ… ಅದೆಲ್ಲವೋ ದೊಡ್ಡವರಿಗೆ ಸಂಬಂಧಿಸಿದೆ. ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತೇ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಇನ್ನು ಕೋಲಾರದಲ್ಲಿ ನಾಲ್ವರು ಶಾಸಕರು ಇದ್ದೇವೆ. ಜಿಲ್ಲೆಗೆ ಈ ಬಾರಿ ಒಂದಾದರೂ ಸಚಿವ ಸ್ಥಾನ ನೀಡುವ ಭರವಸೆ ಇದೆ. ನನಗೆ ಸಚಿವ ಸ್ಥಾನ ಸಿಕ್ಕರೂ, ಬೇರೆಯವರಿಗೆ ಸಿಕ್ಕರೂ ಸಂತೋಷ ಎಂದು ಮಾಲೂರು ಶಾಸಕ ನಂಜೇಗೌಡ ಅವರು ಕೋಲಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.