Ad imageAd image

ಅಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಯಾವುದೇ ಅಹಿತಕರ ನಡೆಯದಂತೆ ಸರಳವಾಗಿ ನಡೆಯಿತು.

Bharath Vaibhav
ಅಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಯಾವುದೇ ಅಹಿತಕರ ನಡೆಯದಂತೆ ಸರಳವಾಗಿ ನಡೆಯಿತು.
WhatsApp Group Join Now
Telegram Group Join Now

ಮೊಳಕಾಲ್ಮುರು:- ಅಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯು ಸೋಮವಾರ ನಡೆಯಿತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಿ ಟಿ ಶ್ರೀನಿವಾಸ್ರು ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿಯವರಿಗೆ ನೇರವಾಗಿ ಫೈಟ್ ಇದ್ದರೂ ಕೂಡ ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಕೂಡ ಕಣದಲ್ಲಿ ಇದ್ದರೂ. ಶಿಕ್ಷಕರ ಸಮಸ್ಯೆಗಳಿಗೆ ಕಾಂಗ್ರೇಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಯಗಳು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.

ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಸೋಮವಾರ ನಡೆದ ಅಗ್ನೇಯ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮತದಾನ ನಡೆಸುವ ಸಮಯದಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳುತ್ತಾ, ಎನ್ ಪಿ ಎಸ್, ಪೆನ್ಷನ್ ಮತ್ತು ಇತರೆ ಸಮಸ್ಯೆಗಳನ್ನು ಬಹಳ ದಿನಗಳಿಂದ ಶಿಕ್ಷಕರು ಅನುಭವಿಸುತ್ತಿದ್ದಾರೆ. ಡಿ ಟಿ ಶ್ರೀನಿವಾಸ್ ರವರು ಸಮಾಜ ಮುಖಿ ವ್ಯಕ್ತಿಯಾಗಿದ್ದು ಇವರನ್ನು ಗೆಲ್ಲಿಸಿದ್ದಲ್ಲಿ ಅಭಿವೃದ್ಧಿ ಆಗುತ್ತದೆ ಎಂದು ಮಾಜಿ ಶಾಸಕಿಯಾದ ಪೂರ್ಣಿಮಾ ಶ್ರೀನಿವಾಸ್ ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಸಕಾಲಕ್ಕೆ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಕಾಂಗ್ರೇಸ್ ಪಕ್ಷಕ್ಕೆ ಮಾತ್ರ ಸಾಧ್ಯ ಎನ್ನುವುದು ಕಾಂಗ್ರೇಸ್ ಲೆಕ್ಕಾಚಾರ.

ಅದೇ ರೀತಿ ಮಾಜಿ ಶಾಸಕರಾದ ಎಸ್ ತಿಪ್ಪೇಸ್ವಾಮಿ ಮಾತನಾಡಿ ಬಿಜೆಪಿ ಪಕ್ಷದ ವೈ ಎ ನಾರಾಯಣ ಸ್ವಾಮಿ ಸುಮಾರು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಹಾಗೂ ಶಿಕ್ಷಕರ ಜೊತೆ ತಮ್ಮ ಕುಂದು ಕೊರತೆಗಳನ್ನು ಮತ್ತು ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಬಿಜೆಪಿ ಪಕ್ಷಕ್ಕೆ ಮಾತ್ರ ಸಾಧ್ಯ ಎಂದರು ಏನೇ ಇರಲಿ ಮತ ಎಣಿಕೆ ಆಗುವವರೆಗೂ ಯಾರು ಗೆಲ್ಲುತ್ತಾರೆ ಅನ್ನುವ ಲೆಕ್ಕಾಚಾರದಲ್ಲಿ ಎರಡು ಪಕ್ಷಗಳು ಮುಳುಗಿದ್ದಾರೆ.ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು ಪಧಾಧಿಕಾರಿಗಳು ಶಿಕ್ಷಕರ ಮನ ಹೋಲಿಕೆ ಮಾಡಿ ತಮ್ಮ ಪಕ್ಷದವರಿಗೆ ಮತ ಹಾಕಬೇಕು ಎಂದು ಹೇಳುತ್ತಿರುವುದು ಸಾಮಾನ್ಯವಾಗಿತ್ತು.

ಸಂದರ್ಭದಲ್ಲಿ ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ ಯೋಗೇಶ್ ಬಾಬು ತಮ್ಮ ಅನಿಸಿಕೆಗಳನ್ನು ತಿಳಿಸಿದರು.ಮಾಜಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ಪಟೇಲ್ ಜಿ ಪಾಪನಾಯಕ, ಜಿಂಕಾ ಶ್ರೀನಿವಾಸ್,ಪಪ ಸದಸ್ಯರು ಅಬ್ದುಲ್, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ ಪ್ರಕಾಶ್ ಬಿಜೆಪಿ ಮಂಡಲ ಅಧ್ಯಕ್ಷರಾದ ಮಂಜುನಾಥ್, ಕಿರಣ್ ಗಾಯಕ್ವಾಡ್ ಶಾಂತವೀರಣ್ಣ, ಪ್ರಭು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರುಗಳು ಇನ್ನು ಹಲವರು ಉಪಸ್ಥಿತರಿದ್ದರು.

ವರದಿ:-  ಪಿ ಎಮ್ ಗಂಗಾಧರ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!