ಬೆಳಗಾವಿ: ಕಾರೊಂದು ಹರಿದು ಹತ್ತು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅಥಣಿ ಪಟ್ಟಣದ ರಡ್ಡೆರಟ್ಟಿ ಗ್ರಾಮದ ಅಗಸ್ತ್ಯ ಕನಮಡಿ ಮೃತ ಬಾಲಕ. ರಸ್ತೆ ಬದಿ ಬಾಲಕ ನಡೆದು ಹೋಗುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರು ಬಾಲಕನಿಗೆ ಡಿಕ್ಕಿ ಹೊಡೆದು, ಆತನ ಮೇಲೆಯೇ ಹರಿದು ಹೋಗಿದೆ. ಸ್ಥಳದಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.
ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದ. ಸಿಸಿಟಿವಿ ಆಧಾರದ ಮೇಲೆ ಕಾರು ಚಾಲಕ ಆರೋಪಿ ರಾಹುಲ್ ಹಂಡೇಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.