ಕೋಝಿಕ್ಕೋಡ್ : ಮಕ್ಕಳಿಗೆ ಆಟವಾಡಲು ಬಾಟಲಿ ಕೊಡುವ ಪೋಷಕರೇ ಎಚ್ಚರ. ಕೇರಳದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಎಂಟು ತಿಂಗಳ ಮಗುವೊಂದು ಗಂಟಲಿನಲ್ಲಿ ಶಾಂಪೂ ಬಾಟಲಿಯ ಮುಚ್ಚಳ ಸಿಲುಕಿಕೊಂಡು ಸಾವನ್ನಪ್ಪಿದೆ.
ಕೋಯಿಕ್ಕೋಡ್ ನ ಮೊಹಮ್ಮದ್ ಹಾಗೂ ಅಬಿನಾ ಎಂಬ ದಂಪತಿಯ 8 ತಿಂಗಳ ಮಗು ಮನೆಯ ಆವರಣದಲ್ಲಿ ಶಾಂಪೂ ಬಾಟಲಿ ಹಿಡಿದುಕೊಂಡು ಆಟವಾಡುತಿತ್ತು.
ಮಗು ಬಾಟಲಿ ಮುಚ್ಚಳ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದೆ. ಪರಿಣಾಮ ಮುಚ್ಚಳ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರಾಡಲು ಆಗದೇ ಪ್ರಜ್ಞೆ ತಪ್ಪಿದೆ.
ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿತ್ತು. ಮಗುವಿನ ಶವದ ಪೋಸ್ಟ್ ಮಾರ್ಟಮ್ ಮಾಡುವಾಗ ಗಂಟಲಿನಲ್ಲಿದ್ದ ಮುಚ್ಚಳವನ್ನು ತೆಗೆಯಲಾಗಿದೆ.