ಸೇಡಂ:– ತಾಲೂಕಿನಲಿ ಅಡಕಿ ಅತಿ ದೊಡ್ಡ ನಾಡ ಕಚೇರಿಯಾಗೀದ್ದು ಇಲ್ಲಿ ರೈತರ ಕೇಂದ್ರ ಇರುವುದರಿಂದ ಬೀಜಗಳಿಗಾಗಿ ತಾಡಪತ್ರಿಗಳಿಗಾಗಿ ಇನ್ನು ಅನೇಕ ರೈತರ ಸಾಮಗ್ರಿಗಳಿಗೆ ರೈತ ಕೇಂದ್ರಕ್ಕೆ ರೈತರು ಬರುತ್ತಾರೆ ಉಪಾ ತಹಸಿಲ್ದಾರರ ಕಾರ್ಯಾಲಯ ಇರುವುದರಿಂದ ವಿಧವ ವೇತನ ಶಿಷ್ಯ ವೇತನ ಸಂಧ್ಯಾ ಸುರಕ್ಷಾ ಯೋಜನೆ ಜಾತಿ ಪ್ರಮಾಣ ಪತ್ರಗಳಿಗಾಗಿ ಅನೇಕ ವಿದ್ಯಾರ್ಥಿಗಳು ರೈತರು ಕೂಲಿ ಕಾರ್ಮಿಕರು ಬರುತ್ತಾರೆ .
ಇನ್ನೂ ಸುತ್ತಮುತ್ತಲು ಅನೇಕ ಹಳ್ಳಿಗಳು ರಂಜೋಳ ಚಿಟಿಕನಹಳ್ಳಿ, ಅಮರವಾದಿ, ಇಮಾಡಪುರ್, ಮಾದರ, ನಾಗಸನಹಳ್ಳಿ, ಕೊಂತನಪಲ್ಲಿ, ಸೋಂಪಲ್ಲಿ ಹೂಡ ರಾಜೋಳ ಇನ್ನು ಅನೇಕ ಹಳ್ಳಿಗಳ ರೈತರು ಕಾರ್ಮಿಕರು ವಿದ್ಯಾರ್ಥಿಗಳು ಹಿರಿಯ ನಾಗರಿಕರು ಈ ಗ್ರಾಮಕ್ಕೆ ಬಂದು ದಿನನಿತ್ಯ ಕೆಲವು ಕಾರ್ಯಗಳಿಗೆ ಬಂದು ಆಧಾರ್ ಕಾರ್ಡ್ ತಿದ್ದುಪಡಿಯಾಗಲಿ ಹೊಸ ಆಧಾರ್ ಕಾರ್ಡ್ಗಳಿಗಾಗಿ ಅರ್ಜಿ ಸಲ್ಲಿಸುವುದಾಗಲಿ ಬರುತ್ತಿದ್ದರು .
ಕೆಲವು ದಿನಗಳಿಂದ ಆಧಾರ್ ಕೇಂದ್ರ ಸ್ಥಗಿತಗೊಂಡಿರುವುದರಿಂದ ನಾಗರಿಕರೇ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗಿದೆ ಸುಮ್ಮನೆ ಸುಳ್ಳು ಆರೋಪಗಳನ್ನು ನಾಡಕಚೇರಿಯ ಮೇಲೆ ಮಾಡಿ ಆಧಾರ್ ಕೇಂದ್ರ ಸ್ಥತಗಿತಗೊಳಿಸಿದ್ದು ತುಂಬಾ ಖಂಡನಿಯ ಅತಿ ಶೀಘ್ರದಲ್ಲಿ ಆಧಾರ್ ಕೇಂದ್ರ ಪ್ರಾರಂಭಿಸದಿದ್ದರೆ ಆಡಿಕಿ ಗ್ರಾಮದ ನಾಡಕಚೇರಿ, ಎದುರುಗಡೆ ಆಧಾರ್ ಕೇಂದ್ರ ಪ್ರಾರಂಭಿಸುವವರೆಗೂ ಉಪವಾಸ ಸತ್ಯಾಗ್ರ ಕೂಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಡಾಕ್ಟರ್ ರಾಮಚಂದ್ರ ಗುತ್ತೇದರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.




