Ad imageAd image

ಸರಕಾರದ ಖಜಾನೆಗೆ ಕನ್ನ ಹಾಕಿರುವ ಪ್ರಕರಣ ಇದೀಗ

Bharath Vaibhav
ಸರಕಾರದ ಖಜಾನೆಗೆ ಕನ್ನ ಹಾಕಿರುವ ಪ್ರಕರಣ ಇದೀಗ
WhatsApp Group Join Now
Telegram Group Join Now

ಇಳಕಲ್:-ನಗರದಲ್ಲಿನ ಅಂಗನವಾಡಿ ಕಾರ್ಯಕರ್ತರು, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಮೇಲ್ವಿಚಾರಕಿಯರು ಷಾಮೀಲಾಗಿ ಸರಕಾರದ ಖಜಾನೆಗೆ ಕನ್ನ ಹಾಕಿರುವ ಪ್ರಕರಣ ಇದೀಗ ಇಳಕಲ್ ನಗರದ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ.

ಈ ವಿಷಯ ಮಾಧ್ಯಮಗಳು ಮತ್ತು ಪತ್ರಿಕೆಗಳಿಗಳಲ್ಲಿ ಹೇಗೆ ಬಹಿರಂಗವಾಯಿತು ಎಂದು ಅಂಗನವಾಡಿ ಕಾರ್ಯಕರ್ತರ ವಲಯದಲ್ಲಿ ಆಶ್ಚರ್ಯಗಳು ವ್ಯಕ್ತವಾಗಿವೆ.ಅಂಗನವಾಡಿಗಳಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ಹಾಗೂ ಪ್ರತಿಭಟನೆಗಳಿಗೆ ಪತ್ರಕರ್ತರನ್ನು ಆಹ್ವಾನಿಸುತ್ತಿದ್ದ ಅಂಗನವಾಡಿ ಪ್ರಮುಖರು, ಸೋಮವಾರ ನಡೆಸಿದ ಪೋಷಣ್ ಮಾಸಾಚರಣೆ ಬಹಿರಂಗ ಕಾರ್ಯಕ್ರಮಕ್ಕೆ ಯಾವ ಪತ್ರಕರ್ತರನ್ನು ಆಹ್ವಾನಿಸಲಿಲ್ಲ.

ಸದರಿ ಕಾರ್ಯಕ್ರಮದ ವಿಚಾರ ಗೊತ್ತಾಗಿ ಕಾರ್ಯಕ್ರಮದ ಸಭಾಂಗಣಕ್ಕೆ ಹೋದ ಪತ್ರಕರ್ತರೋಬ್ಬರನ್ನು ಅಂಗನವಾಡಿ ಸಂಘಟನೆ ಪ್ರಮುಖರೊಬ್ಬರು ಗಾಬರಿಯಿಂದ ತಡೆದು ಹೊರಕ್ಕೆ ಕಳುಹಿಸಿದ ಪ್ರಸಂಗವೂ ನಡೆಯಿತು. ಕೆಲವು ಕಾರ್ಯಕರ್ತರು, “ಪತ್ರಕರ್ತರು ಬರಲಿ ಬಿಡು ಅಂದರೆ, ಇಲ್ಲ ಇಲ್ಲಾ, ಸಿಡಿಪಿಒ ಸಾಹೇಬರು ಯಾವ ಪತ್ರಕರ್ತರಿಗೂ ಕರೆಯಬೇಡಿ ಅಂತ ಹೇಳಿದ್ದಾರೆ” ಎಂದು ಅವರನ್ನು ಸುಮ್ಮನಿರಿಸಿದರು.

ಸಿಡಿಪಿಒ ಕಾರ್ಯಕ್ರಮಕ್ಕೆ ಬಂದ ನಂತರ ಗಡಿಬಿಡಿಯಲ್ಲಿ ಕಾರ್ಯಕ್ರಮ ಮುಗಿಯಿತು. ಆಮೇಲೆ ನಡೆದದ್ದೇ ಬಹಳ ವಿಚಿತ್ರ ಅನಿಸುತ್ತಿದೆ.ಅದೇನೆಂದರೆ, ಸಿಡಿಪಿಒ ಪತ್ರಕರ್ತರೊಬ್ಬರಿಗೆ ನಾಲ್ಕೈದು ಬಾರಿ ಮೊಬೈಲ್ ಕರೆ ಮಾಡಿ, ನಾನು ಮತ್ತು ಅಂಗನವಾಡಿ ಕಾರ್ಯಕರ್ತರು ಇಳಕಲ್ಲಿನ ಮಠದಲ್ಲಿ ಇದ್ದೇವೆ. ನಿಮ್ಮೊಂದಿಗೆ ಮಾತನಾಡಬೇಕು ಬನ್ನಿ ಎಂದು ಕರೆದರು.

ನನ್ನೊಂದಿಗೆ ಮಾತನಾಡುವುದೇನಿದೆ ಎಂದು ಪತ್ರಕರ್ತ ಪ್ರಶ್ನಿಸಿದಾಗ, “ನನಗೆ ಬಹಳ ಮಾನಸಿಕ ಹಿಂಸೆಯಾಗುತ್ತಿದೆ. ಇಳಕಲ್ಲಲ್ಲಿನ ಅಂಗನವಾಡಿಗಳ ಬಗ್ಗೆ ನೀವು ದಿನವೂ ಒಂದೊಂದು ವಿಷಯ ಹಾಕುತ್ತಿದ್ದೀರಿ. ಅಂಗನವಾಡಿ ಕಾರ್ಯಕರ್ತರು ಕಣ್ಣೀರು ಹಾಕುತ್ತಿದ್ದಾರೆ. ನಿಮಗೇನು ಬೇಕು ಕೇಳಿ, ಇಲ್ಲಿಗೆ ಬನ್ನಿ” ಅಂತ ನಾಲ್ಕೈದು ಬಾರಿ ಕರೆದರಂತೆ.

ಅಂಗನವಾಡಿ ಕೇಂದ್ರಗಳಿಗೆ ಚಕ್ಕರ್ ಹಾಕಿ, ಎಲ್ಲೆಲ್ಲೋ ಓಡಾಡುವ ಕಾರ್ಯಕರ್ತರಿಗೆ ಹೆದರಿ , ತಾವೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುದನ್ನೇ ಮರೆತ ಹುನಗುಂದದ ಸಿಡಿಪಿಒ ಅವರ ಸ್ಥಿತಿಯನ್ನು ಕಂಡರೆ ಅಯ್ಯೋ ಎನಿಸುತ್ತಿದೆ.”ತಾಲೂಕಿನಲ್ಲಿ ನನಗೆ ಎಲ್ಲಿಯೂ ಸಮಸ್ಯೆ ಇಲ್ಲ. ಇಳಕಲ್ ನಗರದ್ದೇ ನನಗೆ ದೊಡ್ಡ ಸಮಸ್ಯೆಯಾಗಿದೆ, ನಾನೇನಾದರೂ ಕ್ರಮ ಕೈಗೊಳ್ಳಲು ಹೋದರೆ ಅದು ನನಗೆ ಮುಳುವಾಗುತ್ತದೆ” ಎನ್ನುವ ಅಸಹಾಯಕತೆಯನ್ನು ಸಹ ವ್ಯಕ್ತಪಡಿಸುತ್ತಾರೆ.

ಸಿಡಿಪಿಒ ಹೀಗೇಕೆ ಮಾಡುತ್ತಾರೆ ಎಂದು ಅಂಗನವಾಡಿ ಕಾರ್ಯಕರ್ತರನ್ನು ಪ್ರಶ್ನಿಸಿದರೆ, “ಎದಕ ಏನೋ ಇಲ್ಕಲ್ಲಿಗೆ ಬರಬೇಕು ಅಂದ್ರೆ ಬಾಳ ಹೆದರಿಕೊಳ್ಳುತ್ತಾರೆ. ಅವರಿಗೆ ಏನಾಗಿದೆಯೋ ಏನೋ” ಎಂದು ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಇಳಕಲ್ ನಗರದ ಅಂಗನವಾಡಿ ಕೇಂದ್ರಗಳು, ಸರಕಾರದ ನಿಯಮಾನುಸಾರ ಸರಿಯಾದ ಸಮಯಕ್ಕೆ ನಡೆಯುತ್ತಿಲ್ಲ. ಫಲಾನುಭವಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ, ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎನ್ನುವ ಸಾರ್ವಜನಿಕ ಆಕ್ರೋಶಗಳು ಮಾಧ್ಯಮಗಳಲ್ಲಿ ಪ್ರಕಟವಾದ ನಂತರವೂ ಸಿಡಿಪಿಒ ಎಚ್ಚೆತ್ತುಕೊಂಡು ಕರ್ತವ್ಯ ನಿರ್ವಹಿಸುತ್ತಿಲ್ಲ. ಮಾಸಾಚರಣೆ ಕಾರ್ಯಕ್ರಮಕ್ಕೆ ಪತ್ರಕರ್ತರನ್ನು ಕರೆಯಬೇಡಿ ಅಂತ ಕಾರ್ಯಕರ್ತರಿಗೆ ಆದೇಶ ಮಾಡಿದ್ದ ಸಿಡಿಪಿಒ ಕಾರ್ಯಕ್ರಮ ಮುಗಿದ ನಂತರ “ನಿಮಗೇನು ಬೇಕು ಹೇಳಿ, ಬನ್ನಿ ಮಾತನಾಡೋಣ” ಎಂದು ಪತ್ರಕರ್ತರನ್ನು ಯಾಕೆ ಕರೆಯುತ್ತಿದ್ದಾರೆ ಅಂತಾ ಅರ್ಥವಾಗುತ್ತಿಲ್ಲ!

ಅಂಗನವಾಡಿಗಳಿಗೆ ಚಕ್ಕರ್ ಹಾಕಿ, ಕೆಲವು ಪತ್ರಕರ್ತರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಅಂಗನವಾಡಿ ಕಾರ್ಯಕರ್ತರ ಮೊಸಳೆ ಕಣ್ಣೀರಿಗೆ ‌ಸಿಡಿಪಿಒ ಹೆದರುತ್ತಿರುವುದು ವಿಚಿತ್ರವಾದರೂ ಸತ್ಯ.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!