ವಿಜಯಪೂರ:- ಹುತಾತ್ಮ ಪೊಲೀಸ್ ಸೋಮನಗೌಡ ಚೌದರಿಯವರು ಈ ಸಮಾಜಕ್ಕೆ ಮಾದರಿಯಾದ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದು ತಮ್ಮ ಚಿಕ್ಕ ವಯಸ್ಸಿನಲ್ಲೇ ಪೋಲಿಸ್ ಇಲಾಖೆಯ ಕರ್ತವ್ಯದಲ್ಲಿದ್ದರೂ ಸಾಮಾಜಿಕ ಕಾರ್ಯದ ಮೂಲಕ ಅವರ ಹೆಸರು, ಅಜರಾಮರವಾಗಿದೆ ಎಂದು ಶಶಿಧರ್ ಕೋಟಿ ಅವರು ಹೇಳಿದರು.
ದೇವರಹಿಪ್ಪರಗಿ ತಾಲೂಕಿನ ಸಲದ ಹಳ್ಳಿ ಗ್ರಾಮ ಸರಕಾರಿ ಹಿರಿಯ ಪ್ರಾಥಮಿ ಶಾಲೆ ಆವರಣದಲ್ಲಿ ನಡೆದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಂಗಳೂರಿನಲ್ಲಿ ಪೊಲೀಸ್ ಇಲಾಖೆಯಯಲ್ಲಿ ಸೇವೆಗೆ ಯೋಜನೆಯಾದ ಸೋಮನಗೌಡರು ಆ ಕರ್ತವ್ಯದ ಜೊತೆ ಜೊತೆಗೆ ಸಮಾಜಕ್ಕ ಕಾರ್ಯದಲ್ಲಿ ನಿರತರಾಗಿದ್ದರು. ಕರೋನಾ ಸಮಯದಲ್ಲಿ ತಮಗೆ ಬರುವ ಸಂಬಳದ ಜೊತೆ ಮನೆಯಿಂದ ಹಣವನ್ನು ತರಿಸಿಕೊಂಡು ಪ್ರತಿ ಗಲ್ಲಿ ಗಲ್ಲಿಗಳಿಗೆ ತಮ್ಮ ಸಹೋದ್ಯೋಗಿಗಳ ಜೊತೆ ಜನರಿಗೆ ಕಿಟ್ಟ ಆಚರಿಸುತ್ತಿದ್ದರು ವೃದ್ಧರಿಗೆ ಅಂಗವಿಕಲರಿಗೆ ಹಣಕಾಸಿನ ಸಹಾಯದ ಜೊತೆ ವೈದ್ಯಕಿ ಸೇವೆಯನ್ನು ಮಾಡಿದರು ಇದಕ್ಕೆ ನಿರ್ದೇಶನ ಅಲ್ಲಿಯ ಪತ್ರಿಕ ವರದಿಗಳು ನಾವು ನೋಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುತ್ತನಗೌಡ ಚೌದ್ರಿ ಅವರು ಬಸವ ತತ್ವದಂತೆ ಜೀವನವನ್ನು ಸಾಗಿಸಿದ ಇವರು ಸ್ವಾರ್ಥ ಜಗತ್ತಿನಲ್ಲಿ ನಿಸ್ವಾರ್ಥವಾಗಿ ಬಾಳಿದರು ಪೊಲೀಸ್ ಇಲಾಖೆಯಲ್ಲಿ ಇವರ ಸಮಾಜದ ಕಾರ್ಯವನ್ನು ಅವರ ಸಿಬ್ಬಂದಿ ವರ್ಗದವರೇ ನಮಗೆ ಹೇಳಿರುವುದರಿಂದ ನಮ್ಮ ಗ್ರಾಮದ ಹೆಮ್ಮೆಯ ಪುತ್ರ ಬಗ್ಗೆ ನಮಗೆ ಆಶ್ಚರ್ಯ ಉಂಟು ಮಾಡುತ್ತದೆ.
ಏಕೆಂದರೆ ತಾನೆ ರಕ್ತದಾನಿಗಳ ಗುಂಪನ್ನು ರಚನೆ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ರಕ್ತದ ಅವಶ್ಯಕತೆ ಇರುವವರಿಗೆ ತಾನೆ ರಕ್ತದಾನ ಮಾಡಿ ಜೀವನ ಉಳಿಸಿದ್ದು ಹಲವು ಉದಾಹರಣೆಗಳನ್ನು ಅವರ ಸಹೋದ್ಯೋಗಿಗಳ ಮೂಲಕ ನಮಗೆ ಗೊತ್ತಾಯಿತು ಸೋಮನಗೌಡ ತನ್ನ ಸೇವೆಯಲ್ಲಿ ಒಂದು ರೂಪಾಯಿ ಸ್ವಂತಕ್ಕೆ ಖರ್ಚು ಮಾಡದೆ ಸಾಮಾಜಿಕ ಕಾರ್ಯದಲ್ಲಿ ವಿನಿಯೋಗಿಸಿರುವುದು ಈಗಿನ ಯುವ ಪೀಳಿಗೆಗೆ ಮಾದರಿ ಎಂದರು
ಬಸನಗೌಡ ಚೌದ್ರಿ ( ಹೊಸಮನಿ) ಮಾತನಾಡಿ ಸೋಮನಗೌಡನ ಕರ್ತವ್ಯದಲ್ಲಿ ನಿಧನರಾದ ನಂತರ ಅವರ ಸಹೋದ್ಯೋಗಿಗಳು ಅವರ ಸ್ಮರಣಾರ್ಥ 2 ಲಕ್ಷ ರೂಪಾಯಿ ಸರ್ಕಾರಿ ಶಾಲೆಗೆ ಫಿಕ್ಸ್ ಡಿಪೋಸಿಟ್ ಮಾಡಿಸಿ ಪ್ರತಿ ವರ್ಷ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನು ಮತ್ತು ನೋಟ್ ಪುಸ್ತಕ ವಿತರಿಸಲು ನಿರ್ಧರಿಸಿದ್ದು ಅದರಂತೆ ನಾವು ಕಾರ್ಯನಿರ್ವಹಿಸುತ್ತೇವೆ ಅವರ ಸಹ ಉದ್ಯೋಗಿಗಳು ಅವರ ಮೇಲೆ ಇಟ್ಟ ಪ್ರೀತಿಗೆ ನಾವು ಆಭಾರಿಯಾಗಿದ್ದೇವೆ. ಸೋಮನಗೌಡ ಅವರ ಸಾಮಾಜಿಕ ಕಾರ್ಯಗಳನ್ನು ಸಮಾಜಿಕ ಕಾರ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು ಪ್ರಥಮ ಸ್ಥಾನವನ್ನು ಅಸಂತಪುರ್ ವಿದ್ಯಾರ್ಥಿ ಪರಶುರಾಮ್ ಮೋಪ್ಗಾರ್, ದ್ವಿತೀಯ ಸ್ಥಾನವನ್ನು ಸಲಾದಲ್ಲಿ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ವಾಲಿಕಾರ್, ತೃತೀಯ ಸ್ಥಾನವನ್ನು ಚಟ್ನಳ್ಳಿ ವಿದ್ಯಾರ್ಥಿನಿಗೆ ವಿತರಿಸಲಾಯಿತು, ಶಾಲೆಯ ಪ್ರತಿ ಒಂದು ವಿದ್ಯಾರ್ಥಿನಿಗೂ ನೋಟು ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾನಿಧ್ಯ ಈರಯ್ಯ ಹಿರೇಮಠ, ರಾಮಲಿಂಗಯ್ಯ ಹಿರೇಮಠ, ತಾಲೂಕು ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಸಿ ಬಿ ಗಡಗಿ, ಗುರಣಗೌಡ ಚೌದ್ರಿ, ಹಣಮಂತರಾಯ್ ಗೌಡ ಚೌದ್ರಿ, ಮಹಾಂತಗೌಡ ಚೌದ್ರಿ, ಸಾಹೇಬ ಗೌಡ ನಗನೂರ್, ಬಸನಗೌಡ ಪಾಟೀಲ್, ಮುಖ್ಯ ಗುರುಗಳಾದ, ಪತ್ತಾರ್, ಶಿಕ್ಷಕರಾದ, ಡಿ ಬಿ ಛಲವಾದಿ, ಬಸಲಿಂಗಯ್ಯ ಹಿರೇಮಠ್, ಮಲ್ಲಿನಾಥ್ ಮರಗೂರ, ಊರಿನ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ:- ಸಾಯಬಣ್ಣ ಮಾದರ




