ಸಿಂಧನೂರು :- 4 ಅಕ್ಟೋಬರ್ 2024 ಮೊದಲು ಬಾರಿಗೆ ಸಿಂಧನೂರಿನಲ್ಲಿ ದಸರಾ ಉತ್ಸವ ಆಚರಣೆ ಮಾಡುತ್ತಿದ್ದೀರಿ ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ದಸರಾ ಮಹೋತ್ಸವದ ಆಚರಣೆಗೆ ಯಾವುದೇ ಧರ್ಮ ಜಾತಿ ಇರಬಾರದು.
ಸೌಹಾರ್ದತೆ ನಡೆಗೆ ಅಂತ ಎರಡು ಕಿಲೋಮೀಟರ್ ಮೆರವಣಿಗೆ ಮಾಡಿದ್ದೀರಿ ನಮ್ಮ ಸಮಾಜದಲ್ಲಿ ನಾವು ಸೌಹಾರ್ದತೆಯಿಂದ ಬದುಕುವುದು ಅವಶ್ಯಕತೆ ಇದೆ ದಸರಾ ಹಬ್ಬ ಜಾತಿ ನೀತಿಗಳ ಮೀರಿ ನಡೆಯುವ ಹಬ್ಬವಾಗಿದೆ 9 ದಿನಗಳ ಕಾಲ ಸಿಂಧನೂರಿನಲ್ಲಿ ನಡೆಯುವ ಸಾಂಸ್ಕೃತಿಕ. ಮಹಿಳಾ ಕಲಾತಂಡ. ಡೊಳ್ಳು ಕುಣಿತ. ಹಗಲು ವೇಷಗಾರರ ಕುಣಿತ. ಯುವ ದಸರಾ.ರೈತ ದಸರಾ. 9 ದಿನಗಳ ನಡೆಯಲಿದೆ ಕೊನೆಗೆ ದಿನ ಆನೆಯ ಮೇಲೆ ಅಂಬಾದೇವಿಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ನಾನು ಈ ಬಾರಿ ಹಂಪನಗೌಡರಿಗೆ ಅದ್ದೂರಿ ದಸರಾ ಮಾಡಲು ಹೇಳಿದ್ದೇನೆ ಈ ಬಾರಿ ರಾಜ್ಯದಲ್ಲಿ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಕಾಣುತ್ತದೆ ಈ ವರ್ಷ ನಾಡಿನ ತುಂಬಾ ಸಮೃದ್ಧಿ ಕಾಣುತ್ತಿದ್ದೇವೆ ಕಲ್ಯಾಣ ಕರ್ನಾಟಕದಲ್ಲಿ ಅಸಮತೋಲನೆ ತೋಲಗಬೇಕು ಎಂದು 1 ಲಕ್ಷ 9 ಸಾವಿರ ಹುದ್ದೆಯನ್ನು ಗುರುತಿಸಿದ್ದೇವೆ 79 ಸಾವಿರ ಹುದ್ದೆಗಳು ಭರ್ತಿ ಮಾಡಿದ್ದೇವೆ.
ಈ ಭಾಗ-ಮಂಗಳೂರು- ಉಡುಪಿಯಂತೆ ಅಭಿವೃದ್ಧಿ ಆಗಬೇಕು 371 (ಜೆ) ಬಗ್ಗೆ ಸಚಿವರು ಈಗ ಮಾತನಾಡಿದ್ದಾರೆ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅವಕಾಶ ಕಲ್ಪಿಸಿ ಕೊಡುವಂತಾಗಿದ್ದು 371( ಜೆ) ಕಲಾಂ ಎಚ್. ಕೆ.ಪಾಟೀಲ್ ನೇತೃತ್ವದಲ್ಲಿ ಉಪಸಮಿತಿ ಮಾಡಿದ್ದೇವೆ ಮಲ್ಲಿಕಾರ್ಜುನ ಖರ್ಗೆ ಧರ್ಮಸಿಂಗ್ ಪ್ರಯತ್ನದಿಂದ 371 ಜೆ ಆಯ್ತು 371 ಜೆ ಹೋರಾಟಗಾರರಿಗೆ ಸನ್ಮಾನ ಮಾಡಿದ್ದೇವೆ ಖರ್ಗೆ. ಧರ್ಮಸಿಂಗ್ ರವರಿಗೆ ಗೌರವ ಸಲ್ಲಿಸಬೇಕು ಸಿಎಂ ಸಿದ್ದರಾಮಯ್ಯನವರು ಹೇಳಿದರು.
ಈ ಒಂದು ಸಂದರ್ಭದಲ್ಲಿ – ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ. ಸಚಿವ.ಎಚ್. ಕೆ.ಪಾಟೀಲ್. ಸಚಿವ ಶರಣುಪ್ರಕಾಶ್ ಪಾಟೀಲ್. ಸಚಿವ. ಬೋಸರಾಜ್. ಮಾಜಿ ಸಚಿವ ವೆಂಕಟವನಾಡಗೌಡ. ಮಾಜಿ ಸಂಸದ .ಕೆ. ವಿರುಪಾಕ್ಷಪ್ಪ ಶಾಸಕ ರಾಜಶೇಖರ್ ಇಟ್ನಾಳ್ ಹಂಪಯ್ಯ ನಾಯಕ್. ಶಾಸಕ ಅರ್. ಬಸನಗೌಡ. ಇದ್ದರು
ವರದಿ:- ಬಸವರಾಜ ಬುಕ್ಕನಹಟ್ಟಿ