ಕಾಳಗಿ :-ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಎಸ್ಐ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು ಈ ಸಂಧರ್ಭದಲ್ಲಿ ಸೂರ್ಯಕಾಂತ ನಿಂಬಳಕರ್ ಬಿಎಸ್ಐ ರಾಜ್ಯಾಧ್ಯಕ್ಷರು,ಮಾತನಾಡಿದರು,
ಜಗತ್ತಿನ ಧರ್ಮಗಳಲ್ಲಿ ವೈಜ್ಞಾನಿಕ ನೈಸರ್ಗಿಕ ತಳಹದಿಯ ಮೇಲೆ ಬೌದ್ಧ ಧರ್ಮವೊಂದೇ ಶ್ರೇಷ್ಠ ಮಾನವ ಧಮ್ಮಯಾಗಿದೆ,ಯಾಕೆಂದರೆ ಸಕಲ ಮಾನವರ ಕಲ್ಯಾಣವೇ ಈ ಧಮ್ಮದ ಗುರಿಯಾಗಿದೆ.
ಬುದ್ಧ ಧಮ್ಮ ಜಗತ್ತಿನ ಮಹಾನ ಬೆಳಕು, ಅಜ್ಞಾನದ ಕತ್ತಲೆಯಿಂದ ಮುಕ್ತರಾಗಲು ಬೌದ್ದ ಧಮ್ಮ ಬೇಕಾಗಿದೆ, ಆದ್ದರಿಂದ ಪರಿವರ್ತನೆ ಎಂಬುದು ಅಷ್ಟು ಸರಳವಾಗಿ ಬರಲು ಸಾಧ್ಯವಿಲ್ಲ, ಪರಿವರ್ತನೆಯ ಮೊದಲೇ ಹೆಜ್ಜೆ ನಮ್ಮಿಂದಲೇ ತಮ್ಮ ತಮ್ಮ ಮನೆಯಿಂದಲೇ ಪ್ರಾರಂಭಿಸಬೇಕಾಗಿದೆ, ಆದ್ದರಿಂದ ಅಕ್ಟೋಬರ್ 13 ಮತ್ತು 14ನೇ ತಾರೀಕು ದಂದು ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಕಲಬುರಗಿ ವಿಭಾಗ ಮಟ್ಟದ 68ನೇ ಧಮ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಧಮ್ಮ ಧೀಕ್ಷಾ ಸಮಾರಂಭ ನಡೆಯುತ್ತದೆ .
ಈ ಸಮಾರಂಭದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೌದ್ಧ ಧೀಕ್ಷಾ ಪಡೆದು ಪರಿಶುದ್ಧವಾದ ಬದುಕು ಕಟ್ಟಿಕೊಳ್ಳಲು ಯಶಸ್ವಿಯಾಗೋಣ ಎಂದು ಕಾಳಗಿ ತಾಲೂಕಿನ ಜನತೆಗೆ ಕರೆ ನೀಡಿದರು,ಮತ್ತು ಚಿತ್ತಾಪುರ ತಾಲೂಕಿನ ಸನ್ನತಿ ಯಲ್ಲಿರುವ ಬುದ್ಧ ವಿಹಾರದ ಕುರಿತು ಮಾತನಾಡಿದರು.
ನಂತರ ಧಮ್ಮದ ಕುರಿತು ಕಲ್ಯಾಣರಾವ್ ಡೊಣ್ಣೂರ್,ಗುರುನಂದೇಶ್ ಕೋಣಿನ್,ಭಾರತ್ ಬುಳ್ಳ ದಿನೇಶ್ ಮೋಘಾ,ಗಂಗಾಧರ್ ಮಾಡಬುಳ್ ಸಹ ಮಾತನಾಡಿದರು,ಈ ಸಂಧರ್ಭದಲ್ಲಿ,ರಾಜಕುಮಾರ ಕಪನೂರ್, ಮೈತ್ರಿ ಪೌಂಡೇಶನ್ ಅಧ್ಯಕ್ಷರಾದ ಪ್ರಕಾಶ್ ಎಮ್ ಅವರಾದಕರ್,ದೇವಿಂದ್ರ ಸಿನೂರ್, S.S.ತಾವಾಡೆ, ಸುರೇಶ ಕಾನೆಕರ್, ಬಸವರಾಜ್ ಪಾಸ್ವನ್, ರಾಜಕುಮಾರ ಕೊರಳ್ಳಿ,ಹಾಗೂ ತಾಲೂಕಿನ ಪ್ರಮುಖ ಮುಖಂಡರುಗಳು, ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.
ವರದಿ : ಹಣಮಂತ ಕುಡಹಳ್ಳಿ