ಚನ್ನಮ್ಮನ ಕಿತ್ತೂರು:-ಕಿತ್ತೂರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ.
ಗಂಡು ಮೆಟ್ಟಿನ ನಾಡು ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪ್ರಥಮ ವೀರ ರಾಣಿ ಕಿತ್ತೂರ ಚನ್ನಮ್ಮನ 200ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವದ ಪೂರ್ವ ಸಿದ್ದತೆ ಭರದಿಂದ ನಡೆದಿದೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರು ಕಿತ್ತೂರಿಗೆ ಆಗಮಿಸಿ 12.11 ಕೋಟಿ ಮೊತ್ತದ ಅರಮನೆ ಸಂರಕ್ಷಣೆ, 317 ಕೋಟಿ ಮೊತ್ತದ ಲ್ಯಾಂಡ್ ಸ್ಕೇಪಿಂಗ್, 30.50 ಕೋಟಿ ಮೊತ್ತದ ಥೀಮ್ ಪಾರ್ಕ್ ಹಾಗೂ 3.00 ಕೋಟಿ ಮೊತ್ತದಲ್ಲಿ ಚನ್ನಮ ಸ್ಮಾರಕ ಭವನದ ಮುಂದುವರೆದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ಮಾಧ್ಯಮಜವರ ಜೋತೆ ಕಂದಾಯ ಇಲಾಖೆ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಾತನಾಡಿದರು ಈ ಸಂದರ್ಭದಲ್ಲಿ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚಣ್ಣಕಿ ಮಡಿವಾಳೇಶ್ವರ ಪೂಜ್ಯ ಪಂಚಾಕ್ಷರಿ ಮಹಾಸ್ವಾಮಿಗಳು, ಶಾಸಕರಾದ ಬಾಬಾಸಾಹೇಬ ಪಾಟೀಲ, ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು. ಉಪಸ್ಥಿತರಿದ್ದರು.
ವರದಿ-ಬಸವರಾಜ ಭೀಮರಾಣಿ. ಜಗದೀಶ ಕಡೋಲಿ.




