ನಿಡಗುಂದಿ:- ತಾಲೂಕಿನ ಆಲಮಟ್ಟಿ ಡಿ ಎಸ್ ಜವಾಹರ್ ನವೋದಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಗಳು ಆಲಮಟ್ಟಿಯ ರೈಲ್ವೆ ಸ್ಟೇಷನ್ ಗೆ, ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡರು.
ಪಠ್ಯೇತರ ಚಟುವಟಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ವರ್ಷಗಳಿಂದ ಚರ್ಚೆಯಲ್ಲಿರುವ ನೋ ಬ್ಯಾಗ್ (ಬ್ಯಾಗ್‌ಲೆಸ್) ಡೇಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಶಾಲಾ ಪ್ರಭಾರಿ ಪ್ರಾಂಶುಪಾಲರಾದ ಡಿ ಪಿ ತಾಯಡೆ ಮಾತನಾಡಿ ಶಾಲೆಯಲ್ಲಿ ಯೋಗ, ಆಟ, ನೃತ್ಯ, ವ್ಯಾಯಾಮಗಳಂತಹ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಿದ್ದೇವೆ.
ಮಕ್ಕಳಿಗೆ ಬ್ಯಾಗ್ (ಬ್ಯಾಗ್‌ಲೆಸ್) ಡೇಗೆ ಪ್ರಯುಕ್ತವಾಗಿ ಆರಕ್ಷಕರ ಠಾಣೆ, ಅಂಚೆ ಕಚೇರಿ, ಹಾಗೂ ರೈಲ್ವೆ ನಿಲ್ದಾಣದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಸಹಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವೋದಯ ಶಾಲಾ ಸಿಬ್ಬಂದಿಗಳಾದ ಉತ್ಕರ್ಷ್ ತ್ರಿಪಾಠಿ, ಎಂ ತಿಪ್ಪೇಸ್ವಾಮಿ,ಮೀನು ರಾವತ್,ವಿಜಯ್ ಕುಮಾರ, ಗುರುಗಳು ಹಾಗೂ ಗುರುಮಾತೆಯರು ಹಾಜರಿದ್ದರು.
ವರದಿ :ಅಲಿ ಮಕಾನದಾರ.