Ad imageAd image

ಕರಾಳ ದಿನಾಚರಣೆಗೆ ಅವಕಾಶ ಬೇಡ ಕರವೇಯಿಂದ ಮನವಿ.

Bharath Vaibhav
ಕರಾಳ ದಿನಾಚರಣೆಗೆ ಅವಕಾಶ ಬೇಡ ಕರವೇಯಿಂದ ಮನವಿ.
WhatsApp Group Join Now
Telegram Group Join Now

ಚಿಕ್ಕೋಡಿ : –ರಾಜ್ಯೋತ್ಸವದ ದಿನದಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ಕರಾಳ ದಿನಾಚರಣೆ ಆಚರಿಸಲು ಅವಕಾಶ ಕೊಡಬಾರದೆಂದು ಕರವೇ ಯಿಂದ ಗ್ರೇಡ್ ತಹಶಿಲ್ದಾರ ಪರಮಿಳಾ ದೇಶಪಾಂಡೆಯವರಿಗೆ ಮನವಿ ಸಲ್ಲಿಸಿದರು.

ನವೆಂಬರ್ ೧ ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕನ್ನಡದ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ, ಬೆಳಗಾವಿಯಲ್ಲಿ ನಾಡದ್ರೋಹಿ ಎಂಈಎಸ್ ಕರಾಳ ದಿನಾಚರಣೆ ಆಚರಿಸುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ದ್ರೋಹ ಬಗೆಯುವ ಕರಾಳ ದಿನಾಚರಣೆಗೆ ಈ ವರ್ಷ ಯಾವುದೇ ಕಾರಣಕ್ಕೂ ಬೆಳಗಾವಿ ನಗರದಲ್ಲಿ ಅವಕಾಶ ನೀಡಬಾರದು.

ಅನುಮತಿ ನೀಡುವದಿಲ್ಲ ಎಂದು ಸುಳ್ಳು ಹೇಳಿ ಪೋಲೀಸ್ ಇಲಾಖೆಯು ಮದ್ಯರಾತ್ರಿ ಅನುಮತಿ ನೀಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ, ಅದೇ ರೀತಿ ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಕುರಿತು ನಾವು ಸರಕಾರಕ್ಕೆ ತಹಶಿಲ್ದಾರ ಮೂಲಕ ಚಿಕ್ಕೋಡಿಯ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕರವೇ ತಾಲಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಕನ್ನಡಿಗರ ಮನವಿಯನ್ನು ದಿಕ್ಕರಿಸಿದರೆ ಸರ್ಕಾರದ ವಿರುದ್ಧ ಮತ್ತು ಪೋಲೀಸ್ ಇಲಾಖೆಯ ಕನ್ನಡ ವಿರೋಧಿ ಧೋರಣೆಯ ವಿರುದ್ದ ಕರವೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.

ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಮಾಡುತ್ತೇವೆ ಎಂದು ತಮ್ಮ ಬಳಿ ಬರುವ ಎಂಇಎಸ್ ನಾಯಕರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಅವರನ್ನು ಮುಂಜಾಗ್ರತವಾಗಿ ಬಂಧಿಸುವ ಮೂಲಕ ಕನ್ನಡದ ನೆಲದಲ್ಲಿ ಕನ್ನಡದ ಹಿತ ಕಾಯಬೇಕೆಂದು ಹೇಳಿದರು.

ಈ ಸಂಧರ್ಭದಲ್ಲಿ ರಮೇಶ ಡಂಗೇರ,ಸಂತೋಷ ಪೂಜೇರಿ, ದುಂಡಪ್ಪಾ ಬಡಿಗೇರ, ಅಮೂಲ ನಾವಿ, ರುದ್ರಯ್ಯಾ ಹಿರೇಮಠ, ಕುಮಾರ ಪಾಟೀಲ, ಸೌರಭ ಹಿರೇಮಠ, ಮಂಜುನಾಥ ಬಾನಸೆ, ಚನ್ನಪ್ಪಾ ಬಡಿಗೇರ ಹಾಗೂ ಇತರ ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.

ವರದಿ ;-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!