Ad imageAd image

ಅನಾಥ ಜೀವಿಗಳಗೆ ಕರುಣೆ ಎಂಬುವ ಅನುಬಂಧದ ಪ್ರಸಾದ.! ಉಣ ಬಡಿಸಿದ ಕವಿತಾ: ಹಾಲಸ್ವಾಮಿ ದಂಪತಿಗಳು.!

Bharath Vaibhav
ಅನಾಥ ಜೀವಿಗಳಗೆ ಕರುಣೆ ಎಂಬುವ ಅನುಬಂಧದ ಪ್ರಸಾದ.! ಉಣ ಬಡಿಸಿದ ಕವಿತಾ: ಹಾಲಸ್ವಾಮಿ ದಂಪತಿಗಳು.!
WhatsApp Group Join Now
Telegram Group Join Now

ಸಿಂಧನೂರು : –ನಗರದ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್. ಹರೇಟನೂರು. ಕನಸಿನ ಕೂಸಾದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಇಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಿಕ್ಷಕ ದಂಪತಿಗಳಾದ ಕವಿತಾ ಎಸ್. ಸಿ. ಜಿ. ಎಚ್. ಪಿ. ಶಾಲೆ ರಾಜಗೊಂಡನಹಳ್ಳಿ ಅವರ ಪತಿಯಾದ ಹಾಲುಸ್ವಾಮಿ.ಎಸ್.ಆರ್. ಕಿರಿಯ ತರಬೇತಿ ಅಧಿಕಾರಿಗಳು ಐಟಿಐ ವಿದ್ಯಾಲಯ ಹೊಸಪೇಟೆ ಇವರ ಕುಟುಂಬದ ವರ್ಗದಿಂದ ‘ಕರುಣೆಯ ಅನುಬಂಧ’ ಎಂಬುವ ಕಾರ್ಯಕ್ರಮವನ್ನು ಆಶ್ರಮದಲ್ಲಿ ನೆರವೇರಿಸಿ ಆಶ್ರಮದಲ್ಲಿನ ವೃದ್ಧ ಮತ್ತು ಬುದ್ಧಿಮಾಂದ್ಯರಿಗೆ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಾಲು ಹಂಪಲುಗಳನ್ನು ವಿತರಿಸುವ ಮೂಲಕ ತಮ್ಮ ಭಕ್ತಿ ಸೇವೆಯನ್ನು ಮನಪೂರ್ವಕವಾಗಿ ನೆರವೇರಿಸಿ
ನಂತರ ಶಿಕ್ಷಕ ದಂಪತಿಗಳಾದ ಕವಿತಾ, ಮತ್ತು ಹಾಲಸ್ವಾಮಿ ಯವರು ಮಾತನಾಡಿ

ಕಾರುಣ್ಯ ಆಶ್ರಮ ಎನ್ನುವ ಕುಟುಂಬ ಈ ಒಂದು ಪುಣ್ಯಭೂಮಿಗೆ ನಾವು ಬಂದಿದ್ದು ನಮ್ಮ ಪುಣ್ಯ ಇಂತಹ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ ಆಶ್ರಮಕ್ಕೆ ಬಂದರೆ ನಮ್ಮ ಪಾಪಗಳು ಮಾಯವಾಗುತ್ತವೆ ಆಶ್ರಮದ ಗುರುಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಅವರ ಧರ್ಮ ಪತ್ನಿ ಸುಜಾತ ಹಿರೇಮಠ ಅವರು ಯಾವುದೇ ಜಾತಿ ಭೇದವಿಲ್ಲದೆ ವೃದ್ಧರನ್ನು – ಮಾನಸಿಕ ಅಸ್ತವೆಸ್ಥರನ್ನು ಒಂದೇ ತರ ತಮ್ಮ ಕುಟುಂಬದಂತೆ ನೋಡುತ್ತಾರೆ ನಿಮ್ಮ ಮಕ್ಕಳು ನಿಮ್ಮ ಬಂಧುಗಳು ನಿಮ್ಮನ್ನು ನೋಡಲಿದ್ದರೆ ಏನಂತೆ ನೀವು ಉತ್ತಮವಾದ ಸ್ಥಾನಕ್ಕೆ ಬಂದಿದ್ದೀರಿ ಚಿಂತಿ ಮಾಡಬೇಡಿರಿ ಎಂದು ಆಶ್ರಮದಲ್ಲಿ ಆಶ್ರಯ ಪಡೆದ ವೃದ್ಧರಿಗೂ ಕಿವಿಮಾತು ಹೇಳಿ ಈ ಕಾರುಣ್ಯ ದಂಪತಿಗಳಿಗೆ ದೇವರು , ಸುಖ ಶಾಂತಿ ನೆಮ್ಮದಿ ನೀಡಲಿ.

ನಾಡಿನ ಅನಾಥ ಜೀವಿಗಳಿಗೆ ನೊಂದ ಬೆಂದವರ ಬಾಳಿಗೆ ಬೆಳಕಾಗಿರುವುದು ನಮ್ಮ ನಾಡಿನ ಸಂಸ್ಕೃತಿಗೆ ಕಾರುಣ್ಯ ಆಶ್ರಮ ಮೆರವು ತಂದು ಕೊಟ್ಟಿದೆ ನಾವು ನಾಲ್ಕರು ವರ್ಷಗಳಿಂದ ಆಶ್ರಮದ ಸೇವೆ ಕಾರ್ಯಕ್ರಮವನ್ನು ಅರಿತುಕೊಂಡಿದ್ದೇವೆ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರು ತಮ್ಮ ಇಡೀ ಜೀವನವನ್ನು ಕಾರುಣ್ಯ ಕುಟುಂಬಕ್ಕೆ ಮೀಸಲಾಗಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ ಹಾಗೂ ಅವರ ಸಮಾಜ ಪರ ಕಾಳಜಿ ಇಂದ ಸಿಂಧನೂರು ಹಾಗೂ ಕಾರುಣ್ಯ ಆಶ್ರಮಕ್ಕೆ ಘನತೆ ಗೌರವ ಹೆಚ್ಚಿಸಿದೆ ಇಂತವರಿಗೆ ರಾಜ್ಯ ಪ್ರಶಸ್ತಿ ಅಲ್ಲದೆ ರಾಷ್ಟ್ರ ಪ್ರಶಸ್ತಿಗಳು ಕೊಟ್ಟಿರು ಕಮ್ಮಿನೇ ಎಂದರು.ಈ ಸಂದರ್ಭದಲ್ಲಿ ಆಶ್ರಮದ ಸಿಬ್ಬಂದಿಗಳಾದ – ಸಿದ್ದಯ್ಯ ಸ್ವಾಮಿ, ಶರಣಮ್ಮ ಮರಿಯಪ್ಪ ಇನ್ನಿತರ ಇದ್ದರು

 ವರದಿ:-  ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!