Ad imageAd image

ಉರ್ದು ಶಾಲೆ,ಭಾಷೆ ಸಮಸ್ಯೆಗಳಿಗೆ ಪರಿಹಾರಕ್ಕೆ ಶ್ರಮ- ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖಾಝಿ

Bharath Vaibhav
ಉರ್ದು ಶಾಲೆ,ಭಾಷೆ ಸಮಸ್ಯೆಗಳಿಗೆ ಪರಿಹಾರಕ್ಕೆ ಶ್ರಮ- ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖಾಝಿ
WhatsApp Group Join Now
Telegram Group Join Now

ಹುಬ್ಬಳ್ಳಿ: -ಉರ್ದು ಕಲಿಯದೆ ಜನರಿಗೆ ಉರ್ದು ಅಕಾಡೆಮಿ ತರಬೇತಿ ನೀಡುವ ಮೂಲಕ ಆ ಭಾಷೆಯ ಜ್ಞಾನ ಧಾರೆ ಎರೆಯುವುದು ಹಾಗೂ ಶಾಲೆಗಳಲ್ಲಿ ಉರ್ದು ಭಾಷೆ ಉಳಿಸಿ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮಹ್ಮದ್ ಅಲಿ ಖಾಝಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು
ಉತ್ತರ ಕರ್ನಾಟಕ ಭಾಗದಲ್ಲಿನ ಗದಗ,‌ ಹಾವೇರಿ , ಹುಬ್ಬಳ್ಳಿ ಧಾರವಾಡ ಸೇರಿದಂತೆ ಮುಂತಾದ ಭಾಗಗಳಲ್ಲಿನ ಉರ್ದು ಕವಿಗಳಿಗೆ ಪ್ರೋತ್ಸಾಹ ಹಾಗೂ ಉರ್ದು ಶಾಲೆಗಳಲ್ಲಿನ ಸಮಸ್ಯೆ ಕುರಿತು ಚರ್ಚೆ ಅದಕ್ಕೆ ಪರಿಹಾರ ಸಹಕಂಡುಕೊಳ್ಳಲಾಗುವುದು ಎಂದ ಅವರು ಕರ್ನಾಟಕ ಸರಕಾರ ಸಾಕಷ್ಟು ಪ್ರೋತ್ಸಾಹ ಉರ್ದು ಅಕಾಡೆಮಿಗೆ ಕೊಟ್ಟಿದ್ದು ಇದರ ಸದುಪಯೋಗ ಆಗಲಿ ಎಂಬುದು ನಮ್ಮ ಉದ್ದೇಶ ಎಂದರುಮ ಉರ್ದು ಭಾಷೆ,ಸಾಹಿತ್ಯ ನಶಿಸಿ ಹೋಗುವ ಕಾಲದಲ್ಲಿ ಇಂದು ಪುನರ್‌ಜನ್ಮ ಪಡೆದುಕೊಳ್ಳುತಿದ್ದು ಇದಕ್ಕೆ ಉರ್ದು ಅಕಾಡೆಮಿ ಸಾಕಷ್ಟು ಪ್ರೋತ್ಸಾಹ ಕೊಡುತ್ತದೆ ಎಂದರು.

ಉರ್ದುಭಾಷೆ ಸಾಮರಸ್ಯದ ಭಾಷೆ. ಸರ್ವಧರ್ಮೀಯರು ಮಾತನಾಡುವ ಭಾಷೆ ಆದ್ದರಿಂದ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವರದಿ :-ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!