Ad imageAd image

ನಿಪ್ಪಾಣಿ : ಶಹರ ಪೋಲಿಸ ಠಾಣೆ ಪ್ರಕಟಣೆ

Bharath Vaibhav
ನಿಪ್ಪಾಣಿ  : ಶಹರ ಪೋಲಿಸ ಠಾಣೆ ಪ್ರಕಟಣೆ
WhatsApp Group Join Now
Telegram Group Join Now

ನಿಪ್ಪಾಣಿ : ಶಹರ ಪೋಲಿಸ ಠಾಣೆ ಪ್ರಕಟಣೆ

1) ಸಾರ್ವಜನಿಕರು ವಾಕಿಂಗ್, ಹೋಗುವಾಗ ಬಂಗಾರದ ಆಭರಣಗಳನ್ನು, ಧರಿಸಿಕೊಂಡು ಹೋಗಬೇಡಿ
2) ಕತ್ತಲೆಯಲ್ಲಿ ಹಾಗೂ ನಸುಕಿನಲ್ಲಿ, ಜನರು ಓಡಾಟ ಕಡಿಮೆ ಇದ್ದ ಪ್ರದೇಶದಲ್ಲಿ ,ತಾವು ಒಬ್ಬಂಟಿಯಾಗಿ ವಾಕಿಂಗ್ ಹೋಗಬಾರದು.
3) ಸಾರ್ವಜನಿಕರು ವಾಕಿಂಗ್ ಮಾಡುತ್ತಿರುವ, ಸಮಯದಲ್ಲಿ ಸಂಶಯದ, ದ್ವಿಚಕ್ರ ವಾಹನ ಮೇಲೆ ಮಾಸ್ಕ ,ಧರಿಸಿಕೊಂಡು ಅಥವಾ ಹೆಲ್ಮೆಟ್ ಧರಿಸಿಕೊಂಡು, ಓಡಾಡುತ್ತಿದ್ದಲ್ಲಿ ಠಾಣೆಗೆ ಅಥವಾ ಇ ಆರ್ ಎಸ್ ಎಸ್,112 ಗೆ ಕರೆ ಮಾಡಬೇಕು, ಅಥವಾ ಪೋನ್ ಮಾಡಿ
4) ಯಾವುದೇ ಸ್ಥಳದಲ್ಲಿ ಅಥವಾ ,ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ, ಹೋಗುವುದು ವಾಕಿಂಗ್ ಮಾಡುವುದು ಮಾಡಬಾರದು.
5) ಜಾತ್ರೆ, ಸಂತೆ ಹಾಗೂ ಜನದಟ್ಟಣೆ, ಸ್ಥಳಗಳಲ್ಲಿ ತಮ್ಮ ಪರ್ಸ್ ,ಮೊಬೈಲ್ ಹಾಗೂ ಬೆಲೆಬಾಳುವ ,ವಸ್ತುಗಳ ಮೇಲೆ ನಿಗಾ ವಹಿಸಬೇಕು.
6) ತಮ್ಮ ಮನೆಯಲ್ಲಿ ಬಂಗಾರದ, ಆಭರಣಗಳು ಹಣ ಹಾಗೂ ಬೆಲೆಬಾಳುವ ವಸ್ತುಗಳು, ಇದ್ದಲ್ಲಿ ಅವುಗಳನ್ನು ಬ್ಯಾಂಕಿನ ಲಾಕರ್, ನಲ್ಲಿ ಇಟ್ಟುಕೊಳ್ಳುವ ವ್ಯವಸ್ಥೆ ಮಾಡತಕ್ಕದ್ದು.
7) ಇತ್ತೀಚಿನ ದಿನಗಳಲ್ಲಿ ಮನೆಗಳ, ಕಳ್ಳತನ ಹೆಚ್ಚಾಗಿದ್ದರಿಂದ ತಮ್ಮ ತಮ್ಮ, ಮನೆಯ ಮುಂದೆ ಹಾಗೂ ಬೀದಿಗಳಲ್ಲಿ ,ಸಿಸಿ ಕ್ಯಾಮರಾ ಅಳವಡಿಸ ತಕ್ಕದ್ದು.
8) ಅಪರಿಚಿತರು ಪೋಲೀಸ್ ವೇಷದಲ್ಲಿ, ಬಂದು ತಮ್ಮ ಬಂಗಾರದ ಆಭರಣಗಳನ್ನು, ಕೊಡುವಂತೆಯೂ ಹಾಗೂ ತಮ್ಮ ಪಾಕೆಟ್ ನಲ್ಲಿ, ಇಟ್ಟುಕೊಳ್ಳುವಂತೆ ಹೇಳಿ ತಮ್ಮ ,ಗಮನ ಬೇರೆ ಕಡೆ ಸೆಳೆದು ನಿಮ್ಮ ಹಣ ,ಮತ್ತು ಆಭರಣಗಳನ್ನು ದೋಚಿಕೊಳ್ಳುವ ,ಜನರು ಇರುವುದರಿಂದ ತಾವು ಎಚ್ಚರಿಕೆಯಿಂದ, ಇರಬೇಕಾಗಿ ವಿನಂತಿ.
9) ತಾವು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ,ಹಾಗೂ ಬಸ್ ಸ್ಟಾಂಡ್ ನಲ್ಲಿ, ಇರುವಾಗ ತಮ್ಮ ಆಭರಣಗಳು , ಹಣ ಹಾಗೂ ತಮ್ಮ ಮೊಬೈಲ್ ಗಳನ್ನು ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು,

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!