Ad imageAd image

ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ:ಬೆಲ್ಲದ್ ಆರೋಪ

Bharath Vaibhav
ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ:ಬೆಲ್ಲದ್  ಆರೋಪ
WhatsApp Group Join Now
Telegram Group Join Now

ಹುಬ್ಬಳ್ಳಿ: ರಾಜ್ಯದ ಎಲ್ಲ ಪ್ರತಿಯೊಂದು ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ ಎಂದು ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕರಾದ ಅರವಿಂದ ಬೆಲ್ಲದ್ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಕರ್ನಾಟಕದಲ್ಲಿ ಪ್ರಗತಿ ನಿಂತು ಹೋಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಮುಸ್ಲಿಂಮರ ತುಷ್ಟಿಕರಣವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಪಾಕಿಸ್ತಾನ ಪರ ಘೋಷಣೆ ಹಾಕಿದ ನಸೀರ್ ಅಹಮ್ಮದ್ ಬೆಂಬಲಿಗರನ್ನ ಕರೆದು ವಿಚಾರಣೆ ಮಾಡಿಲ್ಲ, ಅದೇ ಹಿಂದು ಕಾರ್ಯಕರ್ತರ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ಹರಿಹಾಯ್ದರು.

ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿಮಂತ್ರಿ ತಮ್ಮ ಜಿಲ್ಲೆಯಲ್ಲಿ ತನ್ನದೆ ಆದ ರಿಪಬ್ಲಿಕ್ ಮಾಡುತ್ತಿದ್ದಾರೆ, ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳಕರ್ ರಿಪಬ್ಲಿಕ್ ಆಗಿದೆ, ಅವರ ದೂರಾಡಳಿತ ಹೆಚ್ಚುತ್ತಿದೆ. ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘಟನಾಕಾರರನ್ನ ಗಡಿಪಾರು ಮಾಡಲು ಕಾಂಗ್ರೆಸ್ ನಾಯಕರೇ ದೊಡ್ಡ ಲಿಸ್ಟ್‌ ಮಾಡಿದ್ದಾರೆ. ಟೆರರ್ ಕ್ರಿಯಟ್ ಮಾಡುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ ಎಂದರು.

ಹುಬ್ಬಳ್ಳಿ- ಧಾರವಾಡದಲ್ಲಿ ಪೊಲೀಸರಿಗೆ ಯಾರು ಹೇಳುವವರು ಇಲ್ಲದಂತಾಗಿದೆ, ಇಂದಿರಾಗಾಂಧಿ ಸಮಯದಲ್ಲಿ ಎಮರ್ಜೆನ್ಸಿಯಲ್ಲಿ ಇದ್ದ ದೇಶ ಇದಲ್ಲ, ಹಿಂದು ಕಾರ್ಯಕರ್ತರನ್ನ ಟಾರ್ಗೆಟ್ ಮಾಡುವ ಕೆಲಸವನ್ನ ನಿಲ್ಲಿಸಬೇಕು ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.

ವರದಿ:ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!