Ad imageAd image

ಕ್ರಿಕೆಟ್ ಸಂಬಂಧಿ ಕಾಲ್ತುಳಿತ: ಅಭಿಮಾನ ಅತಿರೇಕವಾಗದಿರಲಿ

Bharath Vaibhav
ಕ್ರಿಕೆಟ್ ಸಂಬಂಧಿ ಕಾಲ್ತುಳಿತ: ಅಭಿಮಾನ ಅತಿರೇಕವಾಗದಿರಲಿ
WhatsApp Group Join Now
Telegram Group Join Now

ಕ್ರಿಕೆಟ್ ಗೆದ್ದಾಗ, ಸೋತಾಗ ನಡೆಯುವ ದುರ್ಘಟನೆಗಳು ಇಂದು ನಿನ್ನೆಯದಲ್ಲ. ಹಾಗೇ ನೋಡಿದರೆ ಕ್ರಿಕೆಟ್ ಗೆದ್ದಾಗ,ಸೋತಾ ನಡೆಯುವ ಹುಚ್ಚಾಟ ಈಚೆಗೆ ಸ್ವಲ್ವ ಕಡಿಮೆಯಾಗಿತ್ತು. ಆದರೆ ಆರ್ ಸಿಬಿಯ ಕಪ್ ಬರ ತೀರಿದಾಗ ಈ ದುರ್ಘಟನೆ ಮತ್ತೇ ಸಂಭವಿಸಿದ್ದು, ತೀರಾ ಅನಾವಶ್ಯಕ.

ಆಟಗಳಲ್ಲಿನ ಸೋಲು, ಗೆಲುವು ದುರ್ಘಟನೆಗಳಿಗೆ ಕಾರಣವಾದ ಉದಾಹರಣೆಗಳು ಬರೀ ಭಾರತದಲ್ಲಿ ಮಾತ್ರವಲ್ಲ. ಈಡೀ ಜಗತ್ತಿನ ಎಲ್ಲ ಪ್ರದೇಶಗಳಲ್ಲಿ ನಡೆದಿವೆ. ಕ್ರಿಕೆಟ್ ಗಿಂತ ಹೆಚ್ಚಾಗಿ ಫುಟ್ ಬಾಲ್ ಸೋಲು, ಗೆಲುವಿನ ನಂತರ ದೊಡ್ಡ ದೊಡ್ಡ ದುರ್ಘಟನೆಗಳು ನಡೆಯುತ್ತಿದ್ದವು.

ಫುಟ್ ಬಾಲ್ ವಿಶ್ವಕಪ್ ಸೋತಾಗ ಗೆದ್ದಾಗ, ಇಂತಹುದೇ ಹುಚ್ಚಾಟಗಳಿಗೆ ನೂರಾರು ಸಾವುಗಳಾದ ಘಟನೆಗಳು  ನಡೆದಿವೆ. ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡ ಸೋತಾಗ, ಪಾಕಿಸ್ತಾನ ತಂಡ ಸೋತಾಗ ಆ ತಂಡ ದೇಶಕ್ಕೆ ಮರಳದಂತಹ ಘಟನೆಗಳು ನಡೆದಿವೆ.

ತಮ್ಮ ತಂಡ ಗೆಲ್ಲಬೇಕೆಂಬ ಭಾವನೆ ಇರುವುದು, ಅಭಿಮಾನ ಸ್ವಾಭಾವಿಕ. ಆದರೆ ಅಭಿಮಾನ ಅತಿರೇಕಕ್ಕೆ ಹೋಗಬಾರದು. ತಮ್ಮ ತಂಡ ಗೆದ್ದಿದೆಯೋ ಖುಷಿಯಾಗಿದೆಯೋ ಮನೆಯಲ್ಲಿದ್ದು, ಸಂಭ್ರಮ ಆಚರಿಸಬೇಕು. ಎಲ್ಲರೂ ಒಂದೇ ಕಡೆ ಸೇರಿದರೆ ಕಾಲ್ತುಳಿತ, ಗದ್ದಲ ಆಗುವುದು ಸಾಮಾನ್ಯ ತಾನೇ.   ಕ್ರಿಕೆಟ್ ಮೇಲಿನ ಅತಿರೇಕ ಅಭಿಮಾನದಿಂದ ಹಡೆದ ತಂದೆ, ತಾಯಿಗೆ, ಹೆಂಡತಿಗೆ, ಗಂಡನಿಗೆ ನೋವು ತರುವುದಾದರೆ ಅಂತಹ ಅತಿರೇಕದ ಅಭಿಮಾನ ಬೇಕೇ?

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!