Ad imageAd image

ಯೋಗಾಸನ ಕಟ್ಟೆ ಉದ್ಘಾಟನೆ : ಶಾಸಕ ಲಕ್ಷ್ಮಣ ಸವದಿ

Bharath Vaibhav
ಯೋಗಾಸನ ಕಟ್ಟೆ ಉದ್ಘಾಟನೆ : ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now

ಅಥಣಿ :  ಕರ್ನಾಟಕ ಸರಕಾರ ಅರಣ್ಯ ಇಲಾಖೆ, ಬೆಳಗಾವಿ ವೃತ್ತ, ಬೆಳಗಾವಿ ಘಟಪ್ರಭಾ ವಿಭಾಗ ಗೋಕಾಕ ಪ್ರಾದೇಶಿಕ ಅರಣ್ಯ ವಲಯ ಅಥಣಿ ಅರಣ್ಯ ಮಕ್ಕಳ ಉದ್ಯಾನವನದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ನಿರ್ಮಿಸಲಾದ ಯೋಗಾಸನ ಕಟ್ಟೆ ಉದ್ಘಾಟನೆ ಸಮಾರಂಭ ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗೆ ನೀರು ಉನಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಬದುಕಿಗೆ ಯೋಗ ಮತ್ತು ಪರಿಸರ ಎರಡು ಬಹುಮುಖ್ಯ ಅಂಗಗಳಾಗಿವೆ.ಕೇವಲ ಪರಿಸರ ದಿನಕ್ಕೆ ಮಾತ್ರ ಆಚರಣೆ ಸೀಮಿತವಾಗದೆ ಸಂಪೂರ್ಣ ಮಕ್ಕಳ ಉದ್ಯಾನವನದ ಅಭಿವೃದ್ಧಿಗೆ ಒತ್ತು ನೀಡಿ ಸುಂದರ ವನವನಾಗಿ ರೂಪಿಸಬೇಕೆಂದು ಕರೆ ನೀಡಿದರು. ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವಂತೆ ಸಲಹೆ ನೀಡಿದರು. ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ 5 ಲಕ್ಷ ರೂ ಅನುದಾನ ನೀಡಿದ್ದು ಹಾಗೂ ಇದೆ ಸ್ಥಳದಲ್ಲಿ ಬರುವ ದಿನಗಳಲ್ಲಿ ಸುಂದರವಾದ ಗಾಜಿನ ಮನೆ ನಿರ್ಮಿಸಿ ಯೋಗ ಹಾಗೂ ವಾಯು ವಿಹಾರ ಮಾಡುವವರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿವಯೋಗಿ ಯೋಗ ಬಳಗದ ಸದಸ್ಯರಿಂದ ಶಾಸಕ ಲಕ್ಷ್ಮಣ ಸವದಿಯವರಿಗೆ ಸತ್ಕರಿಸಿದರು.

ಈ ವೇಳೆ ತಹಶಿಲ್ದಾರ ಸಿದ್ದರಾಯ ಬೋಸಗಿ , ಪುರಸಭೆ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ,ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ , ಪ್ರಾದೇಶಿಕ ಅರಣ್ಯ ಇಲಾಖೆ ವಲಯ ಅಧಿಕಾರಿ ರಾಕೇಶ ಅರ್ಜುನವಾಡ , ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ್, ಸಾಮಾಜೀಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ, ಮುಖಂಡರಾದ ರಾಮನಗೌಡಾ ಧರಿಗೌಡ ,ಅಧಿಕಾರಿಗಳಾದ ಎಸ್.ಎಮ್.ಮುಂಜೆ, ಮಂಜುನಾಥ ಪಾಟೀಲ, ಪರಶುರಾಮ ಪಾಟೀಲ,ಪುರಸಭೆ ಸದಸ್ಯರಾದ ರಾಜಶೇಖರ ಗುಡ್ಡೋಡಗಿ,ಬಸವರಾಜ್ ಪಾಟೀಲ್, ರಾಜೇಶ ಪಾಟೀಲ,ಮಾರುತಿ ಸತ್ತಿಗೌಡರ, ಡಿ.ಡಿ.ಮೆಕನಮರಡಿ, ಸಂಗಮೇಶ ಹಚ್ಚಡದ, ಚಿಕ್ಕೋಡಿ ಯೋಗ ಪ್ರಭಾರಿ ಶಿವಾನಂದ ಮಾಲಗಾವಿ, ಯೋಗ ಶಿಕ್ಷಕರಾದ ಶ್ರೀಶೈಲ ಪಾಟೀಲ್,ಅಪ್ಪಾಸಾಹೇಬ ತಾoಬಟ ಶಿವಯೋಗಿ ಯೋಗ ಬಳಗದ ಎಸ್ ಎಸ್ ಗೊರಜನಾಳ, ಸಂಜಯ ಕಾಳೆ, ಎಸ್ ಎನ್ ನಾಗನೂರ, ನಾರಾಯಣ ಘೋರ್ಪಡೆ ಇತರರು ಸೇರಿದಂತೆ ಶಿವಯೋಗಿ ಯೋಗ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ : ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!