Ad imageAd image

ಎಚ್. ಆಂಜನೇಯ ಅವರನ್ನು ಎಂಎಲ್ ಸಿ ಮಾಡಿ ಸಚಿವರನ್ನಾಗಿ ಮಾಡಲು ಮನವಿ

Bharath Vaibhav
ಎಚ್. ಆಂಜನೇಯ ಅವರನ್ನು ಎಂಎಲ್ ಸಿ ಮಾಡಿ ಸಚಿವರನ್ನಾಗಿ ಮಾಡಲು ಮನವಿ
WhatsApp Group Join Now
Telegram Group Join Now

ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ ಮಾದಿಗ ದಂಡೋರ

               —ಯಾದಗಿರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಮಾದಿಗ ದಂಡೋರ ರಾಜ್ಯದ್ಯಕ್ಷ ಬಿ. ನರಸಪ್ಪ |

                —ಯಾದಗಿರಿ ಸಮೀತಿ ಯಿಂದ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಕೆ 

                —-ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ  ಆಗ್ರಹಿಸಿ ಮನವಿ

ಯಾದಗಿರಿ: ಒಳ ಮೀಸಲಾತಿ ವಿಷಯದಲ್ಲಿ ಸರ್ಕಾರ ಹೊಡಿಸಿದ ಜಾತಿಗಳು, ಜಾತಿ ಸಮೀಕ್ಷೆಯಲ್ಲಿ ಅಧಿಕಾರಿಗಳು ರಾಜಧಾನಿ ಬೆಂಗಳೂರು ನಗರ, ಪಟ್ಟಣ ನಗರ ಸಭೆಗಳಲ್ಲಿ ಜಾತಿ ಸಮೀಕ್ಷೆಯಲ್ಲಿ ಅಧಿಕಾರಿಗಳು ಭಾಗವಹಿಸಿದೆ ನಿರ್ಲಕ್ಷ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು.

ಒಳ ಮೀಸಲಾತಿಯನ್ನು ಅತಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾತಿ ಸಮೀಕ್ಷೆ ನಡೆಸಿ ಜಾರಿಗೊಳಿಸಬೇಕು ಕಾಟಾಚಾರಕ್ಕೆ ಸಮೀಕ್ಷೆ ಮಾಡದೆ ಸರಿಯಾದ ರೀತಿಯಲ್ಲಿ ಬಂದಂತ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ಕೊಟ್ಟು ಮಾದಿಗರಿಗೆ ಬರುವಂತ ಪಾಲನ್ನು ಸರಿ ಸಮಾನವಾಗಿ ಹಂಚಿಕೊಡುತ್ತಾರೆ ಎಂದು ನಮಗೆ ಈ ಸರಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದಗ ನಾಡಿನ ಮುಖ್ಯಮಂತ್ರಿಗಳು ಜಾರಿಗೆ ಮಾಡೇ ಮೂಡುತ್ತೇನೆ ಎಂದು ಯಾದಗಿರಿ ಯಲ್ಲಿ ಮಾದಿಗ ದಂಡೋರ ಪದಾಧಿಕಾರಿಗಳಿಗೆ ಭರವಸೆ ಕೊಟ್ಟರು

ದೇಶದ ರಾಜಧಾನಿಯಲ್ಲಿ ಒಳ ಮೀಸಲಾತಿಯನ್ನು ಅತಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾತಿ ಸಮೀಕ್ಷೆ ನಡೆಸಿ ಜಾರಿಗೊಳಿಸಬೇಕು, ದೇಶದ ರಾಜಧಾನಿ ವಿಧಾನಸೌಧದ ಆವರಣದಲ್ಲಿ ಶಿವಶರಣ ಮಾದಾರ ಚೆನ್ನಯ್ಯನ ಕಂಚಿನ ಪುತ್ಥಳಿ ಅನಾವರಣ ಮಾಡಬೇಕು, ಗುಲ್ಬರ್ಗ ವಿಮಾನ ನಿಲ್ದಾಣಕ್ಕೆ ದೇಶದ ಮಾಜಿ ಉಪ ಪ್ರಧಾನಿ ಮಂತ್ರಿ ಡಾ.ಬಾಬು ಜಗಜೀವನ್‌ ರಾಮ್ ಹೆಸರನ್ನು ನಾಮಕರಣ ಯಾದಗಿರಿ ಜಿಲ್ಲೆಯ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಬಾಬು ಜಗಜೀವನ್ ರಾಮ್ ರವರ ಪುತ್ತಳಿಯನ್ನು ಅನಾವರಣಗೊಳಿಸುವುದು, ಸಮುದಾಯದ ಕಾಂಗ್ರೆಸ್ ಪಕ್ಷದ ಕಟ್ಟ ಅಭಿಮಾನಿ ಮಾಜಿ ಸಚಿವ ಎಚ್‌. ಆಂಜನೇಯ ರವರನ್ನು MLC ಆಯ್ಕೆ ಮಾಡಿ ಮಂತ್ರಿ ಸ್ಥಾನವನ್ನು ಕೊಡಬೇಕೆಂದು ಯಾದಗಿರಿ ಜಿಲ್ಲೆಯ ಮಾದಿಗ ದಂಡೋರ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಅವರ ಸ್ವಂತ ರಕ್ತದಲ್ಲಿ ಪತ್ರ ಬರೆದು ನಾಡಿನ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡುರು .

ಯಾದಗಿರಿ ಜಿಲ್ಲೆಯ ಪಕ್ಷದ ನಿಷ್ಠಾವಂತ ಗಣೇಶ್ ದುಪ್ಪಲ್ ರವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡುವುದು, ಗುರುಮಾಠಕಲ್ ತಾಲೂಕ ಘೋಷಣೆಯಾಗಿ ಅನೇಕ ವರ್ಷಗಳು ಕಳೆದರೂ ಕೂಡ ತಾಲೂಕಿಗೆ ಸಂಬಂಧಿಸಿದಂತೆ ಅನೇಕ ಕಚೇರಿಗಳಿಲ್ಲದೆ ಗುರುಮಾಠಕಲ್ ತಾಲೂಕಿನ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ ಆದಷ್ಟು ಬೇಗನೆ ಎಚ್ಚೆತ್ತುಕೊಂಡು ಸಂಬಂಧಪಟ್ಟಿ ಇಲಾಖೆಗಳನ್ನು ತಾಲೂಕಗೆ ಕೊಡಬೇಕೆಂದು ಮನವಿ ಮಾಡಿದ ಮಾದಿಗ ದಂಡೋರ ಜಿಲ್ಲೆಯಲ್ಲಿ ಕಡೇಚೂರು ಕೆಮಿಕಲ್ ಫ್ಯಾಕ್ಟರಿ ಯನ್ನು ಸಂಪೂರ್ಣ ಬಂದ್ ಮಾಡಿ ಅಲ್ಲಿನ ಜನರಿಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷರು ಕಾಶಪ್ಪ ಮಾದಿಗ ಹೆಗ್ಗಣಗೇರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ನಡುಮನೆ, ಮಲು ಬೆಳಗೇರಾ, ರವಿ ಬುರನೋಳ್ ತಾಲೂಕು ಅಧ್ಯಕ್ಷ ಗುರುಮಾಠಕಲ್ ಮಲ್ಲಿಕಾರ್ಜುನ ಗ್ರಾಮ ಘಟಕ ಅಧ್ಯಕ್ಷ ತಿಪಣ್ಣ ತಾಲೂಕು ಉಪಾಧ್ಯಕ್ಷರು ಮತ್ತು ಇನ್ನು ಅನೇಕ ಮಾದಿಗ ದಂಡೋರ ಪದಾಧಿಕಾರಿಗಳು ಭಾಗಿಯಾಗಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!