Ad imageAd image

ಶೀಘ್ರದಲ್ಲಿಯೇ ಸದಲಗಾ ಕೇಂದ್ರೀಯ ಮಹಾವಿದ್ಯಾಲಯ ಉದ್ಘಾಟನೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರಿಂದ ಮಾಹಿತಿ.

Bharath Vaibhav
ಶೀಘ್ರದಲ್ಲಿಯೇ ಸದಲಗಾ ಕೇಂದ್ರೀಯ ಮಹಾವಿದ್ಯಾಲಯ ಉದ್ಘಾಟನೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರಿಂದ ಮಾಹಿತಿ.
WhatsApp Group Join Now
Telegram Group Join Now

ನಿಪ್ಪಾಣಿ :  ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಅವರು ನೇತೃತ್ವದಲ್ಲಿ ಬರೋಬ್ಬರಿ 27 ಕೋಟಿ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಾಗೂ 8 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ತಾಂತ್ರಿಕ ಸುಸಜ್ಜಿತ ಹಾಗೂ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಸದಲಗಾ ಪಟ್ಟಣದ ಕೇಂದ್ರೀಯ ವಿದ್ಯಾಲಯ ಉದ್ಘಾಟನೆ ಸಮಾರಂಭ ಅತಿ ಶೀಘ್ರದಲ್ಲಿಯೇ ನಡೆಯಲಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ಪ್ರಾಂಶುಪಾಲ ಹೇಮಂತ್ ಚೌಹಾನ್ ಬಿವಿ ಫೈವ್ ನ್ಯೂಸ್ ವರದಿಗಾರರಿಗೆ ತಿಳಿಸಿದರು.

ಕೇಂದ್ರೀಯ ವಿದ್ಯಾಲಯದ ಕುರಿತು ಅಧಿಕ ಮಾಹಿತಿ ನೀಡಿದ ಅವರು ಮೂರು ಅಂತಸ್ತಿನ ನೂತನ ಕಟ್ಟಡವು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಗುಣಮಟ್ಟದ ಶಿಕ್ಷಣ ಒದಗಿಸಲು ಸಜ್ಜಾಗಿದೆ. 20 ಹೈಟೆಕ್ ತರಬೇತಿ ಕೊಠಡಿಗಳು ಪ್ರತ್ಯೇಕ ವಿಜ್ಞಾನ, ಗಣಿತ, ಮತ್ತು ಸಾಮಾಜಿಕ ವಿಜ್ಞಾನಗಳ ಪ್ರಯೋಗಾಲಯಗಳು ಲಭ್ಯವಿದ್ದು, ಇದರ ಜೊತೆಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಹೈಟೆಕ್ ಗ್ರಂಥಾಲಯ ಆರ್ಟ್ ಗ್ಯಾಲರಿ ಹಾಗೂ ಈ ಕ್ಲಾಸ್ ಸೌಲಭ್ಯಗಳೊಂದಿಗೆ ತಾಂತ್ರಿಕವಾಗಿ ಆಧುನಿಕತೆಗೆ ಒತ್ತು ನೀಡಲಾಗಿದೆ.

ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಅಭಿವೃದ್ಧಿಗೆ ವಿಶಾಲ ಕ್ರೀಡಾ ಮೈದಾನ, ಮಕ್ಕಳ ಪಾರ್ಕ್ ಶಿಕ್ಷಕರಿಗಾಗಿ ವಸತಿ ಗ್ರಹ, ಸಹ ಎಲ್ಲ ಸೌಲಭ್ಯಗಳನ್ನು ನೀಡುವುದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಏಕೈಕ ವಿದ್ಯಾಲಯವಾಗಿದ್ದು 1ರಿಂದ 9ನೇ ತರಗತಿವರೆಗೆ 262 ವಿದ್ಯಾರ್ಥಿಗಳು 24 ಶಿಕ್ಷಕರ ತಂಡ ಕಾರ್ಯೋನ್ಮುಖವಾಗುತ್ತಿರುವುದಾಗಿ ತಿಳಿಸಿ ಅತೀ ಶೀಘ್ರದಲ್ಲಿಯೇ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ವಿದ್ಯಾಲಯದ ಉದ್ಘಾಟನೆಯಾಗಲಿದೆ ಎಂದರು.

ವರದಿ : ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!