ವಿಜಯಪುರ: ಗೋಳಗುಮ್ಮಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದು ಕಳ್ಳಬಟ್ಟಿ ಮದ್ಯ ಕೋಶಕ್ಕೆ ಪಡೆದಿದ್ದಾರೆ. ವಿಜಯಪುರ ನಗರದ ಗೋಳಗುಮ್ಮಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಖಚಿತ ಮಾಹಿತಿ ಆಧರಿಸಿ ಗೋಳಗುಮ್ಮಟ್ ಹಾಗೂ ಜಲನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ವಶ ಪಡೆಸಿಕೊಂಡಿದ್ದಾರೆ.
ಈ ಕಳ್ಳಬಟ್ಟಿ ಮದ್ಯವನ್ನು ಕೊಡ, ನೀರಿನ ಬಾಟಲ್ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಗೋಳಗುಮ್ಮಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
ವರದಿ: ರಾಜು ಮುಂಡೆ




