ರೋಣ ಪುರಸಭೆ ಅದ್ಯಕ್ಷ ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆಯಾಗಿ ಕಾಂಗ್ರೆಸ್ ಮಡಿಲಿಗೆ ಅದ್ಯಕ್ಷರಾಗಿ ಬಸಮ್ಮ ಕೊಪ್ಪದ ಉಪಾಧ್ಯಕ್ಷರಾಗಿ ಹನಮಂತ ತಳ್ಳಿಕೇರಿ ನೇಮಕ
ರೋಣ: ಪುರಸಭೆ ಅದ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿದ ಹಿನ್ನಲೆಯಲ್ಲಿ ಅದ್ಯಕ್ಷರಾಗಿ ಬಸಮ್ಮ ಕೊಪ್ಪದ ಉಪಾಧ್ಯಕ್ಷರಾಗಿ ಹನಮಂತ ತಳ್ಳಿಕೇರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿರುತ್ತಾರೆ.
ಅದ್ಯಕ್ಷಸ್ಥಾನ ಅಧಿಕಾರ ವಹಿಸಕೊಂಡ ನಂತರ ಮಾತನಾಡಿದ ಅವರು ಪುರಸಭೆ ವ್ಯಪ್ತಿಯ ಎಲ್ಲಾ ವಾರ್ಡಗಳ ಅಭಿವೃದ್ಧಿಗೆ ಸದಾ ಪ್ರಯತ್ನಿಸುವುದಾಗಿ ಹಾಗೂ ಮೂಲಭೂತ ಸೌಕರ್ಯ ಕುಡಿಯುವ ನೀರು ಪುರೖಕೆ ಸಾರ್ವಜನಿಕರ ಸೇವೆ ನೀಡುವುದಾಗಿ ಅವಿರೋಧವಾಗಿ ಆಯ್ಕೆಯಾದ ಅದ್ಯಕ್ಷರು ಉಪಾಧ್ಯಕ್ಷರು ಭರವಸೆ ನೀಡಿದರು.
ಬಹುತೇಕವಾಗಿ ರೋಣ ಪುರಸಭೆಯ ಅದ್ಯಕ್ಷ -ಉಪಾಧ್ಯಕ್ಷ ನ್ಥಾನವು ಕಾಂಗ್ರೆಸ್ ಮಡಿಲಿಗೆ ಸೇರಿರುತ್ತದೆ.

ಈ ಸಂಧರ್ಭದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರು ಗ್ಯಾರಂಟಿ ಸಮಿತಿಯ ಅದ್ಯಕ್ಷ ಮಿಥುನ ಪಾಟೀಲ, ಸದ್ಯಸರಾದ ಮಲಯ್ಯ ಮಹಾಪುರಷಮಠ, ಗದಿಗೇಪ್ಪ ಕಿರೇಸೂರ, ದುರಗಪ್ಪ ಹಿರೇಮನಿ,ಗೀತಾ ಮಾಡಲಗೇರಿ,ವಿದ್ಯಾ ದೊಡ್ಡಮನಿ,ರಂಗಮ್ಮ ಭಜಿಂತ್ರಿ,ಬಾವಾಸಾಹೇಬ ಬೇಟಗೆರಿ,ಸಂಗಪ್ಪ ಜಿಡ್ಡಿಬಾಗಿಲ,ಪುರಸಭೆ ಮುಖ್ಯಧಿಕಾರಿ ರಮೇಶ ಹೊಸಮನಿ,ಸೇರಿದಂತೆ ಸಿಬ್ಬಂದಿಗಳು ಹಾಗೂ ನಗರದ ಗುರು- ಹಿರಿಯರು ಇದ್ದರು ಚುನಾವಣೆ ಅಧಿಕಾರಿಗಳಾಗಿ ರೋಣ ತಾಲೂಕ ದಂಡಾಧಿಕಾರಿ ನಾಗರಾಜ್ ಕೆ ಕಾರ್ಯನಿರ್ವಾಹಿಸಿದರು.




